ಮೆಕ್ಸಿಕೊ: ಇಲ್ಲಿನ ಮೈಕೋವಕಾನ್ನಲ್ಲಿ ದುಷ್ಕರ್ಮಿಗಳ ಸಂಚು ರೂಪಿಸಿ 14 ಪೊಲೀಸರನ್ನು ಹತ್ಯೆಗೈದಿರುವ ಘಟನೆ ನಡೆದಿದೆ.
ಭದ್ರತಾ ಮತ್ತು ನಾಗರಿಕ ಸಂರಕ್ಷಣಾ ಸಚಿವಾಲಯದ ಪ್ರಕಾರ, ಅಗುಯಿಲ್ಲಾ ಪುರಸಭೆಯಲ್ಲಿ ಸಶಸ್ತ್ರ ಜನರ ಗುಂಪುಗಳು ಸಂಚು ರೂಪಿಸಿ 14 ಪೊಲೀಸ್ ಅಧಿಕಾರಿಗಳನ್ನು ಕೊಲೆ ಮಾಡಿರುವುದಾಗಿ ಸ್ಪುಟ್ನಿಕ್ ವರದಿ ಮಾಡಿದೆ.
ಆರೋಪಿಗಳ ಪತ್ತೆಗಾಗಿ ಭದ್ರತೆ ಮತ್ತು ನಾಗರಿಕ ರಕ್ಷಣಾ ಸಚಿವಾಲಯ ತನ್ನ ಎಲ್ಲ ಸಂಪನ್ಮೂಲಗಳನ್ನು ವಿನಿಯೋಗಿಸುತ್ತಿದೆ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.
ಪೊಲೀಸ್ ಅಧಿಕಾರಿಗಳು ಮತ್ತು ರಾಜ್ಯ ಸೈನಿಕರ ಹತ್ಯೆಗೆ ಸಂಬಂಧಿಸಿದಂತೆ ತಪ್ಪಿತಸ್ಥರು ಯಾರೇ ಆಗಿದ್ದರೂ ಶಿಕ್ಷೆ ನೀಡಲಾಗುವುದು ಎಂದು ಮೈಕೋವಕಾನ್ ಗವರ್ನರ್ ಸಿಲ್ವಾನೋ ಆರಿಯೊಲ್ಸ್ ಕೊನೆಜೊ ಹೇಳಿದ್ದಾರೆ.
ಆದರೆ, ರಾಜ್ಯ ಅಟಾರ್ನಿ ಜನರಲ್ ಕಚೇರಿಯು ಈ ಬಗ್ಗೆ ಖಚಿತ ಮಾಹಿತಿ ನೀಡುವವರೆಗೆ ಸಾವಿನ ಸಂಖ್ಯೆಯನ್ನು ನಿರ್ದಿಷ್ಟಪಡಿಸಲು ಗವರ್ನರ್ ನಿರಾಕರಿಸಿದ್ದಾರೆ.