ನವದೆಹಲಿ: ಮುಂಬೈ, ದೆಹಲಿ, ಎನ್ಸಿಆರ್, ಅಸ್ಸಾಂ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಮಹಾರಾಷ್ಟ್ರದಲ್ಲಿ ರೆಡ್ ಅಲರ್ಟ್
ಭಾರತೀಯ ಹವಾಮಾನ ಇಲಾಖೆಯು ಮಹಾರಾಷ್ಟ್ರ, ಕೊಂಕಣ ಮತ್ತು ಗೋವಾದಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಈ ರಾಜ್ಯಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಜನರು ಸಮುದ್ರ ತೀರಗಳಿಂದ ದೂರ ಉಳಿಯಲು ಸೂಚಿಸಿದೆ.
#WATCH Maharashtra: Streets waterlogged & houses submerged in water, after heavy rainfall in Palghar. pic.twitter.com/Z32Jj1htaM
— ANI (@ANI) August 3, 2019
ಈ ರಾಜ್ಯಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ
ಉಳಿದಂತೆ ಪೂರ್ವ ರಾಜಸ್ಥಾನ, ಮಧ್ಯಪ್ರದೇಶ, ವಿದರ್ಭ, ಛತ್ತೀಸ್ಗಡ, ಉತ್ತರಾಖಂಡ ಮತ್ತು ಒಡಿಶಾದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಈ ರಾಜ್ಯಗಳಲ್ಲಿ ಭಾರತೀಯ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ಘೋಷಿಸಿದೆ. ಪೂರ್ವ ದೆಹಲಿ, ಮೋದಿ ನಗರ, ಗಾಜಿಯಾಬಾದ್, ಚಪ್ರೋಲಾ, ಫರಿದಾಬಾದ್, ಪಾಲ್ವಾಲ್, ಸೊಹ್ನಾ, ಬಿಜ್ನೋರ್, ರೂರ್ಕಿ, ಜಹಾಂಗೀರಾಬಾದ್, ಗುಲೋತಿ, ಬುಲಂದ್ಶಹರ್, ಅಲೀಗಢ, ಅಮ್ರೋಹಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.