Kinetic Green Electric Luna Launch: ಕೈನೆಟಿಕ್ ಗ್ರೀನ್ ಇ-ಲೂನಾ ಐಕಾನಿಕ್ ಲೂನಾದ ಎಲೆಕ್ಟ್ರಿಕ್ ಅವತಾರವಾಗಿದೆ. ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಇದನ್ನು ತಯಾರಿಸಲಾಗಿದೆ. ಒಂದೇ ಚಾರ್ಜ್ನಲ್ಲಿ 110 ಕಿಮೀ ವ್ಯಾಪ್ತಿಯನ್ನು ಸಂಚರಿಸಬಲ್ಲ ಇ-ಲೂನಾ, ಕೇವಲ 69,990 ರೂ.ನಲ್ಲಿ ಲಭ್ಯವಿದೆ.
Kinetic Green E-Luna: ಭಾರತೀಯರ ಜನಮಾನಸದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ಕೈನೆಟಿಕ್ ಗ್ರೀನ್ ಇ-ಲೂನಾ ಮತ್ತೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಈ ಐಕಾನಿಕ್ ಲೂನಾ ಮೊಪೆಡ್ಗೆ ಹೊಸ ಜೀವ ನೀಡಲಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಹೊಸ ಲೂನಾಗೆ ಚಾಲನೆ ನೀಡಿದ್ದಾರೆ. ಈ ಇ-ಲೂನಾವನ್ನು ಭಾರತೀಯ ಗ್ರಾಹಕರ ಅಗತ್ಯಗಳ ಪೂರೈಕೆಗಾಗಿ ವಿನ್ಯಾಸಗೊಳಿಸಲಾಗಿದೆ. ಸೊಗಸಾದ, ಬಹು-ಬಳಕೆಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಇದಾಗಿದೆ. ಈ ಇ-ಲೂನಾದ ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕೈನೆಟಿಕ್ ಗ್ರೀನ್ ಇ-ಲೂನಾ ಐಕಾನಿಕ್ ಲೂನಾದ ಎಲೆಕ್ಟ್ರಿಕ್ ಅವತಾರವಾಗಿದೆ. ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಇದನ್ನು ತಯಾರಿಸಲಾಗಿದೆ. ಒಂದೇ ಚಾರ್ಜ್ನಲ್ಲಿ 110 ಕಿಮೀ ವ್ಯಾಪ್ತಿಯನ್ನು ಸಂಚರಿಸಬಲ್ಲ ಇ-ಲೂನಾ, ಕೇವಲ 69,990 ರೂ.ನಲ್ಲಿ ಲಭ್ಯವಿದೆ. ವೈಯಕ್ತಿಕ ಮತ್ತು ವಾಣಿಜ್ಯ ಬಳಕೆಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಇ-ಲೂನಾ ನಗರ ಪ್ರದೇಶಗಳನ್ನು ಮೀರಿ ಗ್ರೇಡ್ 2 ಮತ್ತು ಗ್ರೇಡ್ 3 ನಗರಗಳಿಗೂ ಹೊಂದಿಕೊಳ್ಳುತ್ತದೆ. E-Luna ತನ್ನ ವಿಶಿಷ್ಟ ವಿನ್ಯಾಸದೊಂದಿಗೆ ಮಾರುಕಟ್ಟೆಯಲ್ಲಿ ಗಮನ ಸೆಳೆಯುತ್ತಿದೆ.
E-Luna ತಡೆರಹಿತ ಮತ್ತು ಪರಿಸರ ಸ್ನೇಹಿ ಸವಾರಿ ಅನುಭವ ನೀಡುವ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ಸುಧಾರಿತ 2.0 kWh ಲಿಥಿಯಂ-ಐಯಾನ್ ಬ್ಯಾಟರಿ ಒಂದೇ ಚಾರ್ಜ್ನಲ್ಲಿ 110 ಕಿಮೀ ಕ್ರಮಿಸುತ್ತದೆ. ವೇಗದ ಚಾರ್ಜಿಂಗ್ ಮತ್ತು ಬದಲಾಯಿಸಬಹುದಾದ ಬ್ಯಾಟರಿ ಆಯ್ಕೆಗಳಿದ್ದು, ವಿಶೇಷವಾಗಿ B2B ಬಳಕೆಗೆ ಉತ್ತಮ ಆಯ್ಕೆಯಾಗಿದೆ.
BLDC ಮಿಡ್-ಮೌಂಟ್ ಮೋಟಾರ್ನಿಂದ ಚಾಲಿತವಾದ 50 km/h ಗರಿಷ್ಠ ವೇಗ. ಜಲ-ನಿರೋಧಕ, ಧೂಳು-ನಿರೋಧಕ ಘಟಕಗಳನ್ನು IP-67 ಮಾನದಂಡಕ್ಕೆ ವಿನ್ಯಾಸಗೊಳಿಸಲಾಗಿದೆ. ಕಾಂಬಿ-ಬ್ರೇಕಿಂಗ್ ಸಿಸ್ಟಮ್, ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಷನ್ ಮತ್ತು ವರ್ಧಿತ ಸ್ಥಿರತೆಗಾಗಿ ದೊಡ್ಡದಾದ 16" ಚಕ್ರದ ಗಾತ್ರ ಹೊಂದಿದೆ.
ಇ-ಲೂನಾದ ಎಕ್ಸ್ ಶೋ ರೂಂ ಬೆಲೆ 69,990 ರೂ. ಇದೆ. ಇದು ಭಾರತದಲ್ಲಿಯೇ ಅತ್ಯಂತ ಕೈಗೆಟುಕುವ ಹೆಚ್ಚಿನ ವೇಗದ ಎಲೆಕ್ಟ್ರಿಕ್ ದ್ವಿಚಕ್ರ ವಾಹನವಾಗಿ ಸ್ಥಾನ ಪಡೆದಿದೆ. ಇದರ ಕಡಿಮೆ ಬೆಲೆಯು ಕೈನೆಟಿಕ್ ಗ್ರೀನ್ನ ದೃಷ್ಟಿಯೊಂದಿಗೆ ಇ-ಮೊಬಿಲಿಟಿಯನ್ನು ಎಲ್ಲರಿಗೂ ದೊರೆಯುವಂತೆ ಮಾಡುತ್ತದೆ.
ಇ-ಲೂನಾ ಕೇವಲ ವೈಯಕ್ತಿಕ ಚಲನಶೀಲ ವಾಹನವಲ್ಲ. 150 ಕೆಜಿ ಪೇಲೋಡ್ ಹೊರುವ ಸಾಮರ್ಥ್ಯವನ್ನು ಹೊಂದಿದೆ. ಇದು ಇ-ಮೊಬಿಲಿಟಿಗೆ ಕೈನೆಟಿಕ್ ಗ್ರೀನ್ನ ಅಂತರ್ಗತ ವಿಧಾನವನ್ನು ಸಾಕಾರಗೊಳಿಸುತ್ತದೆ. ಇದು ಕೇವಲ ನಗರ ಮಾತ್ರವಲ್ಲ, ಗ್ರೇಡ್ 2 & 3 ನಗರಗಳು ಮತ್ತು ಗ್ರಾಮೀಣ ಪ್ರದೇಶಗಳ ಅಗತ್ಯಗಳನ್ನು ಪೂರೈಸುವ ಗುರಿಯನ್ನು ಹೊಂದಿದೆ.