ನವದೆಹಲಿ: ಓಡಿಸ್ಸಾದ ಬೆರ್ಹಾಂಪುರದ ಬಿಜು ಜನತಾದಳದ ಸಂಸದ ಚಂದ್ರಶೇಖರ್ ಸಾಹು ಅವರು ಪಕ್ಷದ ಕಾರ್ಯಕರ್ತರೊಬ್ಬರಿಗೆ ಕಪಾಳಮೋಕ್ಷ ಮಾಡುತ್ತಿರುವ ದೃಶ್ಯ ಈಗ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿರುವ ಈ ವಿಡಿಯೋ ಈಗ ವಿವಾದ ಸೃಷ್ಟಿಸಿದೆ.
A former Union Minister & a sitting Parliamentarian (Berhampur MP) slaps a fan in full public view.
Hasn't he brought disgrace to #Odisha with such outrageous and shameful conduct?
Hope everyone is watching!@PMOIndia @CMO_Odisha @narendramodi @ombirlakota @narendramodi pic.twitter.com/PATmhCkdsn
— Bhrugu Baxipatra (@BhruguBJP) September 24, 2019
ಗಜಪತಿ ಜಿಲ್ಲೆಯ ಪರಲಖೆಮುಂಡಿಯಲ್ಲಿ ಮಂಗಳವಾರದಂದು ನಡೆದ ಪಕ್ಷದ ಸಭೆಯಲ್ಲಿ ಕೇಂದ್ರದ ಮಾಜಿ ಸಚಿವರು ಯುವ ಪಕ್ಷದ ಕಾರ್ಯಕರ್ತರನ್ನು ಸಾರ್ವಜನಿಕ ಎದುರುಗಡೆಯೇ ಕಪಾಳ ಮೋಕ್ಷ ಮಾಡಿದ್ದಾರೆ. ಆಡಳಿತಾರೂಢ ಬಿಜೆಡಿಗೆ ಸೇರಲು ಸಭೆಯಲ್ಲಿ ಭಾಗವಹಿಸಿದ್ದ ಗಜಪತಿ ಜಿಲ್ಲಾ ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ಸಂಗ್ರಾಮ್ ಸಾಹು ಅವರಿಗೆ ಚಂದ್ರಶೇಖರ್ ಸಾಹು ಕಪಾಳ ಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ.
ಆದರೆ ಈಗ ಈ ಘಟನೆ ಕುರಿತಾಗಿ ಪ್ರತಿಕ್ರಿಯಿಸಿರುವ ಸಂಗ್ರಾಮ್ ಸಾಹು ' ನನಗೆ ಸಂಸದರು ಹೊಡೆಯಲಿಲ್ಲ, ಆದರೆ ಹಿರಿಯ ಸಹೋದರನ ಹಾಗೆ ನನ್ನ ಕೆನ್ನೆ ತಿವಿದರು. ಅವರು ನನಗೆ ವಿದ್ಯಾರ್ಥಿ ದಿನಗಳಿಂದಲೂ ಚಿರಪರಿಚಿತ ಅವರ ಆಶೀರ್ವಾದದಿಂದಲೇ ನಾನು ಬಿಜೆಡಿಗೆ ಸೇರಿದ್ದೇನೆ' ಎಂದರು.