ಕೇಪ್ ಟೌನ್: ಪ್ರಸ್ತುತ ದಕ್ಷಿಣ ಆಫ್ರಿಕಾದಲ್ಲಿ ಎಸ್ಎ20 ಲೀಗ್ ಆರಂಭಗೊಂಡಿದೆ. ಎಸ್ಎ20 ಲೀಗ್‌ನಲ್ಲಿ ಲೈವ್ ಪಂದ್ಯದ ವೇಳೆ, ಕ್ರೀಡಾಂಗಣದಲ್ಲಿದ್ದ ಮಹಿಳಾ ಅಭಿಮಾನಿಯೊಬ್ಬರು ಕೃತ್ಯವೊಂದನ್ನು ಎಸಗಿ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸಂಚಲನ ಮೂಡಿಸಿದ್ದಾರೆ. ಎಸ್ಎ20 ಲೀಗ್‌ನಲ್ಲಿ ಮುಂಬೈ ಕೇಪ್ ಟೌನ್ ಮತ್ತು ಪಾರ್ಲ್ ರಾಯಲ್ಸ್ ನಡುವಿನ ನೇರ ಪಂದ್ಯದ ವೇಳೆ, ಕ್ರೀಡಾಂಗಣದಲ್ಲಿದ್ದ ಮಹಿಳಾ ಅಭಿಮಾನಿಯೊಬ್ಬರು ತನ್ನ ಸಮೀಪದಲ್ಲಿ ಕುಳಿತಿದ್ದ ಅಂಕಲ್ ಕೈಯಿಂದ ಬಿಯರ್ ಗ್ಲಾಸ್ ಅನ್ನು ಕಸಿದುಕೊಂಡಿದ್ದಾಳೆ. ಅಷ್ಟೇ ಅಲ್ಲ ಆ ಹುಡುಗಿ ಒಂದೇ ಬಾರಿಗೆ ಟಾಪ್ ಟು ಬಾಟಮ್ ಬಿಯರ್ ಗ್ಲಾಸ್ ಖಾಲಿ ಮಾಡಿದ್ದಾಳೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. (Viral News In Kannada)
ಇದನ್ನೂ ಓದಿ-Shocking Video: ಹೊಸ ವರ್ಷದ ಪಾರ್ಟಿಯಲ್ಲಿ ಫುಲ್ ಟಲ್ಲಿಯಾಗಿ ದಾಂಧಲೆ ಮಾಡಿದ ಯುವತಿ... ಇಲ್ಲಿದೆ ವಿಡಿಯೋ!
ಲೈವ್ ಪಂದ್ಯದಲ್ಲಿ ಅಂಕಲ್ ಕೈಯಿಂದ ಬಿಯರ್ ಕಸಿದುಕೊಂಡ ಯುವತಿ
ವಾಸ್ತವದಲ್ಲಿ, ಎಸ್ಎ20 ಲೀಗ್‌ನಲ್ಲಿ, ಶುಕ್ರವಾರ ಕೇಪ್ ಟೌನ್ ಮೈದಾನದಲ್ಲಿ ಪಾರ್ಲ್ ರಾಯಲ್ಸ್ ಮತ್ತು ಮುಂಬೈ ಕೇಪ್ ಟೌನ್ ನಡುವೆ ಪಂದ್ಯ ನಡೆಯುತ್ತಿತ್ತು. ಈ ಪಂದ್ಯದಲ್ಲಿ ಮುಂಬೈ ಕೇಪ್ ಟೌನ್ 8 ವಿಕೆಟ್ ಗಳಿಂದ ಪಾರ್ಲ್ ರಾಯಲ್ಸ್ ತಂಡವನ್ನು ಸೋಲಿಸಿತು. ಪಾರ್ಲ್ ರಾಯಲ್ಸ್ ಮತ್ತು ಮುಂಬೈ ಕೇಪ್ ಟೌನ್ ನಡುವಿನ ಪಂದ್ಯವನ್ನು ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳು ಸಖತ್ ಎಂಜಾಯ್ ಮಾಡುತ್ತಿದ್ದರು. ಪಂದ್ಯದ ವೇಳೆ, ಇದ್ದಕ್ಕಿದ್ದಂತೆ ಕ್ಯಾಮೆರಾ ಕಣ್ಣು ಯುವತಿಯೊರ್ವಳ ಮೇಲೆ ಬಿದ್ದಿದೆ, ಆಕೆ ಮಾಡಿರುವ ಒಂದು ಕೆಲಸ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಮಹಿಳಾ ಅಭಿಮಾನಿ ತನ್ನ ಪಕ್ಕದಲ್ಲಿ ಕುಳಿತಿದ್ದ ಅಂಕಲ್ ಕೈಯಿಂದ ಬಿಯರ್ ಗ್ಲಾಸ್ ಕಸಿದುಕೊಂಡು ಒಂದೇ ಎಟಿಗೆ ಟಾಪ್ ಟು ಬಾಟಮ್ ಖಾಲಿ ಮಾಡುತ್ತಾಳೆ, ಆಕೆಯ ಈ ಕೃತ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ
ಒಂದೇ ಬಾರಿಗೆ ಸಂಪೂರ್ಣ ಗ್ಲಾಸ್ ಖಾಲಿ
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋಗೆ ಅಭಿಮಾನಿಗಳು ತೀವ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಒಂದೇ ಗುಟುಕಿನಲ್ಲಿ ಬಿಯರ್ ಗ್ಲಾಸ್ ಮುಗಿಸಿದ ಈ ಯುವತಿಯನ್ನು ನೋಡಿ ಕಾಮೆಂಟೇಟರ್ಸ್ ಕೂಡ ಅಚ್ಚರಿಗೊಂಡಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾರ್ಲ್ ರಾಯಲ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 172 ರನ್ ಗಳಿಸಿ, ಮುಂಬೈ ಕೇಪ್ ಟೌನ್‌ಗೆ 173 ರನ್‌ಗಳ ಗುರಿಯನ್ನು ನೀಡಿತ್ತು. ಅದಕ್ಕೆ ಉತ್ತರಿಸಿದ ಮುಂಬೈ ಕೇಪ್ ಟೌನ್ ತಂಡ 16.5 ಓವರ್ ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ನಿಗದಿತ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಮುಂಬೈ ಕೇಪ್ ಟೌನ್ 8 ವಿಕೆಟ್ ಗಳಿಂದ ಪಾರ್ಲ್ ರಾಯಲ್ಸ್ ತಂಡವನ್ನು ಸೋಲಿಸಿದೇ. ಮುಂಬೈ ಕೇಪ್ ಟೌನ್ ಪಂದ್ಯವನ್ನು ಗೆದ್ದಿರಬಹುದು ಆದರೆ ಪಂದ್ಯಕ್ಕಿಂತ ಹೆಚ್ಚಾಗಿ ಒಂದು ಗ್ಲಾಸ್ ಬಿಯರ್ ಕುಡಿದ ಮಹಿಳಾ ಅಭಿಮಾನಿಯ ಬಗ್ಗೆ ಇದೀಗ ಹೆಚ್ಚು ಚರ್ಚೆ ಆರಂಭಗೊಂಡಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: https://twitter.com/i/status/1748402047668437212
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ