ಧ್ರುವ ಸರ್ಜಾ ನ 'ಭರ್ಜರಿ' ಶತಕ

   

Last Updated : Dec 23, 2017, 06:10 PM IST
  • 2012 ರಲ್ಲಿ ಅದ್ದೂರಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಧ್ರುವ ತಮ್ಮ ಮೊದಲ ಚಿತ್ರದದಲ್ಲಿ ಅದ್ದೂರಿ ಯಶಸ್ಸನ್ನು ಪಡೆದರು. ಆ ಮೂಲಕ SIIMA ನಲ್ಲಿ ಉತ್ತಮ ಪಾದಾರ್ಪಣೆಯ ನಟ ಎಂಬ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
  • ತಮ್ಮ ಡಾನ್ಸ್ ಹಾಗೂ ಆಕ್ಷನ್ ಮೂಲಕ ಕನ್ನಡ ಚಿತ್ರ ರಂಗದಲ್ಲಿ ತಮ್ಮದೇ ಛಾಪು ಮೂಡಿಸುತ್ತಿರುವ ಧ್ರುವ ಕನ್ನಡದ ಯುವ ಪ್ರೇಕ್ಷಕರ ಕಣ್ಮಣಿಯಾಗಿದ್ದಾರೆ.
ಧ್ರುವ ಸರ್ಜಾ ನ 'ಭರ್ಜರಿ' ಶತಕ  title=

ಧ್ರುವ ಸರ್ಜಾ ತಮ್ಮ ಮೂರನೇ ಸಿನಿಮಾ 'ಭರ್ಜರಿ' ಯಲ್ಲಿ  ಶತಕ ಗಳಿಸಿದ್ದಾರೆ. 

ಹೌದು, ಈ ಕನ್ನಡದ ಹೊಸ ತಲೆಮಾರಿನ ನಟ ಧ್ರುವ ತಾವು ನಟಿಸಿರುವ ಮೂರು ಚಿತ್ರಗಳು ಸ್ಯಾಂಡಲವುಡ್ ನಲ್ಲಿ ಹ್ಯಾಟ್ರಿಕ್ ಬ್ಲಾಕ್ ಬ್ಲಾಸ್ಟರ್ ಆಗಿದ್ದು ಆ ಮೂಲಕ ಕನ್ನಡದಲ್ಲಿ ಶಿವರಾಜಕುಮಾರ್, ಪುನೀತ್ ನಂತರ ,ತಾವು ನಟಿಸಿದ ಮೊದಲ ಮೂರು ಚಿತ್ರಗಳು ಬಾಕ್ಸ್ ಆಫಿಸ್ ನಲ್ಲಿ ಕೊಳ್ಳೆ ಹೊಡೆದ ಸಾಧನೆ ಮಾಡಿದವರ ಸಾಲಿಗೆ ಸೇರಿದರು.

2012 ರಲ್ಲಿ ಅದ್ದೂರಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಧ್ರುವ ತಮ್ಮ ಮೊದಲ ಚಿತ್ರದದಲ್ಲಿ ಅದ್ದೂರಿ ಯಶಸ್ಸನ್ನು ಪಡೆದರು. ಆ ಮೂಲಕ SIIMA ನಲ್ಲಿ ಉತ್ತಮ ಪಾದಾರ್ಪಣೆಯ ನಟ ಎಂಬ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಅನಂತರ ಬಂದಂತಹ  ಬಹದ್ದೂರ ಕೂಡ ಯಶಸ್ವಿ ಪ್ರದರ್ಶನವನ್ನು ಕಂಡಿತು. ಇದರ ನಂತರ ಬಂದಂತಹ  ಚೇತನ ಕುಮಾರ ನಿರ್ದೇಶನದ ಭರ್ಜರಿ ಕೂಡ ಈಗ ನೂರು ದಿನಗಳನ್ನು ಪೂರೈಸಿದೆ.

ತಮ್ಮ ಡಾನ್ಸ್ ಹಾಗೂ ಆಕ್ಷನ್ ಮೂಲಕ ಕನ್ನಡ ಚಿತ್ರ ರಂಗದಲ್ಲಿ ತಮ್ಮದೇ ಛಾಪು ಮೂಡಿಸುತ್ತಿರುವ ಧ್ರುವ ಕನ್ನಡದ ಯುವ ಪ್ರೇಕ್ಷಕರ ಕಣ್ಮಣಿಯಾಗಿದ್ದಾರೆ.ತಮ್ಮ ಭರ್ಜರಿ ಚಿತ್ರವು ಶತ ದಿನ ಪೋರೈಸಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಧ್ರುವ ಸರ್ಜಾ "ನಿಮ್ಮೆಲ್ಲರ ತುಂಬು ಹೃದಯದ ಪ್ರೀತಿ ಆಶೀರ್ವಾದದಿಂದ "ಭರ್ಜರಿ" ಚಿತ್ರವು ಇವತ್ತಿಗೆ 100ದಿನ  ಪೂರೈಸಿದೆ ಹೀಗೆ ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ  ಸದಾ  ನನ್ನ ಮೇಲೆ ಇರಲಿ , love you all ಜೈ  ಆಂಜನೇಯ"  ಎಂದು ಟ್ವೀಟ್ ಮೂಲಕ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

Trending News