ನವೀ ಮುಂಬಯಿ: ಇಲ್ಲಿನ ಯುರಾನ್ನ ಒಎನ್ಜಿಸಿ ಅನಿಲ ಸಂಸ್ಕರಣಾ ಘಟಕದಲ್ಲಿ ಸಂಭವಿಸಿದ ಭಾರೀ ಬೆಂಕಿ ಅನಾಹುತದಲ್ಲಿ ಕನಿಷ್ಠ 3 ಮಂದಿ ಸಾವನ್ನಪ್ಪಿದ್ದಾರೆ.
ಮಂಗಳವಾರ ಬೆಳಿಗ್ಗೆ ಸುಮಾರು 7.20ರ ಸಮಯದಲ್ಲಿ ಸ್ಥಾವರದ ಕೋಲ್ಡ್ ಸ್ಟೋರೇಜ್ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡ ಬಳಿಕ ಈ ಅವಘಡ ಸಂಭವಿಸಿದೆ. ಆದರೆ, ಘಟನೆಗೆ ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಅವಘಡವನ್ನು ತಪ್ಪಿಸಲು ಗುಜರಾತ್ನ ಹಜೀರಾದಲ್ಲಿರುವ ಸ್ಥಾವರಕ್ಕೆ ಅನಿಲ ಮಾರ್ಗವನ್ನು ತಿರುಗಿಸಲಾಗಿದೆ ಎಂದು ಒಎನ್ಜಿಸಿ ತಿಳಿಸಿದೆ.
ONGC: A fire broke out in storm water drainage, today morning in Uran oil & gas processing plant. ONGC fire services & crisis management team immediately pressed into action. Fire is being contained. No impact on Oil processing. Gas diverted to Hazira Plant. #Maharashtra https://t.co/co3OoHhOjP
— ANI (@ANI) September 3, 2019
ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.