ಮಂಗಳವಾರ ಹೈದರಾಬಾದ್ನಲ್ಲಿ ಬಿಸಿಸಿಐ ವಾರ್ಷಿಕ ಪ್ರಶಸ್ತಿಗಳನ್ನು ವಿತರಿಸಲಾಯಿತು. 2019 ರಿಂದ ಮೊದಲ ಬಾರಿಗೆ ಮಂಡಳಿಯು ಆಟಗಾರರಿಗೆ ಪ್ರಶಸ್ತಿಗಳನ್ನು ನೀಡಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಗೂ ಮುನ್ನ ಬಿಸಿಸಿಐ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಶ್ರೇಷ್ಠ ಆಟಗಾರ ಫಾರೂಕ್ ಇಂಜಿನಿಯರ್ ಅವರಿಗೆ ಕರ್ನಲ್ ಸಿಎಕೆ ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಯಿತು
ಆಟಗಾರರೊಂದಿಗೆ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಕೂಡ ಆಗಮಿಸಿದ್ದರು.
2023 ರ ಭಾರತದ ಅತ್ಯುತ್ತಮ ಆಟಗಾರನಾಗಿ ಶುಭಮನ್ ಗಿಲ್ ಆಯ್ಕೆಯಾದರು. ಮೊಹಮ್ಮದ್ ಶಮಿ 2019-20, ರವಿಚಂದ್ರನ್ ಅಶ್ವಿನ್ 2020-21 ಮತ್ತು ಜಸ್ಪ್ರೀತ್ ಬುಮ್ರಾ ಅವರಿಗೆ 2021-22 ಈ ಪ್ರಶಸ್ತಿಯನ್ನು ನೀಡಲಾಗಿದೆ.
ಭಾರತ ಟೆಸ್ಟ್ ತಂಡದ ಎಲ್ಲಾ ಆಟಗಾರರು ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ್ದರು.