Silk Smitha bitten apple sold at auction: ವಿಜಯಲಕ್ಷ್ಮಿ ವಡ್ಲಪಟ್ಲ 1981ರಲ್ಲಿ ತಮಿಳು ಸಿನಿಮಾ ವಂಡಿಚಕ್ಕರಂ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಸಿಲ್ಕ್ ಪಾತ್ರದಿಂದ ಮೊದಲ ಸಲದಲ್ಲೇ ಪ್ರೇಕ್ಷಕರ ಹೃದಯ ಗೆದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ವಂಡಿಚಕ್ಕರಂ ಸಿನಿಮಾ ಹಿಟ್ ಆಗ್ತಿದ್ದಂತೆಯೇ ವಿಜಯಕ್ಷ್ಮಿ ಲಕ್ ಬದಲಾಯ್ತು. ಚಿತ್ರರಂಗದಲ್ಲಿ ಸಿಲ್ಕ್ ಸ್ಮಿತಾ ಎಂದೇ ಫೇಮಸ್ ಆದರು.
ಚೆನ್ನೈನ ಹೆಸರಾಂತ ಎವಿಎಂ ಸ್ಟುಡಿಯೋ ಬಳಿ ಒಮ್ಮೆ ಸ್ಮಿತಾಳ ನೃತ್ಯ ನಿರ್ದೇಶಕ ವಿನು ಚಕ್ರವರ್ತಿ ಕಣ್ಣಿಗೆ ಬಿತ್ತು. ಅಲ್ಲಿಂದ ಓಪನ್ ಆಯ್ತು ಸಿಲ್ಕ್ ಅದೃಷ್ಟದ ಬಾಗಿಲು.
ನಿರ್ದೇಶಕರ ಅವರ ಪತ್ನಿ ಕರ್ಣಪೂ ಸಿಲ್ಕ್ ಸ್ಮಿತಾಳಿಗೆ ನಟನೆ, ನೃತ್ಯ ತರಬೇತಿ ನೀಡಿ ಪೂರ್ಣ ಕಲಾವಿದೆಯನ್ನಾಗಿ ಮಾಡಿದರು.
ಸಿಲ್ಕ್ ಸ್ಮಿತಾ ಹಸಿಬಿಸಿ ದೃಶ್ಯಗಳಲ್ಲಿ ನಟಿಸಿ ಪಡ್ಡೆಹೈಕ್ಳ ನಿದ್ದೆ ಕದ್ದರು, ಇದರಿಂದಲೇ ಫೇಮಸ್ ಆದ್ರು. ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ 450 ಚಿತ್ರಗಳಲ್ಲಿ ನಟಿಸಿದರು.
ನಟಿ ಸಿಲ್ಕ್ ಸ್ಮಿತಾ ಜೀವನದಲ್ಲಿ ಅನೇಕ ದುರಂತಗಳಿವೆ. ಅಚ್ಚರಿ ಹಾಗೂ ನಿಗೂಢತೆಯ ಬದುಕು ಅವರದ್ದು. ಅಂದು ಅಪಾರ ಅಭಿಮಾನಿಗಳನ್ನು ಹೊಂದಿದ್ದ ಸಿಲ್ಕ್ ಸ್ಮಿತಾ ಕಚ್ಚಿದ ಸೇಬಿಗೂ ಭಾರೀ ಬೇಡಿಕೆ ಇತ್ತಂತೆ.
ಸಿಲ್ಕ್ ಸ್ಮಿತಾ ಕಚ್ಚಿದ ಒಂದು ಸೇಬಿನ ಬೆಲೆ 200 ಆಗಿತ್ತಂತೆ. ಸಿಲ್ಕ್ ಸ್ಮಿತಾ ಕಚ್ಚಿದ ಸೇಬು ಹರಾಜಿನಲ್ಲಿ ಮಾರಾಟವಾಯ್ತು ಎಂಬ ಸುದ್ದಿ ಆ ಕಾಲದಲ್ಲಿ ಹಬ್ಬಿತ್ತು.