ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರದಂದು 1965 ಮತ್ತು 1971 ರ ತಪ್ಪುಗಳನ್ನು ಪುನರಾವರ್ತಿಸಬೇಡಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.
"ಅವರು 1965 ಮತ್ತು 1971 ಅನ್ನು ಪುನರಾವರ್ತಿಸುವ ತಪ್ಪನ್ನು ಮಾಡಬಾರದು. ಅವರು ಅದನ್ನು ಪುನರಾವರ್ತಿಸಿದರೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಏನಾಗುತ್ತದೆ ಎಂದು ಅವರು ಯೋಚಿಸಬೇಕು...ಅಲ್ಲಿನ ಬಲೂಚ್ ಮತ್ತು ಪಶ್ತೂನ್ ಗಳ ವಿರುದ್ಧ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತದೆ. ಇದು ಮುಂದುವರಿದರೆ, ವಿಶ್ವದ ಯಾವುದೇ ಶಕ್ತಿಯು ಪಾಕಿಸ್ತಾನವನ್ನು ಮತ್ತಷ್ಟು ಚಿದ್ರವಾಗದಂತೆ ರಕ್ಷಿಸಲು ಸಾಧ್ಯವಾಗುವುದಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
'ಅವರು ಈಗಾಗಲೇ ನಿರುತ್ಸಾಹಗೊಳ್ಳುತ್ತಿರುವುದನ್ನು ನೀವು ನೋಡಬಹುದು. ಪಾಕ್ ಪ್ರಧಾನಿ ಪಿಒಕೆಗೆ ಬಂದು 'ದೇಶವಾಸಿಗಳು ಭಾರತ-ಪಾಕ್ ಗಡಿಗೆ ಹೋಗಬೇಡಿ' ಎಂದು ಹೇಳುತ್ತಾರೆ. ಅದು ಒಳ್ಳೆಯದು, ಏಕೆಂದರೆ ಅವರು ಹಾಗೆ ಮಾಡಿದರೆ ಅವರಿಗೆ ಪಾಕಿಸ್ತಾನಕ್ಕೆ ಹಿಂತಿರುಗಲು ಸಾಧ್ಯವಾಗುವುದಿಲ್ಲ. ಅವರು 1965 ಮತ್ತು 1971 ಅನ್ನು ಪುನರಾವರ್ತಿಸುವ ತಪ್ಪನ್ನು ಮಾಡಬಾರದು' ಎಂದು ಅವರು ಹೇಳಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬಿಹಾರದ ಪಾಟ್ನಾದಲ್ಲಿ ಆಯೋಜಿಸಿದ್ದ ಜನ ಜಾಗರಣಾ ಸಭೆಯನ್ನು ಉದ್ದೇಶಿಸಿ ಈ ಮಾತನ್ನಾಡಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಜಮ್ಮು ಕಾಶ್ಮೀರದ ಸ್ಥಾನಮಾನವನ್ನು ತೆಗೆದ ಮೋದಿ ಸರ್ಕಾರದ ಕ್ರಮದ ಬಗ್ಗೆ ಉಲ್ಲೇಖಿಸುತ್ತಾ 370ನೇ ವಿಧಿ ಒಂದು ರೀತಿಯಲ್ಲಿ ಕ್ಯಾನ್ಸರ್ ಇದ್ದಹಾಗೆ, ಇದರಿಂದಾಗಿ ರಾಜ್ಯ ರಕ್ತಸ್ರಾವಗೊಂಡಿದೆ ಎಂದು ಅವರು ಹೇಳಿದರು. ಅಲ್ಲದೆ ಜಮ್ಮು ಕಾಶ್ಮೀರದ ಮೂರನೇ ನಾಲ್ಕರಷ್ಟು ಜನರು ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸಿದ್ದಾರೆ ಎಂದು ಹೇಳಿದರು.