PICS & Video: ISRO ಮುಖ್ಯಸ್ಥರು ಭಾವುಕರಾದಾಗ ಪ್ರಧಾನಿ ಮೋದಿ ಸಾಂತ್ವನ ಮಾಡಿದ ಕ್ಷಣ..!

ಜೀವನದಲ್ಲಿ ಏರಿಳಿತಗಳು ಇದ್ದದ್ದೇ. ಸಂಪರ್ಕ ಕಡಿದುಕೊಂಡಾಗ ಎಲ್ಲರಿಗೂ ಬೇಸರವಾಗಿರುವುದನ್ನು ನಾನು ನೋಡಿದೆ. ಇದು ಕಡಿಮೆ ಸಾಧನೆಯಲ್ಲ. ದೇಶವು ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ- ಇಸ್ರೋ ವಿಜ್ಞಾನಿಗಳಿಗೆ ಟ್ವೀಟ್ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಸಾಂತ್ವನ.

  • Sep 07, 2019, 11:14 AM IST

ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದ ಬಳಿ ಚಂದ್ರಯಾನ್ -2 ಮಿಷನ್ (ಚಂದ್ರಯಾನ್ 2) ಅಡಿಯಲ್ಲಿ ವಿಕ್ರಮ್ ಲ್ಯಾಂಡರ್ ಅನ್ನು ಸಾಗಿಸುವ ಮೂಲಕ ಭಾರತ ಇತಿಹಾಸ ಸೃಷ್ಟಿಸಿದೆ. ಆದಾಗ್ಯೂ, ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈ ಮೇಲೆ ಇಳಿಯುವ ಸ್ವಲ್ಪ ಸಮಯದ ಮೊದಲು ವಿಜ್ಞಾನಿಗಳೊಂದಿಗಿನ ಸಂಪರ್ಕವು ಮುರಿದುಹೋಯಿತು.

ಈ ಕುರಿತಂತೆ ಇಂದು ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ನಿಯಂತ್ರಣ ಕೇಂದ್ರದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು.  ಬಳಿಕ ಪ್ರಧಾನಿ ಮೋದಿ ಅವರಿಗೆ ಬೀಳ್ಕೊಡಲು ಹೊರಬಂದ ಇಸ್ರೋ ಮುಖ್ಯಸ್ಥ ಕೆ. ಶಿವನ್ ಆ ಸಮಯದಲ್ಲಿ ತುಂಬಾ ಭಾವುಕರಾಗಿ ಕಣ್ಣೀರಿಟ್ಟರು. ಆ ಸಂದರ್ಭದ ಕೆಲವು ಫೋಟೋಗಳು ಹಾಗೂ ವಿಡಿಯೋ...

1 /6

ಪ್ರಧಾನಿ ಮೋದಿ ಅವರಿಗೆ ಬೀಳ್ಕೊಡಲು ಹೊರಬಂದ ಇಸ್ರೋ ಮುಖ್ಯಸ್ಥ ಕೆ. ಶಿವನ್ ಆ ಸಮಯದಲ್ಲಿ ತುಂಬಾ ಭಾವುಕರಾದರು. ಈ ಭಾವನಾತ್ಮಕ ಕ್ಷಣದಲ್ಲಿ ಕೆ. ಶಿವನ್ ಅವರ ಕಣ್ಣೀರಿಟ್ಟರು.

2 /6

ಈ ಭಾವನಾತ್ಮಕ ಕ್ಷಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಸ್ರೋ ಮುಖ್ಯಸ್ಥ ಕೆ. ಶಿವನ ಅವರನ್ನು ತಬ್ಬಿ ಸಮಾಧಾನ ಪಡಿಸಿದರು. #WATCH PM Narendra Modi hugged and consoled ISRO Chief K Sivan after he(Sivan) broke down. #Chandrayaan2 pic.twitter.com/bytNChtqNK — ANI (@ANI) September 7, 2019

3 /6

4 /6

ನಮ್ಮ ವಿಜ್ಞಾನಿಗಳ ಸಾಧನೆ ಬಗ್ಗೆ ನಮಗೆ ಹೆಮ್ಮೆ ಇದೆ, ಭಾರತ ನಿಮ್ಮೊಂದಿಗಿದೆ ಎಂದು ಇಸ್ರೋ ಕಚೇರಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡುವ ವೇಳೆ ಪ್ರಧಾನಿ ನರೇಂದ್ರ ಮೋದಿ ಹೇಳಿದರು.

5 /6

ನಮ್ಮ ಬಾಹ್ಯಾಕಾಶ ವಿಜ್ಞಾನಿಗಳ ಕುಟುಂಬಗಳಿಗೂ ನಮಸ್ಕರಿಸುತ್ತೇನೆ ಎಂದು ಪಿಎಂ ಮೋದಿ ಹೇಳಿದರು. 

6 /6

ನಿಮ್ಮ ಪರಿಶ್ರಮದ ಬಗ್ಗೆ ಭಾರತೀಯರೆಲ್ಲರಿಗೂ ಹೆಮ್ಮೆ ಇದೆ. ಅಡೆತಡೆಗಳಿಂದ ನಿಮ್ಮ ವಿಶ್ವಾಸ ಕುಗ್ಗಿಲ್ಲ, ಹೆಚ್ಚಾಗಿದೆ ಎಂದು ಇಸ್ರೋ ವಿಜ್ಞಾನಿಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದರು.