ನವದೆಹಲಿ: ದೀಪಾವಳಿ ಸಂದರ್ಭದಲ್ಲಿ ಕೇಂದ್ರ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಿಸುವುದಾಗಿ ಸರ್ಕಾರ ಘೋಷಿಸಿತ್ತು. ಏಳನೇ ವೇತನ ಆಯೋಗದ ಅಡಿಯಲ್ಲಿ, ಸರ್ಕಾರವು ನೌಕರರ ಡಿಎಯನ್ನು ಶೇ. 4 ರಷ್ಟು ಹೆಚ್ಚಿಸಿದ್ದು, ಒಟ್ಟು ಡಿಎ ಶೇ. 46 ಕ್ಕೆ ತಲುಪಿದೆ. ಈಗ ಆರನೇ ಮತ್ತು ಐದನೇ ವೇತನ ಆಯೋಗದ ಪ್ರಕಾರ ಸಂಬಳ ಪಡೆಯುವ ಉದ್ಯೋಗಿಗಳಿಗೆ ಒಂದು ಮಹತ್ವದ ಸುದ್ದಿ ಪ್ರಕಟಗೊಂಡಿದೆ. ಈ ನೌಕರರ ತುಟ್ಟಿಭತ್ಯೆಯನ್ನು (ಡಿಎ) ಕೂಡ ಸರ್ಕಾರ ಹೆಚ್ಚಿಸಿದೆ.(Business News In Kannada)
ಡಿಎ ಎಷ್ಟು ಹೆಚ್ಚಳ?
ಆರನೇ ವೇತನ ಆಯೋಗದ ವ್ಯಾಪ್ತಿಗೆ ಒಳಪಡುವ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳ (CPSE) ಉದ್ಯೋಗಿಗಳಿಗೆ ಮೂಲ ವೇತನದ ಮೇಲಿನ ಡಿಎಯನ್ನು ಈಗಿರುವ 221% ರಿಂದ 230% ಕ್ಕೆ ಹೆಚ್ಚಿಸಲಾಗಿದೆ. ಅಂದರೆ ಈ ಬಾರಿ ಶೇ.9ರಷ್ಟು ಹೆಚ್ಚಿಸಲಾಗಿದೆ. ತುಟ್ಟಿ ಭತ್ಯೆಯ ಬದಲಾದ ದರವು ಜುಲೈ 1, 2023 ರಿಂದ ಉದ್ಯೋಗಿಗಳಿಗೆ ಜಾರಿಗೆ ಬರಲಿದೆ. ಐದನೇ ವೇತನ ಆಯೋಗದ ವ್ಯಾಪ್ತಿಗೆ ಬರುವ ನೌಕರರ ಡಿಎಯನ್ನೂ ಸರ್ಕಾರ ಹೆಚ್ಚಿಸಿದೆ. ಈ ನೌಕರರ ಡಿಎಯನ್ನು ಎರಡು ವರ್ಗಗಳ ಪ್ರಕಾರ ಹೆಚ್ಚಿಸಲಾಗಿದೆ.
ಇದನ್ನೂ ಓದಿ-ನೀವೂ ಕಾಲೇಜು ವಿದ್ಯಾರ್ಥಿಗಳೇ? ನಿಮಗಾಗಿ ಲಾಂಚ್ ಆಗಿವೆ ಎರಡು ಹೊಸ ಇ-ಸ್ಕೂಟರ್ ಗಳು, ಬೆಲೆ ಜಸ್ಟ್ 55 ಸಾವಿರ!
ತುಟ್ಟಿಭತ್ಯೆಯಲ್ಲಿ ಶೇ 15ರಷ್ಟು ಹೆಚ್ಚಳ
ಶೇ.50 ರಷ್ಟು ಡಿಎ ಮೂಲ ವೇತನದೊಂದಿಗೆ ವಿಲೀನಗೊಳಿಸುವ ಪ್ರಯೋಜನ ಪಡೆಯದೆ ಇರುವ ಅಂತಹ ಹಾಲಿ ನೌಕರರಿಗೆ ಇರುವ ಶೇ.462 ಡಿಎಯನ್ನು ಶೇ.477ಕ್ಕೆ ಹೆಚ್ಚಿಸಲಾಗಿದೆ. ಇದಲ್ಲದೆ, ಮೂಲ ವೇತನದೊಂದಿಗೆ 50% ಡಿಎ ವಿಲೀನದ ಲಾಭವನ್ನು ಪಡೆದ ನೌಕರರಿಗೆ ಅಸ್ತಿತ್ವದಲ್ಲಿರುವ DA ದರವನ್ನು 412% ರಿಂದ 427% ಕ್ಕೆ ಹೆಚ್ಚಿಸಲಾಗಿದೆ. ಈ ಮೂಲಕ ಎರಡೂ ವರ್ಗದ ನೌಕರರು ಶೇ.15ರಷ್ಟು ಡಿಎ ಹೆಚ್ಚಳದ ಲಾಭ ಪಡೆಯಲಿದ್ದಾರೆ.
ಇದನ್ನೂ ಓದಿ-ಗೂಗಲ್ ಪೇ ಬಳಕೆದಾರರಿಗೊಂದು ಎಚ್ಚರಿಕೆ, ಯುಪಿಐ ಪೆಮೆಂಟ್ ಮಾಡುವ ಮುನ್ನ ಇದನ್ನು ಖಚಿತಪಡಿಸಿ!
ಏಳನೇ ವೇತನ ಆಯೋಗದ ಅಡಿಯಲ್ಲಿ, ಅಕ್ಟೋಬರ್ ತಿಂಗಳಿನಲ್ಲಿ ಕೇಂದ್ರ ನೌಕರರ ಡಿಎಯನ್ನು ಶೇಕಡಾ 4 ರಷ್ಟು ಹೆಚ್ಚಿಸಲಾಗಿದೆ. ಆಗ ನೌಕರರ ಡಿಎ ಶೇ.42ರಷ್ಟಿದ್ದು, ಅದನ್ನು ಸರ್ಕಾರ ಶೇ.46ಕ್ಕೆ ಹೆಚ್ಚಿಸಿದೆ. ಜುಲೈ 1ರಿಂದ ಹೊಸ ದರ ಜಾರಿಯಾಗಿದೆ. ಸರ್ಕಾರದ ಈ ನಿರ್ಧಾರದಿಂದ 49 ಲಕ್ಷ ಕೇಂದ್ರ ನೌಕರರು ಮತ್ತು 65 ಲಕ್ಷ ಪಿಂಚಣಿದಾರರಿಗೆ ಲಾಭವಾಗಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ