ಚೆನ್ನೈ: ರಾಷ್ಟ್ರಾದ್ಯಂತ ಬಹು ನಿರೀಕ್ಷೆ ಮೂಡಿಸಿದ್ದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಕ್ಷೇತ್ರವಾದ ಆರ್.ಕೆ. ನಗರ್ ಕ್ಷೇತ್ರದಲ್ಲಿಂದು ಉಪ ಚುನಾವಣೆ ಪ್ರಾರಂಭವಾಗಿದೆ. ಆರ್.ಕೆ.ನಗರ ಕ್ಷೇತ್ರದಲ್ಲಿ 2,28,234 ಮತದಾರರು ಒಟ್ಟು 258 ಮತಗಟ್ಟೆಗಳಲ್ಲಿ ತಮ್ಮ ಮತ ಚಲಾಯಿಸಲಿದ್ದಾರೆ.
ಮತದಾನ ಪ್ರಕ್ರಿಯೆಯು ಬೆಳಗ್ಗೆ 8 ರಿಂದ ಆರಂಭಗೊಂಡು ಸಂಜೆ 5 ಗಂಟೆಯವರೆಗೆ ನಡೆಯಲಿದ್ದು, ಎಲ್ಲಾ ಮತಗಟ್ಟೆಗಳಲ್ಲೂ ಸುರಕ್ಷಿತೆಗಾಗಿ ಬಿಗಿ ಪೋಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಈಗಾಗಲೇ ಡಿಎಂಕೆ ಪಕ್ಷದ ಅಭ್ಯರ್ಥಿಯಾದ ಎನ್. ಮರುಧು ಗಣೇಶ್ ಬೂತ್ ನಂ. 134ರಲ್ಲಿ ತಮ್ಮ ಮತಚಲಾಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಂತರ 6,000 ವಾಗಲೀ ಅಥವಾ 60,000ವಾಗಲೀ ಈ ಚುನಾವಣೆಯಲ್ಲಿ ಗೆಲುವು ನಮ್ಮದೇ ಎಂದು ತಿಳಿಸಿದ್ದಾರೆ. ಎಐಎಡಿಎಂಕೆ ಪಕ್ಷಕ್ಕೆ ಜನರು ಪಾಠ ಕಲಿಸಲಿದ್ದಾರೆ ಎಂದು ಅವರು ಹೇಳಿದರು.
#RKNagarByPoll DMK candidate N. Marudhu Ganesh cast his vote at polling booth no. 134 in #Chennai, says "whether it is Rs 6000 or Rs 60,000, we are going to win; voters of RK Nagar will teach a lesson to AIADMK this time" pic.twitter.com/g58dCEZ4xc
— ANI (@ANI) December 21, 2017
2016ರ ಡಿಸೆಂಬರ್ ನಲ್ಲಿ ಜಯಲಲಿತಾ ಮರಣಹೊಂದಿದ ನಂತರ ಈ ಸ್ಥಾನ ತೆರವಾಗಿತ್ತು. ನಂತರ ಏಪ್ರಿಲ್ನಲ್ಲಿ ನಲ್ಲಿ ಕರ್ನಾಟಕದಲ್ಲಿ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪ ಚುನಾವಣೆ ನಡೆದ ಸಮಯದಲ್ಲಿ ತಮಿಳುನಾಡಿನ ಆರ್.ಕೆ. ನಗರ ಉಪಚುನಾವನೆಯನ್ನೂ ನಿಗದಿಗೊಳಿಸಲಾಗಿತ್ತು. ಆದರೆ ರಾಜಕೀಯ ಪಕ್ಷಗಳು ಮತದಾರರಿಗೆ ಯತೇಚ್ಚವಾಗಿ ಹಣ ಹಂಚಿಕೆ ಮಾಡಿದ್ದು, ಮತದಾರರಿಗೆ ದುಡ್ಡಿನ ಆಮಿಷ ಒಡ್ಡಿದ್ದರಿಂದ ಚುನಾವಣಾ ಆಯೋಗವು ಆರ್.ಕೆ. ನಗರ ಉಪ ಚುನಾವಣೆಯನ್ನು ಮುಂದೂಡಿತ್ತು.