ಮುಂಬೈ : ಭಾರತದ ಪ್ರಥಮ ಹವಾನಿಯಂತ್ರಿತ ಸ್ಥಳೀಯ ರೈಲು ಸಂಚಾರ ಸೇವೆಯು ಪಶ್ಚಿಮ ರೈಲ್ವೆಯಲ್ಲಿ ಮುಂಬಯಿ ಉಪನಗರ ಸಾರಿಗೆ ವಿಭಾಗದ ಬೋರಿವಲಿ-ಚರ್ಚೆಟ್ ವಿಭಾಗದಲ್ಲಿ ಇಂದಿನಿಂದ ಆರಂಭವಾಗಲಿದೆ.
ಪ್ರಾಯೋಗಿಕವಾಗಿ ಡಿಸೆಂಬರ್ 31 ರವರೆಗೆ ಎಸಿ ಸ್ಥಳೀಯ ರೈಲು ಸಂಚಾರವು ಚರ್ಚ್ಗೇಟ್-ಬೋರಿವಲಿ ವಿಭಾಗದಲ್ಲಿ ಮಾತ್ರ ಕಾರ್ಯ ನಿರ್ವಹಿಸಲಿದೆ. ಜನವರಿಯಿಂದ 1, ದಿನಕ್ಕೆ 12 ಸೇವೆಗಳೊಂದಿಗೆ ಚರ್ಚ್ ಗೇಟ್ನಿಂದ ವಿರಾರ್ಗೆ ಸಂಚಾರ ಆರಂಭವಾಗಲಿದೆ.
"ಜನವರಿ 1, 2018, ಎಸಿ ಉಪನಗರ ರೈಲುಗಳ ಒಟ್ಟು 12 ಸೇವೆಗಳು (ಕೆಳಮುಖವಾಗಿ 6 ಸೇವೆಗಳು ಮತ್ತು ಮೇಲ್ಮುಖವಾಗಿ 6 ಸೇವೆಗಳು) ಸೋಮವಾರದಿಂದ ಶುಕ್ರವಾರದ ವರೆಗೆ ಮಾತ್ರ ವಾರದ ದಿನಗಳಲ್ಲಿ ಕಾರ್ಯಾಚರಿಸಲ್ಪಡುತ್ತವೆ. ಶನಿವಾರ ಮತ್ತು ಭಾನುವಾರದಂದು ಎಸಿ ಸ್ಥಳೀಯ ರೈಲು ನಿರ್ವಹಣಾ ಉದ್ದೇಶಕ್ಕಾಗಿ ಕಾರ್ಯನಿರ್ವಹಿಸುವುದಿಲ್ಲ" ಅಧಿಕೃತ ಮೂಲಗಳು ತಿಳಿಸಿವೆ.
12 ಎಸಿ ಸ್ಥಳೀಯ ಸೇವೆಗಳಲ್ಲಿ ಚರ್ಚ್ಗೇಟ್ ಮತ್ತು ವಿರಾರ್ ನಡುವೆ ವೇಗದ ಸ್ಥಳೀಯ ರೈಲುಗಳಂತೆ 8 ರೈಲುಗಳು ಸಂಚರಿಸಲಿವೆ. ಮುಂಬೈ ಸೆಂಟ್ರಲ್, ದಾದರ್, ಬಾಂದ್ರಾ, ಅಂಧೇರಿ, ಬೋರಿವಲಿ, ಭಯಾಂದರ್ ಮತ್ತು ವಸಾಯಿ ಮಾರ್ಗಗಳಲ್ಲಿ ಎರಡೂ ದಿಕ್ಕುಗಳಲ್ಲಿ ಸಂಚರಿಸಲಿದೆ.
ಚರ್ಚ್ಗೇಟ್ ಮತ್ತು ಬೋರಿವಲಿ ನಿಲ್ದಾಣಗಳ ನಡುವೆ ಮೂರೂ ವೇಗದ ರೈಲು ಸೇವೆಗಲಿದ್ದು, ಮುಂಬೈ ಸೆಂಟ್ರಲ್, ದಾದರ್, ಬಾಂದ್ರಾ ಮತ್ತು ಅಂಧೇರಿ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಾಗಿದೆ. ಹಾಗೆಯೇ ಮಹಾಲಕ್ಷ್ಮೀ ಮತ್ತು ಬೋರಿವಾಲಿ ನಡುವೆ ಒಂದು ನಿಧಾನ ಸೇವೆಯು ಬೆಳಿಗ್ಗೆ 6.58 ಗಂಟೆಗೆ ಹೊರಡಲಿದೆ.
ಎಸಿ ಸ್ಥಳೀಯ ರೈಲಿನ ಪ್ರಯಾಣದ ಮೂಲ ಶುಲ್ಕವು ಪ್ರಥಮ ದರ್ಜೆ ರೈಲು ಪ್ರಯಾಣಕ್ಕಿಂತ 1.3 ಹೆಚ್ಚಾಗಲಿದ್ದು, ಒಂದು ಪ್ರಯಾಣಕ್ಕೆ ಮಾತ್ರ ಸೀಮಿತವಾಗಲಿದೆ ಎಂದು ರೈಲ್ವೆ ಸಚಿವಾಲಯವು ತಿಳಿಸಿದೆ.
"ಆದಾಗ್ಯೂ, ಆರಂಭಿಕ ಆರು ತಿಂಗಳ ಅವಧಿಯ ಒಂದು ಪರಿಚಯಾತ್ಮಕ ಪ್ರಸ್ತಾವನೆಯಂತೆ, AC EMU ನ ಏಕೈಕ ಪ್ರಯಾಣದ ಆರಂಭಿಕ ಶುಲ್ಕವನ್ನು ಪ್ರಥಮ ದರ್ಜೆಯ ಏಕೈಕ ಪ್ರಯಾಣ ಟಿಕೆಟ್ ಶುಲ್ಕಕ್ಕಿಂತ ಕೇವಲ 1.2 ರಷ್ಟು ವಿಧಿಸಲಾಗುವುದು" ಎಂದು ಹೇಳಿಕೆ ತಿಳಿಸಿದೆ.
ಸಾಪ್ತಾಹಿಕ, ಹದಿನೈದು ಮತ್ತು ಮಾಸಿಕ ಋತುಮಾನದ ಟಿಕೇಟ್ಗಳು ಕ್ರಮವಾಗಿ ಎಸಿ ಸ್ಥಳೀಯ 5, 7.5 ಮತ್ತು 10 ಏಕ ಪ್ರಯಾಣಗಳಿಗೆ ಸಮನಾಗಿರುತ್ತದೆ. ಎಸಿ ಸ್ಥಳೀಯ ಟಿಕೆಟ್-ಹೊಂದಿರುವವರು ಸಾಮಾನ್ಯ ಸ್ಥಳೀಯ ರೈಲುಗಳ ಪ್ರಥಮ ದರ್ಜೆಯ ವಿಭಾಗಗಳಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗಿದ್ದು, ಈ ಸೇವೆಗೆ ಯಾವುದೇ ರೀತಿಯ ಟಿಕೆಟ್ಗಳನ್ನು ನೀಡಲಾಗುವುದಿಲ್ಲ ಎಂದು ಸಚಿವಾಲಯ ಹೇಳಿದೆ.