ನೋಯ್ಡಾ ಸೇರಿದಂತೆ ದೆಹಲಿ-ಎನ್ಸಿಆರ್ನ ಅನೇಕ ಪ್ರದೇಶಗಳಲ್ಲಿ ಲಘು ಮಳೆಯಾಗಿದೆ, ಈ ಕಾರಣದಿಂದಾಗಿ ಬಿಸಿಲಿನ ಬೇಗೆಯಲ್ಲಿ ಬೆಂದಿದ್ದ ಜನರಿಗೆ ಕೊಂಚ ಸಮಾಧಾನ ಸಿಕ್ಕಂತಾಗಿದೆ.
ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಮಂಗಳವಾರ ಬೆಳಿಗ್ಗೆ ಮಳೆರಾಯ ತಂಪೆರೆದು ಜನರಿಗೆ ನೆಮ್ಮದಿ ನೀಡಿದ್ದಾನೆ. ಮಂಗಳವಾರ ಬೆಳಿಗ್ಗೆ ನೊಯ್ಡಾ ಸೇರಿದಂತೆ ದೆಹಲಿ-ಎನ್ಸಿಆರ್ನ ಅನೇಕ ಪ್ರದೇಶಗಳಲ್ಲಿ ಲಘು ಮಳೆಯಾಗಿದೆ, ಈ ಕಾರಣದಿಂದಾಗಿ ಬಿಸಿಲಿನ ಬೇಗೆಯಲ್ಲಿ ಬೆಂದಿದ್ದ ಜನರಿಗೆ ಕೊಂಚ ಸಮಾಧಾನ ಸಿಕ್ಕಂತಾಗಿದೆ. ಇಂದು ಬೆಳಿಗ್ಗೆ 8 ಗಂಟೆಗೆ ದೆಹಲಿಯ ತಾಪಮಾನವು 27 ಡಿಗ್ರಿ ಸೆಲ್ಸಿಯಸ್ನಷ್ಟು ದಾಖಲಾಗಿದೆ. ದೆಹಲಿಯಲ್ಲಿ ಗುಡುಗು ಸಹಿತ ಲಘು ಮಳೆಯಾಗುವ ಸಾಧ್ಯತೆಯಿದ್ದು, ಬುಧವಾರವೂ ಇದೇ ರೀತಿಯ ಹವಾಮಾನ ಮುಂದುವರೆಯಲಿದೆ ಎಂದು ಹೇಳಲಾಗಿದೆ.
ದೆಹಲಿಯಲ್ಲಿ ಇಂದು ಕನಿಷ್ಠ 27 ° C ತಾಪಮಾನ ದಾಖಲಾಗಿದ್ದು, ಗರಿಷ್ಠ ಪಾದರಸವು 33° C ತಲುಪುವ ನಿರೀಕ್ಷೆಯಿದೆ. ಹವಾಮಾನ ಇಲಾಖೆಯ ಪ್ರಕಾರ, ದೆಹಲಿಯಲ್ಲಿ ಮುಂದಿನ ಎರಡು ದಿನಗಳವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇಲ್ಲ.
ರಾಷ್ಟ್ರ ರಾಜಧಾನಿಯ ಅನೇಕ ಪ್ರದೇಶಗಳಲ್ಲಿ ಭಾರಿ ಮಳೆಯಿಂದಾಗಿ, ಜಾಮ್ನ ಪರಿಸ್ಥಿತಿಗಳೂ ಸೃಷ್ಟಿಯಾಗಿದ್ದವು. ಆದರೆ, ಈ ಭಾರಿ ಮಳೆಯಿಂದಾಗಿ ಹವಾಮಾನವು ಆಹ್ಲಾದಕರವಾಗಿ ಎಲ್ಲರ ಮನ ತಣಿಸಿದೆ. ಇದರಿಂದಾಗಿ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಕಳೆದ ಕೆಲವು ದಿನಗಳಿಂದ ದೆಹಲಿ-ಎನ್ಸಿಆರ್ ಜನರು ಬಿಸಿಲಿನ ಬೇಗೆಯನ್ನು ಎದುರಿಸುತ್ತಿದ್ದರು, ಇದು ಜನರನ್ನು ತೀವ್ರ ಅಸಮಾಧಾನಗೊಳಿಸಿತು. ಅಂತಹ ಪರಿಸ್ಥಿತಿಯಲ್ಲಿ, ಈ ಮಳೆಯು ಜನರ ಸಮಸ್ಯೆಗಳನ್ನು ಬಹಳ ಮಟ್ಟಿಗೆ ಕಡಿಮೆ ಮಾಡಿದೆ.
ಹವಾಮಾನ ಇಲಾಖೆ ಈಗಾಗಲೇ ಮಂಗಳವಾರ ಆರೆಂಜ್ ಅಲರ್ಟ್ ನೀಡಿದ್ದು, ಈ ಪ್ರದೇಶದಲ್ಲಿ ಇಂದು ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೇ ಎಂದು ತಿಳಿಸಿದೆ. (ಎಲ್ಲಾ ಫೋಟೋಗಳನ್ನು ANI ನಿಂದ ತೆಗೆದುಕೊಳ್ಳಲಾಗಿದೆ)