ಬೆಂಗಳೂರು: ರಾಜ್ಯೋತ್ಸವಕ್ಕೂ ಮುಂಚಿತವಾಗಿ ಬೆಂಗಳೂರು ಮಹಾನಗರ ಪಾಲಿಕೆ( ಬಿಬಿಎಂಪಿ) ನಗರದಲ್ಲಿ ನಾಮಫಲಕಗಳು ಕನ್ನಡದಲ್ಲಿರಬೇಕೆಂದು ಕಟ್ಟು ನಿಟ್ಟಿನ ಆದೇಶವನ್ನು ಜಾರಿ ಮಾಡಿದೆ.
ನಗರದಲ್ಲಿ ಪರ ಭಾಷೆಗಳ ಹಾವಳಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಈಗ ಪಾಲಿಕೆ ಕನ್ನಡಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಈಗ ಮುಂಬರುವ ನವಂಬರ್ ೧ ರ ರಾಜ್ಯೋತ್ಸಕ್ಕೂ ಮುನ್ನ ಕನ್ನಡ ನಾಮಫಲಕವನ್ನು ಕಡ್ಡಾಯಗೊಳಿಸುವ ಕ್ರಮಕ್ಕೆ ಮುಂದಾಗಿದೆ.
ಬಿಬಿಎಂಪಿ ಆದೇಶದ ಪ್ರಕಾರ ಕನಿಷ್ಠ ಶೇ 60 ರಷ್ಟು ನಾಮಫಲಕಗಳು ಕನ್ನಡದಲ್ಲಿರಬೇಕು ಎಂದು ಸೂಚಿಸಲಾಗಿದೆ. ಈ ಹಿನ್ನಲೆಯಲ್ಲಿ ಎಲ್ಲಾ ಹೋಟೆಲ್ ಹಾಗೂ ಅಂಗಡಿ ಮುಗ್ಗಟ್ಟುಗಳು ಇನ್ನು ಮುಂದೆ ಕನ್ನಡ ನಾಮಫಲಕಗಳನ್ನು ಹೊಂದುವುದು ಕಡ್ಡಾಯ ಎನ್ನಲಾಗಿದೆ. ಒಂದು ವೇಳೆ ನಿಯಮವನ್ನು ಉಲ್ಲಂಘಿಸಿದ್ದೆ ಆದಲ್ಲಿ ಅಂಗಡಿಗಳ ಲೈಸನ್ಸ್ ರದ್ದು ಮಾಡಲಾಗುವುದು ಎಂದು ನೂತನ ಆದೇಶದಲ್ಲಿ ಹೇಳಲಾಗಿದೆ.