Thalapathy Vijayʼs 68th Movie: ಕಾಲಿವುಡ್ ಸ್ಟಾರ್ ದಳಪತಿ ವಿಜಯ್,'ಲಿಯೋ' ಸಿನಿಮಾ ಮಾಡಿ ಗೆದ್ದ ಬಳಿಕ ಹೊಸ ಚಿತ್ರ ಘೋಷಿಸಿ, ಇದೀಗ ಟೈಟಲ್ ಸಮೇತ ಆ ಸಿನಿಮಾ ಪೋಸ್ಟರ್ ರಿಲೀಸ್ ಆಗಿದೆ. ವಿಜಯ್ ವೆಂಕಟ್ ಪ್ರಭು ಜೊತೆ 68ನೇ ಚಿತ್ರ ಮಾಡುವುದಾಗಿ ಈ ಹಿಂದೆ ಹೇಳಿದ್ದು, ಅದರಂತೆ ಹೊಸ ವರ್ಷದ ಸಂಭ್ರಮದಲ್ಲಿ ಚಿತ್ರ ಅನೌಂನ್ಸ್ ಮಾಡಲಾಗಿದೆ.
ದಳಪತಿ ವಿಜಯ್ ಹೊಸ ಚಿತ್ರಕ್ಕೆ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' (GOAT) ಎಂದು ಹೆಸರಿಡಲಾಗಿದ್ದು, ಇದನ್ನು ವೆಂಕಟ್ ಪ್ರಭು ಹೀರೋ ಎಂದು ಕರೆಯುತ್ತಾರೆ ಎಂದು ಬರೆಯಲಾಗಿದೆ. ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ದಳಪತಿ ವಿಜಯ್ ಎರಡು ಪಾತ್ರಗಳು ಪ್ಯಾರಾಚೂಟ್‌ನಿಂದ ಇಳಿದು ನಡೆದುಕೊಂಡು ಬರುವಂತೆ ಡಿಸೈನ್ ಮಾಡಿದ್ದು, ಹಾಗೇ ಎರಡು ಪಾತ್ರಗಳಲ್ಲಿ ಒಬ್ಬರು ವಯಸ್ಸಾದವರಂತೆ ಕಂಡ್ರೆ ಇನ್ನೊಬ್ಬರು ಯಂಗ್ ಆಗಿ ಕಾಣುತ್ತಾರೆ. ಚಿತ್ರಕ್ಕೆ ಯುವನ್ ಶಂಕರ್ ರಾಜ ಸಂಗೀತವಿದ್ದು 2024ರಲ್ಲೇ ಸಿನಿಮಾ ರಿಲೀಸ್ ಆಗಲಿದೆ.
ಕಾಲಿವುಡ್ ನಂಬರ್ ವನ್ ಸ್ಟಾರ್‌ಗಳಲ್ಲಿ ವಿಜಯ್ ಒಬ್ಬರಾಗಿದ್ದು, ಇವರ ಸಿನಿಮಾಗಳು ಒಂದೇ ಭಾಷೆಯಲ್ಲಿ 300ರಿಂದ 400 ಕೋಟಿ ರೂ. ಬ್ಯುಸಿನೆಸ್ ಮಾಡುತ್ತವೆ. ಅದೇ ಕಾರಣಕ್ಕೆ ರಜನಿಕಾಂತ್‌ನ ಮೀರಿಸಿದ ನಟ ವಿಜಯ್ ಎನ್ನುವಂತೆ ಇತ್ತೀಚೆಗೆ ಭಾರೀ ಚರ್ಚೆ ನಡೀತು. 'ಲಿಯೋ' ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕರೂ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ವೀಕ್ಷಿಸಿ, ಸದ್ಯ 600 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿತ್ತು.ಈ ಹಿಂದೆ ವೆಂಕಟ್ ಪ್ರಭು ಕನ್ನಡ ನಟ ಕಿಚ್ಚ ಸುದೀಪ್ ಜೊತೆ ಸಿನಿಮಾ ಮಾಡುತ್ತಾರೆ ಎಂದು ಚರ್ಚೆ ಆಗಿದ್ದು, ಆದರೆ ದಿಢೀರನೆ ಆ ಚಿತ್ರ ಪಕ್ಕಕ್ಕಿಟ್ಟ ವೆಂಕಟ್ ಈ ಸಿನಿಮಾ ಕೈಗೆತ್ತಿಕೊಂಡಿದ್ದಾರೆ.
— Vijay (@actorvijay) December 31, 2023
ನಿರ್ದೇಶಕ ವೆಂಕಟ್, 'ಮಂಗಾತ', 'ಮಾನಾಡು' ರೀತಿಯ ಹಿಟ್ ಚಿತ್ರಗಳನ್ನು ಕೊಟ್ಟವರು, ಇದೀಗ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' ಚಿತ್ರದಲ್ಲಿ ವಿಜಯ್ ಜೊತೆ ಕೈಜೋಡಿಸಿದ್ದಾರೆ. 'ಲಿಯೋ' ಸಿನಿಮಾ ತೆರೆಕಂಡ ನಾಲ್ಕೇ ದಿನಕ್ಕೆ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' ಚಿತ್ರದ ಮುಹೂರ್ತ ನೆರವೇರಿದ್ದು, ಸದ್ದಿಲ್ಲದೇ ಸಿನಿಮಾ ಚಿತ್ರೀಕರಣ ಕೂಡ ನಡೀತಿದೆ. ವರ್ಷಕ್ಕೆ ಎರಡೆರಡು ಚಿತ್ರಗಳನ್ನು ವಿಜಯ ಮಾಡುತ್ತಾ ಬರುತ್ತಿದ್ದು, ಅದರಂತೆ ಕಳೆದ ವರ್ಷ 'ಬೀಸ್ಟ್' ಸಿನಿಮಾ ಮಾಡಿ ಸೋತಿದ್ದ ವಿಜಯ್ ಈ 'ವಾರಿಸು' ಹಾಗೂ 'ಲಿಯೋ' ಸಿನಿಮಾ ಮಾಡಿ ಗೆದ್ದಿದ್ದಾರೆ.
ಇದನ್ನೂ ಓದಿ: ಸಾಯಿ ಪಲ್ಲವಿ ದತ್ತು ಪುತ್ರಿಯೇ? ಅವರ ನಿಜವಾದ ತಂದೆ ತಾಯಿ ಯಾರೆಂದು ಸೀಕ್ರೆಟ್ ಬಿಚ್ಚಿಟ್ಟ ಸ್ಟಾರ್ ಬ್ಯೂಟಿ
'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' ಚಿತ್ರದಲ್ಲಿ ಸ್ನೇಹಾ, ಪ್ರಶಾಂತ್, ಪ್ರಭುದೇವ, ಲೈಲಾ, ಮೀನಾಕ್ಷಿ ಚೌಧರಿ, ಜಯರಾಮ್, ಯೋಗಿ ಬಾಬು ಹೀಗೆ ದೊಡ್ಡ ತಾರಾಗಣವಿದ್ದು, ಈ ಸಿನಿಮಾಗೆ ಸಿದ್ದಾರ್ತ್ ನುನಿ ಛಾಯಾಗ್ರಹಣ ಚಿತ್ರಕ್ಕಿದೆ. 2024ರ ದೀಪಾವಳಿ ವೇಳೆಗೆ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದ್ದು, ಚಿತ್ರಕ್ಕೆ ಈ ಹಿಂದೆ 'ಬಾಸ್' ಅಥವಾ 'ಪಝಲ್' ಎನ್ನುವ ಟೈಟಲ್ ಇಡುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗಿತ್ತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ