Grammy Awards 2024: ಖ್ಯಾತ ಗಾಯಕ ಶಂಕರ್ ಮಹಾದೇವನ್ ಹಾಗೂ ಜಾಕಿರ್ ಹುಸೇನ್ ಅವರ ‘ಶಕ್ತಿ ಬ್ಯಾಂಡ್’ ಈ ಬಾರಿ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಪಡೆದಿದೆ. ‘ದಿಸ್ ಮೂಮೆಂಟ್’ ಹೆಸರಿನ ಆಲ್ಬಂಗೆ ಬೆಸ್ಟ್ ಗ್ಲೋಬಲ್ ಮ್ಯೂಸಿಕ್ ಆಲ್ಬಂ ವಿಭಾಗದಲ್ಲಿ ಗ್ರ್ಯಾಮಿ ಅವಾರ್ಡ್ ಒಲಿದಿದೆ. 'ದಿಸ್ ಮೊಮೆಂಟ್' ಎಂಬ ಸಂಗೀತ ಆಲ್ಬಂಗಾಗಿ ಶಕ್ತಿ ಬ್ಯಾಂಡ್ ಅನ್ನು ಅತ್ಯುತ್ತಮ ಜಾಗತಿಕ ಸಂಗೀತ ವಿಭಾಗದಲ್ಲಿ ಗ್ರ್ಯಾಮಿ ಪ್ರಶಸ್ತಿ ವಿಜೇತ ಎಂದು ಘೋಷಿಸಲಾಯಿತು. 8 ಜನರು ಈ ಹಾಡನ್ನು ಸಂಯೋಜಿಸಿದ್ದಾರೆ. ಜಾನ್ ಮೆಕ್ಲಾಫ್ಲಿನ್ (ಗಿಟಾರ್), ಜಾಕಿರ್ ಹುಸೇನ್ (ತಬಲಾ), ಶಂಕರ್ ಮಹಾದೇವನ್ (ಗಾಯಕ), ವಿ. ಸೆಲ್ವಗಣೇಶ್ (ತಾಳವಾದ್ಯ), ಗಣೇಶ್ ರಾಜಗೋಪಾಲನ್ (ಪಿಟೀಲು ವಾದಕ) ಈ ಹಾಡನ್ನು ಸಂಯೋಜನೆ ಮಾಡಿದ್ದಾರೆ.
ಇದನ್ನೂ ಓದಿ: Bigg Boss Kannada: ಬಿಗ್ ಬಾಸ್ ಕನ್ನಡ OTT ಶುರು.!? ಈ ಬಾರಿ ಸ್ಪರ್ಧಿಗಳು ಯಾರು?
ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಸೋಮವಾರ ನಡೆದ 66ನೇ ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಯಿತು. ತಬಲಾ ವಾದಕ ಮತ್ತು ಸಂಗೀತ ಸಂಯೋಜಕ ಉಸ್ತಾದ್ ಜಾಕಿರ್ ಹುಸೇನ್ ಅವರು 'ಪಾಷ್ಟೋ'ಗಾಗಿ 'ಅತ್ಯುತ್ತಮ ಜಾಗತಿಕ ಸಂಗೀತ ಪ್ರದರ್ಶನ' ವಿಭಾಗದಲ್ಲಿ ಗ್ರ್ಯಾಮಿ ಅವಾರ್ಡ್ ಪಡೆದುಕೊಂಡಿದ್ದಾರೆ.
Congrats Best Global Music Album winner - 'This Moment' Shakti. #GRAMMYs 🎶
WATCH NOW https://t.co/OuKk34kvdu pic.twitter.com/N7vXftfaDy
— Recording Academy / GRAMMYs (@RecordingAcad) February 4, 2024
ಉಸ್ತಾದ್ ಜಾಕಿರ್ ಹುಸೇನ್, ರಾಕೇಶ್ ಚೌರಾಸಿಯಾ ಮತ್ತು ಬೆಲಾ ಫ್ಲೆಕ್, ಎಡ್ಗರ್ ಮೆಯೆರ್ 'ಅತ್ಯುತ್ತಮ ಸಮಕಾಲೀನ ವಾದ್ಯಗಳ ಆಲ್ಬಮ್' ವಿಭಾಗದಲ್ಲಿ ಗ್ರ್ಯಾಮಿ ಪ್ರಶಸ್ತಿ ಮುಡುಗೇರಿಸಿಕೊಂಡಿದ್ದಾರೆ. ಜಾಕಿರ್ ಹುಸೇನ್ ಒಂದೇ ಬಾರಿ ಮೂರು ಗ್ರ್ಯಾಮಿ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ರಾಕೇಶ್ ಚೌರಾಸಿಯಾ ಎರಡು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
.... and Ustad Zakhir Hussain, the living legend creates history by winning 3 Grammys in one night!!! Rakesh Chaurasia wins 2!! This is a great year for India at the Grammys.. and I am blessed to witness it. @RecordingAcad #indiawinsatgrammys
— Ricky Kej (@rickykej) February 5, 2024
ಇದನ್ನೂ ಓದಿ: Shivarajkumar: ಶಿವಣ್ಣ - ಚಿರಂಜೀವಿ ಭೇಟಿ.. ಮೆಗಾಸ್ಟಾರ್‌ಗೆ ಸೆಂಚ್ಯುರಿ ಸ್ಟಾರ್ ಅಭಿನಂದನೆ.!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.