ನಿಗದಿತ ಸಮಯದೊಳಗೆ ನಿರ್ಧಾರ ಕೈಗೊಳ್ಳಲು ಸ್ಪೀಕರ್‌ಗೆ ಒತ್ತಡ ಹಾಕಲು ಸಾಧ್ಯವಿಲ್ಲ - ಸುಪ್ರೀಂಕೋರ್ಟ್

ನಿಗದಿತ ಸಮಯದೊಳಗೆ ನಿರ್ಧಾರ ಕೈಗೊಳ್ಳಲು ಸ್ಪೀಕರ್ ಗೆ ಒತ್ತಡ ಹಾಕಲು ಸಾದ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಬುಧುವಾರದಂದು ಹೇಳಿದೆ. 

Last Updated : Jul 17, 2019, 01:06 PM IST
ನಿಗದಿತ ಸಮಯದೊಳಗೆ ನಿರ್ಧಾರ ಕೈಗೊಳ್ಳಲು ಸ್ಪೀಕರ್‌ಗೆ ಒತ್ತಡ ಹಾಕಲು ಸಾಧ್ಯವಿಲ್ಲ - ಸುಪ್ರೀಂಕೋರ್ಟ್  title=

ನವದೆಹಲಿ: ನಿಗದಿತ ಸಮಯದೊಳಗೆ ನಿರ್ಧಾರ ಕೈಗೊಳ್ಳಲು ಸ್ಪೀಕರ್ ಗೆ ಒತ್ತಡ ಹಾಕಲು ಸಾದ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಬುಧುವಾರದಂದು ಹೇಳಿದೆ. 

"ಕರ್ನಾಟಕ ಶಾಸಕರು ನಾಳೆ ವಿಶ್ವಾಸ ಮತದಾನದಲ್ಲಿ ಭಾಗವಹಿಸಲು ಒತ್ತಾಯಿಸುವುದಿಲ್ಲ" ಎಂದು ನ್ಯಾಯಾಲಯ ಹೇಳಿದೆ. ಇದರರ್ಥ ಭಿನ್ನಮತೀಯ ಶಾಸಕರನ್ನು ಗುರುವಾರ ವಿಶ್ವಾಸಾರ್ಹ ಮತದಾನದಲ್ಲಿ ಭಾಗವಹಿಸುವಂತೆ ಒತ್ತಾಯಿಸಲು ಸರ್ಕಾರವು ವಿಪ್ ಗಳನ್ನು ಬಳಸಲು ಸಾಧ್ಯವಿಲ್ಲ ಎಂದು ಕೋರ್ಟ್ ತಿಳಿಸಿದೆ.

"ಸ್ಪೀಕರ್ ಅವರ ವಿವೇಚನೆ ನ್ಯಾಯಾಲಯದ ನಿರ್ದೇಶನದ ಮೂಲಕ ಆಗಬಾರದು. ಸ್ಪೀಕರ್ ಅವರು ರಾಜೀನಾಮೆಗಳನ್ನು ಸೂಕ್ತವೆಂದು ಭಾವಿಸಿದಾಗ ನಿರ್ಧರಿಸಬಹುದು" ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ, ಆದರೆ ಅವರು ತಮ್ಮ ನಿರ್ಧಾರವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಕೋರ್ಟ್ ತಿಳಿಸಿದೆ. ಆ ಮೂಲಕ ನ್ಯಾಯಾಲಯವು ಸಾಂವಿಧಾನಿಕ ಸಮತೋಲನವನ್ನು ಕಾಪಾಡಿಕೊಳ್ಳಬೇಕು" ಎಂದು ಹೇಳಿದೆ.

ಸುಪ್ರೀಂಕೋರ್ಟ್ ನ ತೀರ್ಪನ್ನು ಸ್ವಾಗತಿಸಿದ ಬಿಜೆಪಿ ನಾಯಕ ಯಡಿಯೂರಪ್ಪ 'ಇದು ಬಂಡಾಯ ಶಾಸಕರಿಗೆ ಸಿಕ್ಕಂತ ಗೆಲುವು ಎಂದು ಹೇಳಿದರು, 'ನಾನು ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ. ಇದು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ವಿಜಯವಾಗಿದೆ. ಇದು ಬಂಡಾಯ ಶಾಸಕರ ನೈತಿಕ ವಿಜಯವಾಗಿದೆ." ಇದು ಮಧ್ಯಂತರ ಆದೇಶ ಮಾತ್ರ ಮತ್ತು ಭವಿಷ್ಯದಲ್ಲಿ ಸುಪ್ರೀಕೋರ್ಟ್ ಸ್ಪೀಕರ್ ಅಧಿಕಾರವನ್ನು ನಿರ್ಧರಿಸುತ್ತದೆ. ಇದು ಸಂಸದೀಯ ಪ್ರಜಾಪ್ರಭುತ್ವದಲ್ಲಿ ಹೊಸ ಪ್ರವೃತ್ತಿಗೆ ನಾಂದಿ ಹಾಡಲಿದೆ ಎಂದು ”ಎಂದು ಯಡಿಯೂರಪ್ಪ ಹೇಳಿದರು.

ಇನ್ನೊಂದೆಡೆಗೆ ಕರ್ನಾಟಕ ವಿಧಾನಸಭಾ ಸ್ಪೀಕರ್ ಕೆ ಆರ್ ರಮೇಶ್ ಕುಮಾರ್ ಅವರು ಸಂವಿಧಾನದ ತತ್ವಗಳಿಗೆ ಅನುಸಾರವಾಗಿ ತಮ್ಮ ನಡೆದುಕೊಳ್ಳುವುದಾಗಿ ಹೇಳಿದರು."ಅತ್ಯಂತ ವಿನಮ್ರತೆಯಿಂದ ನಾನು ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ ಮತ್ತು ಗೌರವಿಸುತ್ತೇನೆ. ಸುಪ್ರೀಂಕೋರ್ಟ್ ನನ್ನ ಮೇಲೆ ಹೆಚ್ಚುವರಿ ಹೊರೆ ಹೇರಿದೆ, ಸಾಂವಿಧಾನಿಕ ತತ್ವಕ್ಕೆ ಅನುಗುಣವಾಗಿ ನಾನು ಜವಾಬ್ದಾರಿಯುತವಾಗಿ ವರ್ತಿಸುತ್ತೇನೆ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

Trending News