Black Friday Sale: ಅಮೆರಿಕದವರು ಈ ದಿನ ಏಕೆ ಶಾಪಿಂಗ್ ಮಾಡುತ್ತಾರೆ ಗೊತ್ತಾ?

Black Friday Sale in USA: ಅಮೆರಿಕದಲ್ಲಿ ಉತ್ತಮ ಲಾಭದೊಂದಿಗೆ ಇಷ್ಟದ ವಸ್ತುಗಳನ್ನು ಖರೀದಿಸಲು ಗ್ರಾಹಕರೂ ಅಂಗಡಿಗಳಿಗೆ ಮುಗಿಬೀಳುತ್ತಾರೆ. ಕ್ರಿಸ್ಮಸ್ ಶಾಪಿಂಗ್ ಸಮಯದಲ್ಲಿ ಈ ದಿನವು ಉತ್ತಮ ಉಳಿತಾಯವಾಗಿದೆ.

Black Friday Sale in USA: ‘ಬ್ಲಾಕ್ ಫ್ರೈಡೇ’ ಅಂದಾಕ್ಷಣ ನಿಮ್ಮ ಮನಸ್ಸಿನಲ್ಲಿ ಸಿನಿಮಾ ಮೂಡಿರುತ್ತದೆ. ಆದರೆ ಈ ದಿನ(Black Friday Sale) ಅಮೆರಿಕದಲ್ಲಿ ಶಾಪಿಂಗ್ ಮಾಡಲು ಪ್ರಸಿದ್ಧವಾಗಿದೆ. ಈ ದಿನಗಳಲ್ಲಿ ಗ್ರಾಹಕರಿಗೆ ಶಾಪಿಂಗ್ ಮಾಡಲು ಆಕರ್ಷಕ ರಿಯಾಯಿತಿಗಳನ್ನು ಸಹ ನೀಡಲಾಗುತ್ತದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಅಮೆರಿಕದಲ್ಲಿ ಈ ದಿನವು Thanksgiving ದಿನದ ನಂತರ ಬರುತ್ತದೆ. ಸರಳವಾಗಿ ಹೇಳುವುದಾದರೆ ನವೆಂಬರ್ 4ನೇ ಗುರುವಾರವನ್ನು ‘Black Friday’ ಎಂದು ಕರೆಯಲಾಗುತ್ತದೆ. ಈ ದಿನವನ್ನು ಶಾಪಿಂಗ್ ದೃಷ್ಟಿಕೋನದಿಂದ ಪ್ರಮುಖವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಅಮೆರಿಕದ ಜನರು ಈ ದಿನದಿಂದ ಕ್ರಿಸ್ಮಸ್ ಶಾಪಿಂಗ್ ಪ್ರಾರಂಭಿಸುತ್ತಾರೆ.

2 /5

ಈ ವರ್ಷ ಈ ದಿನವನ್ನು ನವೆಂಬರ್ 24ರಂದು ಆಚರಿಸಲಾಗುತ್ತದೆ. ಈ ‘Black Friday’ ಎಂಬ ಪದ ಹೇಗೆ ಹುಟ್ಟಿಕೊಂಡಿತು? ಅಮೆರಿಕದಲ್ಲಿ ‘Black Friday’ ಆರಂಭವಾಯಿತು. ನಂತರ ಇದು ಇತರ ದೇಶಗಳಲ್ಲಿಯೂ ಪ್ರಸಿದ್ಧವಾಗಲು ಪ್ರಾರಂಭಿಸಿತು. ಅಂದಿನಿಂದ ನಷ್ಟದಲ್ಲಿದ್ದ ಚಿಲ್ಲರೆ ವ್ಯಾಪಾರಿಗಳು ಲಾಭದತ್ ಮುಖಮಾಡಿದರು. ಈ ದಿನ ಹೆಚ್ಚಿನ ಶಾಪಿಂಗ್ ಮಾಲ್‍ಗಳಲ್ಲಿ ಜನರಿಗೆ ದೊಡ್ಡ ದೊಡ್ಡ ರಿಯಾಯಿತಿ & ಕೊಡುಗೆಗಳನ್ನು ನೀಡಲಾಗುತ್ತದೆ.

3 /5

ಗ್ರಾಹಕರಿಗೆ ಆಕರ್ಷಕ ರಿಯಾಯಿತಿಗಳು ‘Black Friday’ ದಿನಂದಲೇ ಪ್ರಾರಂಭವಾಗುತ್ತವೆ. ಇದನ್ನು ಶಾಪಿಂಗ್ ಸೀಸನ್ ಎಂದು ಕರೆದರೆ ತಪ್ಪಾಗದು. ಈ ದಿನದಿಂದ ಜನರು ರಜಾ ಶಾಪಿಂಗ್ ಪ್ರಾರಂಭಿಸುತ್ತಾರೆ. ಚಿಲ್ಲರೆ ವ್ಯಾಪಾರಿಗಳು ಈ ದಿನಗಳಲ್ಲಿ ಗ್ರಾಹಕರನ್ನು ಶಾಪಿಂಗ್ ಮಾಡಲು ಪ್ರೋತ್ಸಾಹಿಸುತ್ತಾರೆ. ಪ್ರತಿಯೊಂದು ವಸ್ತುವಿನ ಮೇಲೂ ಅದ್ಭುತ ರಿಯಾಯಿತಿ ನೀಡಲಾಗುತ್ತದೆ.

4 /5

ಚಿಲ್ಲರೆ ವ್ಯಾಪಾರಿಗಳು ಈ ದಿನಗಳಲ್ಲಿ ಹಳೆಯ ಸರಕುಗಳ ಮೇಲೆ ಭರ್ಜರಿ ರಿಯಾಯಿತಿಗಳನ್ನು ನೀಡುತ್ತಾರೆ. ಹೊಸ ಸರಕುಗಳಿಗೆ ಜಾಗವನ್ನು ನೀಡುತ್ತಾರೆ. ‘Black Friday’ ದಿನದಿಂದ ಅಂಗಡಿಗಳು ಮುಂಜಾನೆಯೇ ತೆರೆಯಲು ಪ್ರಾರಂಭಿಸುತ್ತವೆ. ಸಾಮಾನ್ಯವಾಗಿ ಅಂಗಡಿಗಳಲ್ಲಿ ಸಾಕಷ್ಟು ಜನಸಂದಣಿ ಇರುತ್ತದೆ. ತಮ್ಮ ಬ್ರ್ಯಾಂಡ್ ಅನ್ನು ಪ್ರಚಾರ ಮಾಡಲು ಬಯಸುವ ಅಂಗಡಿಯವರಿಗೆ ಇದು ಒಳ್ಳೆಯ ದಿನವಾಗಿದೆ.

5 /5

ಉತ್ತಮ ಲಾಭದೊಂದಿಗೆ ಇಷ್ಟದ ವಸ್ತುಗಳನ್ನು ಖರೀದಿಸಲು ಗ್ರಾಹಕರೂ ಅಂಗಡಿಗಳಿಗೆ ಮುಗಿಬೀಳುತ್ತಾರೆ. ಕ್ರಿಸ್ಮಸ್ ಶಾಪಿಂಗ್ ಸಮಯದಲ್ಲಿ ಈ ದಿನವು ಉತ್ತಮ ಉಳಿತಾಯವಾಗಿದೆ. ಹಣವನ್ನು ಉಳಿಸಲು ಮಾಲ್‌ನ ಹೊರಗೆ ಕ್ಯಾಂಪ್ ಮಾಡುವ ಅನೇಕ ವ್ಯಾಪಾರಿಗಳಿರುತ್ತಾರೆ. ಗ್ರಾಹಕರಿಗೆ ಶೇ.50 ರಿಂದ ಶೇ.90ರವರೆಗೆ ರಿಯಾಯಿತಿ ಸಿಗುತ್ತದೆ ಎಂದು ದೊಡ್ಡ ದೊಡ್ಡ ಬೋರ್ಡ್‍ಗಳನ್ನು ಹಾಕಲಾಗುತ್ತದೆ. ಟಿವಿ, ಪತ್ರಿಕೆ ಮತ್ತು ರೇಡಿಯೋಗಳಲ್ಲಿ ಶಾಪಿಂಗ್ ಬಗ್ಗೆ ಜಾಹೀರಾತು ನೀಡಲಾಗುತ್ತದೆ.