Surathkal: ಈಜಲು ತೆರಳಿದ್ದ ನಾಲ್ವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವು!

Suratkal students Missing Case: ಮೃತ ವಿದ್ಯಾರ್ಥಿಗಳನ್ನು ಸುರತ್ಕಲ್‌ನ ಅಗರಮೇಲ್ ನಿವಾಸಿ ಚಂದ್ರಕಾಂತ ಎಂಬವರ ಪುತ್ರ ಯಶ್ವಿತ್(15), ಹಳೆಯಂಗಡಿ ತೋಕೂರು ನಿವಾಸಿ ವಸಂತ ಎಂಬುವರ ಪುತ್ರ ರಾಘವೇಂದ್ರ (15), ಸುರತ್ಕಲ್‌ನ ಗುಡ್ಡೆಕೊಪ್ಲ ನಿವಾಸಿ ವಿಶ್ವನಾಥ ಎಂಬುವರ ಪುತ್ರ ನಿರೂಪ(15) ಮತ್ತು ಚಿತ್ರಾಪುರ ನಿವಾಸಿ ದೇವದಾಸ್ ಎಂಬುವರ ಪುತ್ರ ಅನ್ವಿತ್(15) ಎಂದು ಗುರುತಿಸಲಾಗಿದೆ.

Written by - Puttaraj K Alur | Last Updated : Feb 28, 2024, 05:41 PM IST
  • ಈಜಲು ತೆರಳಿದ್ದ ನಾಲ್ವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವು
  • ಸುರತ್ಕಲ್‌ನ ಕೊಪ್ಪಳ ಅಣೆಕಟ್ಟಿನ ರೈಲ್ವೆ ಸೇತುವೆಯ ಕೆಳಗೆ ನಡೆದಿರುವ ಘಟನೆ
  • ಸುರತ್ಕಲ್‌ನ ಖಾಸಗಿ ಶಾಲೆಯಲ್ಲಿ SSLC ಓದುತ್ತಿದ್ದ ಮಕ್ಕಳ ದುರಂತ ಅಂತ್ಯ
Surathkal: ಈಜಲು ತೆರಳಿದ್ದ ನಾಲ್ವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವು! title=
ನಾಲ್ವರ ಮಕ್ಕಳ ದುರಂತ ಅಂತ್ಯ!

ಮಂಗಳೂರು(ದಕ್ಷಿಣ ಕನ್ನಡ): ಸುರತ್ಕಲ್‌ನ ಕೊಪ್ಪಳ ಅಣೆಕಟ್ಟಿನ ರೈಲ್ವೆ ಸೇತುವೆಯ ಕೆಳಗೆ ಈಜಲು ಬಂದಿದ್ದ ನಾಲ್ಕು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದ್ದು, ತಡರಾತ್ರಿ ಬೆಳಕಿಗೆ ಬಂದಿದೆ. 

ಮೃತಪಟ್ಟ ಮಕ್ಕಳೆಲ್ಲರೂ ಸುರತ್ಕಲ್‌ನ ಖಾಸಗಿ ಶಾಲೆಯಲ್ಲಿ SSLC ಓದುತ್ತಿದ್ದರು ಎಂದು ತಿಳಿದುಬಂದಿದೆ. ಮಂಗಳವಾರವೇ ಈಜಲು ಹೋಗಿ ನಾಪತ್ತೆಯಾಗಿದ್ದ ನಾಲ್ವರ ಮೃತದೇಹಗಳನ್ನು ಸ್ಥಳೀಯರ ಸಹಕಾರದೊಂದಿಗೆ ಬುಧವಾರ ಸುರತ್ಕಲ್‌ ಮತ್ತು ಮುಲ್ಕಿ ಪೊಲೀಸರು ಪತ್ತೆಹಚ್ಚಿ ಹೊರತಂದಿದ್ದಾರೆ. 

ಇದನ್ನೂ ಓದಿ: "ಪಾಕ್‌ ಪರ ಜೈಕಾರ ಸಾಬೀತಾದರೆ ಕಠಿಣ ಶಿಕ್ಷೆ"

ಮೃತ ವಿದ್ಯಾರ್ಥಿಗಳನ್ನು ಸುರತ್ಕಲ್‌ನ ಅಗರಮೇಲ್ ನಿವಾಸಿ ಚಂದ್ರಕಾಂತ ಎಂಬವರ ಪುತ್ರ ಯಶ್ವಿತ್(15), ಹಳೆಯಂಗಡಿ ತೋಕೂರು ನಿವಾಸಿ ವಸಂತ ಎಂಬುವರ ಪುತ್ರ ರಾಘವೇಂದ್ರ (15), ಸುರತ್ಕಲ್‌ನ ಗುಡ್ಡೆಕೊಪ್ಲ ನಿವಾಸಿ ವಿಶ್ವನಾಥ ಎಂಬುವರ ಪುತ್ರ ನಿರೂಪ(15) ಮತ್ತು ಚಿತ್ರಾಪುರ ನಿವಾಸಿ ದೇವದಾಸ್ ಎಂಬುವರ ಪುತ್ರ ಅನ್ವಿತ್(15) ಎಂದು ಗುರುತಿಸಲಾಗಿದೆ.

ಮಂಗಳವಾರ ಇಂಗ್ಲಿಷ್ ಭಾಷೆಯ ಪೂರ್ವ ಸಿದ್ಧತಾ ಪರೀಕ್ಷೆಗೆ ತೆರಳಿದ್ದ ಏಳು ಮಂದಿ ವಿದ್ಯಾರ್ಥಿಗಳು ಒಟ್ಟಿಗೆ ಹಳೆಯಂಗಡಿಗೆ ಬಂದಿದ್ದರು. ಅಲ್ಲಿಂದ ಕೊಪ್ಪಳ ಅಣೆಕಟ್ಟು ರೈಲ್ವೆ ಸೇತುವೆಯ ಕೆಳಗೆ ಈಜಲು ಹೋಗಿದ್ದಾರೆ. ಈ ಪೈಕಿ ನಾಲ್ಕು ಮಂದಿ ಮಕ್ಕಳು ತಮ್ಮ ಶಾಲಾ ಚೀಲಗಳನ್ನು ನದಿಯ ದಡದಲ್ಲಿಟ್ಟು ನೀರಿನಲ್ಲಿ ಇಳಿದಿದ್ದರು. ಸ್ನೇಹಿತರು ನೀರಿನಲ್ಲಿ ಮುಳುಗುತ್ತಿದ್ದಂತೆಯೇ ಜೊತೆಗಿದ್ದ ಮೂವರು ಸ್ಥಳದಿಂದ ತಮ್ಮ ಮನೆಗಳಿಗೆ ತೆರಳಿದ್ದರು ಎನ್ನಲಾಗುತ್ತಿದೆ.

ಇದನ್ನೂ ಓದಿ: ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸಿ; ಇಲ್ಲದಿದ್ದರೆ ಪರವಾನಿಗೆ ರದ್ದು

ಮಕ್ಕಳು ಕಾಣೆಯಾಗಿರುವ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆಯೇ ವಿಚಾರಣೆ ಚುರುಕುಗೊಳಿಸಿದ ಪೊಲೀಸರು, ಶಾಲೆ, ಬಸ್ ನಿಲ್ದಾಣದ ಬಳಿಯ ಸಿಸಿ ಕ್ಯಾಮೆರಾಗಳನ್ನು ತಪಾಸಣೆಗೆ ಒಳಪಡಿಸಿದ್ದಾರೆ. ಮಕ್ಕಳು ಸುರತ್ಕಲ್ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿದ್ದು, ಹಳೆಯಂಗಡಿಯಲ್ಲಿ ಬಸ್ ಇಳಿದಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಬಳಿಕ ವಿದ್ಯಾರ್ಥಿಯೋರ್ವನ ಬಳಿಯಿದ್ದ ಮೊಬೈಲ್ ಫೋನ್ ಲೊಕೇಶನ್ ಬಳಸಿ ಬಾಲಕರಿರುವ ಸ್ಥಳವನ್ನು ಧೃಢಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News