CSK CEO Kasi Viswanathan on Captaincy: ಇನ್ನೇನು 9 ದಿನಗಳಷ್ಟೇ ಬಾಕಿ… ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಐಪಿಎಲ್ ಬಂದೇ ಬಿಡ್ತು. ಆದರೆ ಅನೇಕರ ಪ್ರಕಾರ, ಈ ಸೀಸನ್ ಎಂಎಸ್ ಧೋನಿ ಅವರಿಗೆ ಕೊನೆಯ ಆಟವಾಗಿದ್ದು ಅದಾದ ನಂತರ ನಿವೃತ್ತಿ ಘೋಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಆದರೆ ಧೋನಿ ಈಗಾಗಲೇ ಮೊಣಕಾಲಿನ ತೊಂದರೆಯನ್ನು ಅನುಭವಿಸುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ಪಂದ್ಯ ಆಡುವುದೇ ಅನುಮಾನ ಎನ್ನಲಾಗುತ್ತಿದೆ.
ಇದನ್ನೂ ಓದಿ: IPL ಆರಂಭಕ್ಕೂ ಮುನ್ನ ಬದಲಾಯ್ತು Royal Challengers Bangalore ಹೆಸರು: ಇನ್ಮುಂದೆ ಹೀಗಿರಲಿದೆ RCB ಪೂರ್ಣ ‘ಅರ್ಥ’!
ಈ ವರ್ಷ ಜುಲೈನಲ್ಲಿ ಧೋನಿಗೆ 43 ವರ್ಷ ತುಂಬುತ್ತದೆ. ಹೀಗಿರುವಾಗ IPL 2024ರ ಸಂಪೂರ್ಣ ಸೀಸನ್’ನಲ್ಲಿ ಆಡುತ್ತಾರಾ? ಅಥವಾ ಮಧ್ಯೆ ನಿವೃತ್ತಿ ಘೋಷಿಸುತ್ತಾರಾ? ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಒಂದು ವೇಳೆ ನಿವೃತ್ತಿ ಘೋಷಿಸಿದಲ್ಲಿ, ಹೊಸ ನಾಯಕನನ್ನು ಹುಡುಕುವುದು ಚೆನ್ನೈ ತಂಡಕ್ಕೆ ಅನಿವಾರ್ಯವಾಗುತ್ತದೆ.
2022ರಲ್ಲಿ, ಲೀಗ್ ಪ್ರಾರಂಭವಾಗುವ ಮೊದಲು ರವೀಂದ್ರ ಜಡೇಜಾ ಅವರನ್ನು ನಾಯಕರಾಗಿ ಹೆಸರಿಸಲಾಯಿತು. ಆದರೆ, ಬ್ಯಾಕ್ ಟು ಬ್ಯಾಕ್ ಸೋಲಿನ ನಂತರ ಮತ್ತೆ ಧೋನಿಯನ್ನು ತಂಡದ ನಾಯಕನಾಗಿ ಮರುನಾಮಕರಣ ಮಾಡಲಾಯಿತು.
ಇದೀಗ CSK ಸಿಇಒ ಕಾಸಿ ವಿಶ್ವನಾಥನ್ ಅವರು ಧೋನಿ ನಿವೃತ್ತಿ ನಂತರ ಯಾರು ತಂಡವನ್ನು ಮುನ್ನಡೆಸಬಹುದು ಎಂಬ ಬಗ್ಗೆ ಮೌನ ಮುರಿದಿದ್ದಾರೆ. “ಮುಂದಿನ ನಾಯಕನನ್ನು ನಾನಾಗಲಿ ಅಥವಾ ಇತರ ಯಾವುದೇ ಉನ್ನತ ಅಧಿಕಾರಿಗಳಾಗಲಿ ನಿರ್ಧರಿಸುವುದಿಲ್ಲ. ಇದರ ಸಂಪೂರ್ಣ ಜವಾಬ್ದಾರಿಯನ್ನು ನಾಯಕ ಮತ್ತು ಕೋಚ್ ಮೇಲೆ ಇರಿಸಲಾಗಿದೆ” ಎಂದಿದ್ದಾರೆ.
"ಆಂತರಿಕ ಮಾತುಕತೆ ನಡೆದಿದೆ. ಆದರೆ, ಶ್ರೀನಿವಾಸನ್ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ನಾಯಕ ಮತ್ತು ಉಪನಾಯಕ ನೇಮಕದ ಬಗ್ಗೆ ಮಾತನಾಡುವುದು ಬೇಡ. ಅದನ್ನು ಕೋಚ್ ಮತ್ತು ಕ್ಯಾಪ್ಟನ್ ನಿರ್ಧರಿಸಲು ಬಿಡೋಣ. ಅವರು ನಿರ್ಧರಿಸಿ ಮಾಹಿತಿ ತಿಳಿಸಲಿ. ತದನಂತರ ನಾನು ಅದನ್ನು ನಿಮ್ಮೆಲ್ಲರಿಗೂ ತಿಳಿಸುತ್ತೇನೆ. ಅಲ್ಲಿಯವರೆಗೆ ಎಲ್ಲರೂ ಮೌನವಾಗಿರೋಣ” ಎಂದು ವಿಶ್ವನಾಥನ್ ಹೇಳಿದರು.
ಇದನ್ನೂ ಓದಿ: RCB ತಂಡದ ಪ್ಲೇಯಿಂಗ್ 11 ರಿವೀಲ್: ಬಲಿಷ್ಟ 25ರ ಬಳಗದಲ್ಲಿ ಆಡುವ 11ಕ್ಕೆ ಆಯ್ಕೆಯಾದವರು ಇವರೇ..!
ಧೋನಿ ನಂತರ ಚೆನ್ನೈ ಅನ್ನು ಮುನ್ನಡೆಸಬಲ್ಲ ಅಭ್ಯರ್ಥಿಗಳ ಪೈಕಿ ರುತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಡೆರಿಲ್ ಮಿಚೆಲ್ ಮತ್ತು ಮೊಯಿನ್ ಅಲಿ ಇದ್ದಾರೆ. ಅವರೆಲ್ಲರಿಗಿಂತ ದೊಡ್ಡ ಸ್ಪರ್ಧಿ ಗಾಯಕ್ವಾಡ್. ಪ್ರಬುದ್ಧ ಕ್ರಿಕೆಟಿಗರಾಗಿಯೂ ಬೆಳೆಯುತ್ತಿರುವ ಅವರು, CSKಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಆಡುತ್ತಿದ್ದು, ಮಾಹಿ ಜೊತೆ ಮಹತ್ವದ ತರಬೇತಿ ಪಡೆದಿರುವ ಅನುಭವ ಅವರಿಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ