ನವದೆಹಲಿ: ಭಾರತ ಸರ್ಕಾರವು ನೀತಿ ಆಯೋಗದ ಅಟಲ್ ಇನೋವೇಷನ್ ಮಿಷನ್ ಯೋಜನೆ ಅಡಿಯಲ್ಲಿ ದೇಶಾದ್ಯಂತ ಉದ್ಯಮಶೀಲತೆ ಮತ್ತು ಸಂಶೋಧನೆಗೆ ಪ್ರಾಮುಖ್ಯತೆ ನೀಡುವ ನಿಟ್ಟಿನಲ್ಲಿ ಸುಮಾರು 1500 ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಅ ಮೂಲಕ ಪ್ರತಿ ಶಾಲೆಗಳಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಗಳನ್ನು ಸ್ಥಾಪಿಸಲಿದೆ.
ಆ ಮೂಲಕ ಭವಿಷ್ಯದ ದೃಷ್ಟಿಯಲ್ಲಿ ಮಕ್ಕಳಲ್ಲಿ ಸಂಶೋಧನೆಯ ಆಸಕ್ತಿಯನ್ನು ಬೆಳೆಸಲು ಈ ಲ್ಯಾಬ್ ಗಳು ಪೂರಕವಾಗಿ ಕಾರ್ಯನಿರ್ವಹಿಸುತ್ತವೆ. ಇಲ್ಲಿಯವರೆಗೆ 2441 ಶಾಲೆಗಳು ಈ ಯೋಜನೆಯ ಅಡಿಯಲ್ಲಿ ಒಳಪಟ್ಟಿವೆ ಎಂದು ಯೋಜನಾ ಅಧಿಕಾರಿಗಳು ತಿಳಿಸಿದ್ದಾರೆ.
ಈ ಯೋಜನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಈ ಯೋಜನೆಯ ನಿರ್ದೇಶಕರಾದ ಆರ್.ರಮಾಣನ್ ಈ ಯೋಜನೆಯ ಪ್ರಮುಖ ಉದ್ದೇಶ ಭಾರತವನ್ನು ಸಂಶೋಧನಾ ದೇಶ ಮಾಡುವ ಗುರಿಯಾಗಿದೆ ಎಂದು ತಿಳಿಸಿದರು. ಆ ನಿಟ್ಟಿನಲ್ಲಿ ಈ ಯೋಜನೆ ಸಹಕಾರಿಯಾಗಲಿದೆ. ಪ್ರಮುಖವಾಗಿ ಈ ಯೋಜನೆಯು 6ನೇ ತರಗತಿಯಿಂದ 12 ನೇ ವರೆಗಿನ ವಿಧ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಶಾಲಾ ಮಟ್ಟದಲ್ಲಿ ಜಾರಿಗೆ ತರಲಾಗುತ್ತದೆ. ಸುಮಾರು 25000ಕ್ಕೂ ಅಧಿಕ ಅರ್ಜಿಗಳ ಮೂಲಕ ಇಲ್ಲಿಯವರೆಗೂ 2441 ಶಾಲೆಗಳನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.