ನವದೆಹಲಿ: ಶ್ರೀಲಂಕಾದ ವೇಗದ ಬೌಲರ್ ಲಸಿತ್ ಮಾಲಿಂಗ ಅವರು ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯವು ತಮ್ಮ ವಿದಾಯದ ಏಕದಿನ ಪಂದ್ಯ ಎಂದು ಘೋಷಿಸಿದ್ದರು.ಈ ಹಿನ್ನಲೆಯಲ್ಲಿ ಈಗ ಅವರು ಏಕದಿನ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ.
ಈ ಸರಣಿಯ 22 ಸದಸ್ಯರ ಶ್ರೀಲಂಕಾ ತಂಡದಲ್ಲಿ ಮಾಲಿಂಗ ಅವರನ್ನು ಹೆಸರಿಸಲಾಗಿದ್ದು, ಜುಲೈ 26, 28 ಮತ್ತು 31 ರಂದು ಪಂದ್ಯಗಳನ್ನು ನಿಗದಿಪಡಿಸಲಾಗಿದೆ. ಆದರೆ, ಶ್ರೀಲಂಕಾ ರಾಜಧಾನಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ದಿಮುತ್ ಕರುಣರತ್ನ ವೇಗದ ಬೌಲರ್ ಮತ್ತು ಮಾಜಿ ನಾಯಕ ಮೊದಲ ಏಕದಿನ ಪಂದ್ಯದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ ಎಂದು ಧೃಡಪಡಿಸಿದ್ದರು.
Lasith Malinga ends his ODI career with 338 wickets, as the 9th highest wicket-taker in the format; third highest for Sri Lanka! #ThankYouMalinga #LEGEND pic.twitter.com/dvRy80DTgj
— Sri Lanka Cricket 🇱🇰 (@OfficialSLC) July 26, 2019
ಮಾಲಿಂಗ್ ಏಕದಿನ ಪಂದ್ಯಗಳಲ್ಲಿ ಶ್ರೀಲಂಕಾದ ಪರವಾಗಿ ಮೂರನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.ಅವರು 219 ಇನ್ನಿಂಗ್ಸ್ಗಳಲ್ಲಿ 335 ವಿಕೆಟ್ ಗಳನ್ನು ಪಡೆದಿದ್ದಾರೆ. ಮುತ್ತಯ್ಯ ಮುರಳೀಧರನ್ ಮತ್ತು ಚಮಿಂದ ವಾಸ್ ಅತಿ ಹೆಚ್ಚು ವಿಕೆಟ್ ಪಡೆದುಕೊಂಡ ಇತರ ಬೌಲರ್ ಗಳಾಗಿದ್ದಾರೆ.
ಮಾಲಿಂಗ 2011 ರಲ್ಲಿ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತರಾದರು, ಆದರೆ ಇತರ ಸ್ವರೂಪದ ಕ್ರಿಕೆಟಿನಲ್ಲಿ ಆಡುತ್ತಲೇ ಇದ್ದರು. 2004 ರಲ್ಲಿ ದಂಬುಲ್ಲಾದಲ್ಲಿ ಯುಎಇ ವಿರುದ್ಧ ಏಕದಿನ ಚೊಚ್ಚಲ ಪಂದ್ಯವನ್ನಾಡಿದರು. 2007 ರಲ್ಲಿ ಗಯಾನಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ವಿಶ್ವಕಪ್ ಪಂದ್ಯದ ಸಂದರ್ಭದಲ್ಲಿ ಏಕದಿನ ಪಂದ್ಯಗಳಲ್ಲಿ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಪಡೆದ ಏಕೈಕ ಆಟಗಾರ ಎನ್ನುವ ಖ್ಯಾತಿಯನ್ನು ಪಡೆದಿದ್ದಾರೆ. 2011 ರಲ್ಲಿ ಕೀನ್ಯಾ ಮತ್ತು ಆಸ್ಟ್ರೇಲಿಯಾ ವಿರುದ್ಧ ಮಾಲಿಂಗ ಎರಡು ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.