Actress Rekha Love Story: ಒಂದು ಕಾಲದಲ್ಲಿ ಸಿನಿಮಾ ಜಗತ್ತನ್ನು ಆಳುತ್ತಿದ್ದ ನಟಿ ಈಕೆ. ಒಂದೆರಡಲ್ಲ ಆರಕ್ಕೂ ಹೆಚ್ಚು ನಟರೊಂದಿಗೆ ಸಂಬಂಧ ಹೊಂದಿದ್ದರೆಂಬ ವದಂತಿಯಿದೆ. ಈಗ ಆಕೆಗೆ ಸುಮಾರು 70 ವರ್ಷ. ಈ ವಯಸ್ಸಿನಲ್ಲಿ ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಸಿನಿಮಾ ಕ್ಷೇತ್ರದಲ್ಲಿ ನಂಬರ್ ಹೀರೋಯಿನ್ ನಟಿ ರೇಖಾ ಜೀವನದ ಕತೆ ಇದು. ಸ್ಟಾರ್ ಹೀರೋನ ಮಗಳಾದರೂ ಸಾಕಷ್ಟು ಕಷ್ಟ ಎದುರಿಸಿದ್ದರು. ತಮ್ಮ ಸಿನಿಮಾಗಳ ಮೂಲಕ ಅನೇಕ ಅಭಿಮಾನಿಗಳನ್ನು ಪಡೆದರು.
ನಟಿ ರೇಖಾ ವೈಯಕ್ತಿಕ ಜೀವನ ತುಂಬಾ ವಿವಾದಾತ್ಮಕವಾಗಿದೆ. ರೇಖಾ ಜೊತೆ ಮೊದಲು ಸಂಬಂಧ ಹೊಂದಿದ್ದ ನಟ ಅಮಿತಾಬ್ ಬಚ್ಚನ್ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ರೇಖಾ ಅವರ ಜೀವನದಲ್ಲಿ ಮೊದಲು ಬಂದವರು ಅಂದಿನ ಟಾಪ್ ಹೀರೋ ಜೀತೇಂದ್ರ.
ಜೀತೇಂದ್ರ ಜೊತೆ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಜಿತೇಂದ್ರ ರೇಖಾ ಅವರನ್ನು ಪ್ರೀತಿಸುವೆ ಮುನ್ನವೇ ಮದುವೆಯಾಗಿದ್ದರಿಂದ ಈ ಸಂಬಂಧಕ್ಕೆ ಗುಡ್ ಬೈ ಹೇಳಬೇಕಾಯಿತು.
ಅದರ ನಂತರ ಬಂದದ್ದು ಬಾಲಿವುಡ್ನಲ್ಲಿ ಖಳನಾಯಕರಾಗಿರುವ ಕಿರಣ್ ಕುಮಾರ್. ಇದೂ ಕೂಡ ಅರ್ಧಕ್ಕೆ ಮುರಿದು ಹೋಯಿತು. ರೇಖಾ ಜನಪ್ರಿಯ ನಾಯಕ ವಿನೋದ್ ಮೆಹ್ರಾ ಅವರೊಂದಿಗೆ ಸಂಬಂಧ ಹೊಂದಿದ್ದರು. ರೇಖಾ ಅವರನ್ನು ರಹಸ್ಯವಾಗಿ ಮದುವೆಯಾಗಿದ್ದಾರೆ ಎಂಬ ವದಂತಿಯೂ ಹಬ್ಬಿತ್ತು. ಈ ಸುದ್ದಿ ಸುಳ್ಳು ಎಂದು ರೇಖಾ ಸಂದರ್ಶನವೊಂದರಲ್ಲಿ ಹೇಳಿದ್ದರು.
ಇದೆಲ್ಲದರ ಬಳಿಕ ಅಮಿತಾಬ್ ಜೊತೆ ರೇಖಾ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಶುರುವಾಗಿತ್ತು. ಇದಾದ ನಂತರ ಬಿಗ್ ಬಿ ಪತ್ನಿ ಜಯಾ ಬಚ್ಚನ್ ಮಧ್ಯಪ್ರವೇಶಿಸಿ ರೇಖಾ ಜೊತೆಗಿನ ಅಮಿತಾಬ್ ಪ್ರೇಮಕ್ಕೆ ತಡೆ ಹಾಕಿದ್ದರು.
ಅಂದು ಅಮಿತಾಭ್ ಬಚ್ಚನ್, ರೇಖಾ, ಜಯಾ ಬಚ್ಚನ್ ಅಭಿನಯದ ‘ಸಿಲ್ಸಿಲಾ’ ಸಿನಿಮಾ ಸಂಚಲನವನ್ನೇ ಸೃಷ್ಟಿಸಿತ್ತು. ಮೇಲಾಗಿ ಅಮಿತಾಬ್ ಮತ್ತು ರೇಖಾ ಸಂಬಂಧದ ಬಗ್ಗೆ ದೇಶದೆಲ್ಲೆಡೆ ಚರ್ಚೆ ಶುರುವಾಗಿತ್ತು.
ಬಳಿಕ ರೇಖಾ ದೆಹಲಿ ಮೂಲದ ಉದ್ಯಮಿ ಮುಖೇಶ್ ಅಗರ್ವಾಲ್ ಅವರನ್ನು ವಿವಾಹವಾದರು. ಆದರೆ ರೇಖಾ ಅವರ ದಾಂಪತ್ಯ ಸುಖವಾಗಿರಲಿಲ್ಲ ಎಂದು ‘ರೇಖಾ.. ಅನ್ ಟೋಲ್ಡ್ ಸ್ಟೋರಿ’ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.