ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಅವರು ಮದುವೆಯ ಆರತಕ್ಷತೆ ಗುರುವಾರ ರಾತ್ರಿ ದೆಹಲಿಯ ಹೋಟೆಲ್ ತಾಜ್ನಲ್ಲಿ ನಡೆಯಿತು. ಈ ಅದ್ಧೂರಿ ಆರತಕ್ಷತೆಯಲ್ಲಿ ದಂಪತಿಗಳು ಸಾಂಪ್ರದಾಯಿಕ ಉಡುಗೆಯಲ್ಲಿ ಎಲ್ಲರ ಕಣ್ಮನ ಸೆಳೆದರು.
ಈ ರಾಯಲ್ ರಿಸೆಪ್ಷನ್ ಪಾರ್ಟಿಯಲ್ಲಿ ಜಹೀರ್ ಖಾನ್, ಗೌತಮ್ ಗಂಭೀರ್, ಆಶಿಶ್ ನೆಹ್ರಾ, ವೀರೇಂದ್ರ ಸೆಹ್ವಾಗ್ ಮತ್ತು ಯುವರಾಜ್ ಸಿಂಗ್ ಕುಟುಂಬದೊಂದಿಗೆ ಭಾಗಿಯಾದರು.
ಪ್ರಧಾನಿ ನರೇಂದ್ರ ಮೋದಿ ಕೂಡ ವಿರುಷ್ಕಾ ಗ್ರಾಂಡ್ ರಿಸೆಪ್ಷನ್ ನಲ್ಲಿ ಭಾಗಿಯಾದರು.
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಬುಧವಾರ ಸಂಜೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು.
ಪ್ರಧಾನಿ ಮೋದಿ ಈ ಜೋಡಿ ಮದುವೆಗಾಗಿ ಅಭಿನಂದಿಸಿದ್ದಾರೆ.
ವಿರಾಟ್ ಮತ್ತು ಅನುಷ್ಕಾ ಇಟಲಿಯಲ್ಲಿ ಅತ್ಯಂತ ಸುಂದರ ಸ್ಥಳದಲ್ಲಿ ಡಿಸೆಂಬರ್ 11 ರಂದು ವಿವಾಹವಾದರು. ಡಿಸೆಂಬರ್ 26 ರಂದು ಈ ಜೋಡಿ ಮುಂಬೈನಲ್ಲಿ ಆರತಕ್ಷತೆಯನ್ನು ನೀಡಲಿದೆ.
ಮುಂಬಯಿನಲ್ಲಿ ನಡೆಯಲಿರುವ ಆರತಕ್ಷತೆ ನಂತರ ಇಬ್ಬರೂ ಮಧುಚಂದ್ರಕ್ಕೆ ಹೋಗುತ್ತಾರೆಂದು ವರದಿಗಳು ತಿಳಿಸಿದ್ದು, ಹೊಸ ವರ್ಷದ ಆಚರಣೆಯನ್ನು ವಿದೇಶದಲ್ಲಿ ಆಚರಿಸಲಾಗುತ್ತದೆ.
ವಿರಾಟ್ ಮದುವೆಗಾಗಿ ಕ್ರಿಕೆಟ್ನಿಂದ ವಿರಾಮವನ್ನು ತೆಗೆದುಕೊಂಡಿದ್ದಾರೆ. ಅವರು ಶ್ರೀಲಂಕಾ ಜೊತೆ ಏಕದಿನ ಮತ್ತು ಟಿ -20 ಸರಣಿಯಲ್ಲಿ ಆಡುತ್ತಿಲ್ಲ.
ವಿರಾಟ್ನ ಸ್ಥಾನದಲ್ಲಿ ರೋಹಿತ್ ಶರ್ಮಾ ತಂಡದ ನಾಯಕತ್ವ ವಹಿಸುತ್ತಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಸೌಂದರ್ಯ ಆರತಕ್ಷತೆಯಲ್ಲಿ ಎಲ್ಲರ ಕಣ್ಮನ ಸೆಳೆಯಿತು.
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತಮ್ಮ ಆರತಕ್ಷತೆ ಸಮಾರಂಭದಲ್ಲಿ ಯಾವುದೇ ರಾಯಲ್ ದಂಪತಿಗಿಂತ ಕಡಿಮೆಯಿಲ್ಲ ಎಂಬಂತೆ ಕಾಣುತ್ತಿದ್ದರು.
ಭಾರತದಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಬ್ಬರೂ ಪ್ರಸ್ತುತ ಚರ್ಚೆಯಲ್ಲಿರುವ ಜೋಡಿಯಾಗಿದ್ದಾರೆ.
ವಿರಾಟ್ ಕೊಹ್ಲಿ - ಅನುಷ್ಕಾ ಶರ್ಮ ಅವರ ವಸ್ತ್ರ ವಿನ್ಯಾಸ ಮಾಡಿದವರು ಸಬ್ಯಾಸಾಚಿ ಮುಖರ್ಜಿ. ಫೋಟೋ ಕ್ರೆಡಿಟ್: ಪಿಟಿಐ