ಅಂಜನಿಪುತ್ರ ಚಿತ್ರ ಪ್ರದರ್ಶನಕ್ಕೆ ತಾತ್ಕಾಲಿಕ ತಡೆ ನೀಡಿದ ಸಿಟಿ ಸಿವಿಲ್ ಕೋರ್ಟ್

   

Last Updated : Dec 23, 2017, 05:32 PM IST
ಅಂಜನಿಪುತ್ರ ಚಿತ್ರ ಪ್ರದರ್ಶನಕ್ಕೆ ತಾತ್ಕಾಲಿಕ ತಡೆ ನೀಡಿದ ಸಿಟಿ ಸಿವಿಲ್ ಕೋರ್ಟ್  title=

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ  'ಅಂಜನಿಪುತ್ರ' ಭರ್ಜರಿಯಾಗಿ ತನ್ನ ಓಪನಿಂಗ್ ತೆಗೆದುಕೊಂಡು ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆಹೊಡೆಯುತ್ತಿದೆ. ಆದರೆ ಈ ಚಿತ್ರ ಬಿಡುಗಡೆಯಾಗಿ ಇನ್ನು ಒಂದು ವಾರ ಕಳೆದಿಲ್ಲ ಆಗಲೇ ಚಿತ್ರಕ್ಕೆ ವಿಘ್ನವೊಂದು ಎದುರಾಗಿದೆ. 

ಏನಪ್ಪಾ ಈ ವಿಘ್ನ ಎಂದರೆ ಬೆಂಗಳೂರಿನ ನಗರದ ನ್ಯಾಯಾಲಯದಲ್ಲಿ ಅಂಜನಿಪುತ್ರ ಸಿನಿಮಾದಲ್ಲಿ ವಕೀಲರ ಕುರಿತಾಗಿ ಕೆಟ್ಟದಾಗಿ ಮಾತನಾಡಲಾಗಿದೆ ಎಂದು ಆರೋಪಿಸಿ  ಸಿಟಿ ಸಿವಿಲ್ ಕೋರ್ಟ್ ಗೆ ವಕೀಲ ನಾರಾಯಣಸ್ವಾಮಿ ಎಂಬುವವರು ಅರ್ಜಿ ಸಲ್ಲಿಸಿ 'ಅಂಜನಿಪುತ್ರ' ಸಿನಿಮಾದ ಪ್ರದರ್ಶನವನ್ನು ತಡೆಯಬೇಕು ಎಂದು ಮನವಿ ಮಾಡಿದ್ದಾರೆ. ಈ ವಕೀಲರ ಅರ್ಜಿಯನ್ನು ಮನ್ನಿಸಿರುವ ಕೋರ್ಟ್ ಅಂಜನಿಪುತ್ರ ಚಿತ್ರವನ್ನು ಜನವರಿ 2ರವರೆಗೆ  ಪ್ರದರ್ಶನ ಮಾಡಬಾರದು ಎಂದು ಕೋರ್ಟ್ ಚಿತ್ರ ತಂಡಕ್ಕೆ ಆದೇಶ ನೀಡಿದೆ.

ಈ ಸಿನಿಮಾದಲ್ಲಿ ನಟ ರವಿಶಂಕರ್ ಈ ಸಂಭಾಷಣೆಯನ್ನು ಹೇಳಿದ್ದಾರೆ.  ಆ ಡೈಲಾಗ್ ನಲ್ಲಿ  ವಿಲನ್ ಪರ ಇರುವ ವಕೀಲನಿಗೆ ಪೊಲೀಸ್ ಪಾತ್ರದಲ್ಲಿರುವ ರವಿಶಂಕರ್ ಹೇಳಿದ ಸಂಭಾಷಣೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಚಿತ್ರದಲ್ಲಿರುವ ಈ ಡೈಲಾಗ್ ಗೆ ಆಕ್ಷೇಪ ವ್ಯಕ್ತಪಡಿಸಿ  ಚಿತ್ರ ಪ್ರದರ್ಶನಕ್ಕೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. 

Trending News