ಭಾರತೀಯ ರೈಲ್ವೆಯ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ : ಪಿಯೂಷ್ ಗೋಯಲ್

ಹಲವಾರು ಇಲಾಖೆಗಳಲ್ಲಿ ಸಮಗ್ರತೆಯ ಸಮಸ್ಯೆಗಳಿದ್ದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪಿಯೂಷ್ ಗೋಯಲ್ ಹೇಳಿದರು.

Last Updated : Jul 15, 2019, 04:15 PM IST
ಭಾರತೀಯ ರೈಲ್ವೆಯ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ : ಪಿಯೂಷ್ ಗೋಯಲ್  title=

ಲಂಡನ್: ತಮ್ಮ ಸಚಿವಾಲಯವು ಭ್ರಷ್ಟ ಅಧಿಕಾರಿಗಳ ಪ್ರೊಫೈಲ್ಗಳನ್ನು ಅಧ್ಯಯನ ಮಾಡುತ್ತಿದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಸೋಮವಾರ ಹೇಳಿದರು.

ಇಂಡಿಯಾ ಡೇ ಸಮಾವೇಶದಲ್ಲಿ ಪಾಲ್ಗೊಳ್ಳಲು ಮೂರು ದಿನಗಳ ಯುಕೆ ಭೇಟಿಯಲ್ಲಿರುವ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್, ಹಲವಾರು ಇಲಾಖೆಗಳಲ್ಲಿ ಸಮಗ್ರತೆಯ ಕೊರತೆಯಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದ್ದು, ಇದರಿಂದ ಭ್ರಷ್ಟ ಅಧಿಕಾರಿಗಳಿಗೆ 'ಸರಿಯಾದ ಸಂದೇಶ' ಕಳುಹಿಸಲಾಗುವುದು ಎಂದರು.

"ರೈಲ್ವೆ ಸಚಿವಾಲಯವು ಈಗ ಅನೇಕ ಅಧಿಕಾರಿಗಳ ಪ್ರೊಫೈಲ್‌ಗಳನ್ನು ಅಧ್ಯಯನ ಮಾಡುತ್ತಿದೆ. ಇದರಿಂದ ಭ್ರಷ್ಟ ಅಧಿಕಾರಿಗಳನ್ನು ಪತ್ತೆ ಹಚ್ಚಿ, ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ನೆರವಾಗುತ್ತದೆ" ಎಂದು ಅವರು ತಿಳಿಸಿದರು.

ಈ ವರ್ಷದ ಜೂನ್‌ನಲ್ಲಿ, ಸರ್ಕಾರವು ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿಯ 15 ಹಿರಿಯ ಅಧಿಕಾರಿಗಳನ್ನು ತಕ್ಷಣವೇ ತಮ್ಮ ಸೇವೆಯಿಂದ ನಿವೃತ್ತಿ ಹೊಂದುವಂತೆ ಆದೇಶಿಸಿತು. ಈ ಅಧಿಕಾರಿಗಳು ಲಂಚ, ಸರಕುಗಳ ಅಸಮರ್ಪಕ ಮೌಲ್ಯಮಾಪನ, ಕಳ್ಳಸಾಗಾಣಿಕೆಗೆ ಸಹಾಯ ಮಾಡುವುದು ಸೇರಿದಂತೆ ಹಲವಾರು ಆರೋಪಗಳ ಹಿನ್ನೆಲೆಯಲ್ಲಿ ಕಡ್ಡಾಯ ನಿವೃತ್ತಿ ಹೊಂದಬೇಕಾಯಿತು.

ನಿವೃತ್ತಿ ಹೊಂದಲು ಆದೇಶಿಸಲಾದ ಅಧಿಕಾರಿಗಳು:

1. ಡಾ.ಅನುಪ್ ಶ್ರೀವಾಸ್ತವ, ಪ್ರಧಾನ ಆಯುಕ್ತರು
2. ಅತುಲ್ ದೀಕ್ಷಿತ್, ಆಯುಕ್ತ
3. ಸಂಸರ್ ಚಂದ್, ಆಯುಕ್ತ
4. ಜಿ ಶ್ರೀ ಹರ್ಷ, ಕಮಿಷನರ್
5. ವಿನಯ್ ಬ್ರಿಜ್ ಸಿಂಗ್, ಆಯುಕ್ತ
6. ಅಶೋಕ್ ಆರ್ ಮಹೀದಾ, ಹೆಚ್ಚುವರಿ ಆಯುಕ್ತ
7. ವೀರೇಂದ್ರಕರ್ ಅಗರ್ವಾಲ್, ಹೆಚ್ಚುವರಿ ಆಯುಕ್ತರು
8. ಅಮ್ರೆಶ್ ಜೈನ್, ಜಿಲ್ಲಾಧಿಕಾರಿ
9. ನಳಿನ್ ಕುಮಾರ್, ಜಂಟಿ ಆಯುಕ್ತ
10. ಎಸ್. ಎಸ್. ಪಬಾನಾ, ಸಹಾಯಕ ಆಯುಕ್ತ
11. ಎಸ್. ಎಸ್. ಬಿಶ್ಟ್, ಸಹಾಯಕ ಆಯುಕ್ತ
12. ವಿನೋದ್ ಕೆಆರ್. ಸಂಗ, ಸಹಾಯಕ ಆಯುಕ್ತ
13. ರಾಜು ಸೇಕರ್, ಹೆಚ್ಚುವರಿ ಆಯುಕ್ತ
14. ಅಶೋಕ್ ಕೆಆರ್ ಅಸ್ವಾಲ್, ಜಿಲ್ಲಾಧಿಕಾರಿ
15. ಮೊಹಮ್ಮದ್ ಅಲ್ತಾಫ್, ಸಹಾಯಕ ಆಯುಕ್ತ

ಕಡ್ಡಾಯವಾಗಿ ನಿವೃತ್ತರಾದ ಅಧಿಕಾರಿಗಳಲ್ಲಿ ಪ್ರಧಾನ ಆಯುಕ್ತರು, ಆಯುಕ್ತರು, ಹೆಚ್ಚುವರಿ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳಾಗಿದ್ದರು.

ಅಧಿಕಾರಿಗಳ ಕಡ್ಡಾಯ ನಿವೃತ್ತಿಯನ್ನು ಕೇಂದ್ರ ಸರ್ಕಾರಿ ಸೇವೆಗಳ ಸಾಮಾನ್ಯ ಹಣಕಾಸು ನಿಯಮಗಳ ನಿಯಮ 56 (ಜೆ) ಅಡಿಯಲ್ಲಿ ಆದೇಶಿಸಲಾಗಿದೆ.

Trending News