ಹಾವೇರಿಯಲ್ಲಿ ನಡೆದ ವಿವಿಧ ತಳಿಯ ಜಿಲ್ಲಾ ಮಟ್ಟದ ಶ್ವಾನಗಳ ಪ್ರದರ್ಶನ

Haveri : ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದ ಎನ್‍ಸಿಜೆಸಿ ಕಾಲೇಜು ಆವರಣದಲ್ಲಿ ವಿವಿಧ ತಳಿಯ ಜಿಲ್ಲಾ ಮಟ್ಟದ ಶ್ವಾನಗಳ  ಪ್ರದರ್ಶನ ಏರ್ಪಡಿಸಲಾಗಿತ್ತು 

Written by - Zee Kannada News Desk | Last Updated : Feb 25, 2024, 09:42 PM IST
  • ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದ ಎನ್‍ಸಿಜೆಸಿ ಕಾಲೇಜು ಆವರಣದಲ್ಲಿ ವಿವಿಧ ತಳಿಯ ಜಿಲ್ಲಾ ಮಟ್ಟದ ಶ್ವಾನಗಳ ಪ್ರದರ್ಶನ ಏರ್ಪಡಿಸಲಾಗಿತ್ತು
  • ಈ ಶ್ವಾನಗಳ ಪ್ರದರ್ಶನದಲ್ಲಿ ತಾಲೂಕು, ಜಿಲ್ಲಾ ಮಟ್ಟದ ಶ್ವಾನ ಪ್ರಿಯರು ತಮ್ಮ ಶ್ವಾನಗಳನ್ನು ತಂದು ಪ್ರದರ್ಶನದಲ್ಲಿ ಭಾಗಿಯಾಗಿದ್ದರು.
  • ಉದ್ಘಾಟನೆಯನ್ನು ಜಿಲ್ಲಾ ಪಶುಸಂಗೋಪನಾ ಇಲಾಖೆಯ ನಿರ್ದೇಶಕ ಡಾ.ಎಸ್.ವಿ.ಸಂತಿ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು.
ಹಾವೇರಿಯಲ್ಲಿ ನಡೆದ ವಿವಿಧ ತಳಿಯ ಜಿಲ್ಲಾ ಮಟ್ಟದ ಶ್ವಾನಗಳ  ಪ್ರದರ್ಶನ title=

Dog show held in haveri : ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದ ಎನ್‍ಸಿಜೆಸಿ ಕಾಲೇಜು ಆವರಣದಲ್ಲಿ ಜಿಲ್ಲಾ ಮಟ್ಟದ ಶ್ವಾನಗಳ ಪ್ರದರ್ಶನ  ಏರ್ಪಡಿಸಲಾಗಿತ್ತು.  ಈ ಶ್ವಾನಗಳ ಪ್ರದರ್ಶನದಲ್ಲಿ ತಾಲೂಕು, ಜಿಲ್ಲಾ ಮಟ್ಟದ ಶ್ವಾನ ಪ್ರಿಯರು ತಮ್ಮ ಶ್ವಾನಗಳನ್ನು ತಂದು ಪ್ರದರ್ಶನದಲ್ಲಿ ಭಾಗಿಯಾಗಿದ್ದರು. 

ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದ ಎನ್‍ಸಿಜೆಸಿ ಕಾಲೇಜು ಆವರಣದಲ್ಲಿ ನಡೆದ ಜಿಲ್ಲಾ ಮಟ್ಟದ ಶ್ವಾನಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಉದ್ಘಾಟನೆಯನ್ನು ಜಿಲ್ಲಾ ಪಶುಸಂಗೋಪನಾ ಇಲಾಖೆಯ ನಿರ್ದೇಶಕ ಡಾ.ಎಸ್.ವಿ.ಸಂತಿ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು.

ಇದನ್ನು ಓದಿ : Priyamani : ಅಣ್ಣಾಬಾಂಡ್ ಬೆಡಗಿಯ ಬೋಲ್ಡ್ ಫೋಟೋಸ್ ಇಲ್ಲಿವೆ ನೋಡಿ

ಈ ಶ್ವಾನಗಳ ಪ್ರದರ್ಶನದಲ್ಲಿ ತಾಲೂಕು, ಜಿಲ್ಲಾ ಮಟ್ಟದ ಶ್ವಾನ ಪ್ರಿಯರು ತಮ್ಮ ಶ್ವಾನಗಳನ್ನು ತಂದು ಪ್ರದರ್ಶನದಲ್ಲಿ ಭಾಗಿಯಾಗಿದ್ದರು. ಸುಮಾರು 20 ಕ್ಕೂ ಹೆಚ್ಚು ವಿವಿಧ ತಳಿಯ ಶ್ವಾನಗಳಾದ ಪಪ್ಪಿ ತಳಿಯ ಪಗ್ಗ್, ಜಾಕ್ ರುಸೆಲ್, ಬಿಚ್ಚೋನ್, ಮಲ್ಟೇಜ್,ಪಮೋರಿಯನ್, ಬೀಗಲ್, ಜರ್ಮನ್ ಶಫರ್ಡ್, ಲ್ಯಾಬ್ರೋಡೋರ್, ಮುದೋಳ,ರ್ಯಾಟ್ ವೀಲರ್, ಅಮೇರಿಕನ್ ಬುಲ್ಲಿ, ಪಿಟ್ ಬುಲ್, ಹಸ್ಕಿ, ಡಾಬರ್ ಮನ್, ಗ್ರೇಟ್ ಡೇನ್, ಡಾಚ್ ಶಂಡ್, ಗೋಲ್ಡನ್ ರಿಟ್ರೀವರ್ ಸೇರಿದಂತೆ ಹಲವು ತಳಿಗಳ 180 ಕ್ಕೂ ಹೆಚ್ಚು ಶ್ವಾನಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದವು.

ಇದನ್ನು ಓದಿ : Gajlakshmi Rajyog 2024: ಹನ್ನೆರಡು ವರ್ಷಗಳ ಬಳಿಕ ಗುರು-ಶುಕ್ರರ ಕೃಪೆಯಿಂದ ಗಜಲಕ್ಷ್ಮಿ ರಾಜಯೋಗ ರಚನೆ, ಜನರಿಗೆ ಅಪಾರ ಧನಸಂಪತ್ತು ಪ್ರಾಪ್ತಿ!

ಉತ್ತಮ ಆರೋಗ್ಯ ಸ್ಮಾರ್ಟ್ ನಡುಗೆಯುಳ್ಳ ಶ್ವಾನಗಳಿಗೆ ಇಲಾಖೆ ವತಿಯಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಒಟ್ಟು 5 ಟ್ರೋಫಿಗಳನ್ನೊಳಗೊಂಡಂತೆ ಪಪ್ಪಿ ವಿಭಾಗ, ಅಡಲ್ಟ್ ಮೇಲ್,ಫಿಮೆಲ್ ವಿಭಾಗಳಲ್ಲಿ ನಿರ್ಣಾಯಕರು ಆಯ್ಕೆ ಮಾಡಿದ ಶ್ವಾನಗಳಿಗೆ ಪ್ರಥಮ ದ್ವೀತಿಯ ತೃತಿಯ ಬಹುಮಾನ ನೀಡಿದರೆ ಉಳಿದ ಉತ್ತಮ ಪ್ರದರ್ಶನ ನೀಡಿದ ಶ್ವಾನಗಳಿಗೆ ಇಲಾಖೆ ವತಿಯಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು

ಕಾರ್ಯಕ್ರಮವನ್ನು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಪಶು ವೈದ್ಯಕೀಯ ಸಂಘ, ಜಿಲ್ಲಾ ಘಟಕ ಹಾವೇರಿ ಇವರ ಸಹಯೋಗದಲ್ಲಿ ಶ್ವಾನಗಳ ಪ್ರದೇಶನ ಮಾಡಲಾಯಿತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News