Home Remedies To Remove Blackheads: ಸುಂದರವಾದ, ಕಾಂತಿಯುತ ತ್ವಚೆ ನಮ್ಮದಾಗಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದರೆ, ಧೂಳು, ವಾಯು ಮಾಲಿನ್ಯ ಸೇರಿದಂತೆ ಹಲವು ಕಾರಣಗಳಿಂದಾಗಿ ಮುಖದಲ್ಲಿ ಕಪ್ಪು ಕಲೆ, ಡಾರ್ಕ್ ಸರ್ಕಲ್, ಬ್ಲಾಕ್ ಹೆಡ್ಸ್ ನಂತಹ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.
ಮುಖದ ಮೇಲೆ ಮೂಡುವ ಬ್ಲ್ಯಾಕ್ ಹೆಡ್ಸ್ ಸಮಸ್ಯೆ ಸೌಂದರ್ಯವನ್ನು ಮರೆ ಮಾಡುತ್ತದೆ. ಇದರಿಂದ ಪರಿಹಾರ ಪಡೆಯಲು ಮಾರುಕಟ್ಟೆಯಲ್ಲಿ ಹಲವು ದುಬಾರಿ ಪ್ರಾಡಕ್ಟ್ ಗಳು ಲಭ್ಯವಿವೆ. ಆದರೆ, ನಿಮ್ಮ ಮನೆಯಲ್ಲಿರುವ ಕೆಲವು ಸಾಮಾಗ್ರಿಗಳನ್ನು ಬಳಸಿ ಈ ಸಮಸ್ಯೆಗೆ ಸುಲಭ ಪರಿಹಾರ ಪಡೆಯಬಹುದು.
ಬ್ಲ್ಯಾಕ್ ಹೆಡ್ಸ್ ಸಮಸ್ಯೆಗೆ ನಿಮ್ಮ ಮನೆಯಲ್ಲಿಯೇ ಇದೆ ಮದ್ದು:
ಟೂತ್ ಪೇಸ್ಟ್:
ಟೂತ್ಪೇಸ್ಟ್ನ ತೆಳುವಾದ ಪದರವನ್ನು ಬ್ಲ್ಯಾಕ್ ಹೆಡ್ಸ್ ಪೀಡಿತ ಪ್ರದೇಶದಲ್ಲಿ ಉಜ್ಜಿ 15-20 ನಿಮಿಷಗಳ ಬಳಿಕ ಫೇಸ್ ವಾಶ್ ಮಾಡಿ. ನಿಯಮಿತವಾಗಿ ಈ ರೀತಿ ಮಾಡುತ್ತಾ ಬಂದರೆ, ಶೀಘ್ರದಲ್ಲೇ ಪರಿಹಾರ ಕಾಣಬಹುದು.
ಇದನ್ನೂ ಓದಿ- ಆಕರ್ಷಕ ತ್ವಚೆ ನಿಮ್ಮದಾಗಿಸಲು ತುಂಬಾ ಪ್ರಯೋಜನಕಾರಿ ಬೀಟ್ರೂಟ್
ನಿಂಬೆರಸ ಉಪ್ಪು:
ನಿಂಬೆ ರಸದಲ್ಲಿ ಸ್ವಲ್ಪವೇ ಸ್ವಲ್ಪ ಉಪ್ಪು ಬೆರೆಸಿ ಬ್ಲಾಕ್ ಹೆಡ್ಸ್ ಪೀಡಿದ ಜಾಗದಲ್ಲಿ ಹಚ್ಚಿ 15 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಿಂದ ಫೇಸ್ ವಾಶ್ ಮಾಡಿ.
ಜೇನುತುಪ್ಪ:
ಬ್ಲಾಕ್ ಹೆಡ್ಸ್ ಮೂಡಿರುವ ಜಾಗದಲ್ಲಿ ಜೇನು ತುಪ್ಪದಿಂದ ಮೃದುವಾಗಿ ಮಸಾಜ್ ಮಾಡುವುದರಿಂದ ಶೀಘ್ರದಲ್ಲೇ ಈ ಸಮಸ್ಯೆ ನಿವಾರಣೆ ಆಗುತ್ತದೆ.
ಆಲೂಗಡ್ಡೆ ಸಿಪ್ಪೆ:
ಆಲೂಗೆಡ್ಡೆಯ ಸಿಪ್ಪೆಯನ್ನು ರುಪ್ಪಿ ಕಪ್ಪು ಕಲೆಗಳಿರುವ ಜಾಗದಲ್ಲಿ ಲೇಪಿಸಿ. ಅರ್ಧಗಂಟೆ ಮೂಲಕ ಮುಖ ತೊಳೆಯಿರಿ. ಇದು ಕಪ್ಪು ಕಲೆ ನಿವಾರಿಸುವ ಜೊತೆಗೆ ಕಾಂತಿಯುತ ತ್ವಚೆಯನ್ನು ನಿಮ್ಮದಾಗಿಸುತ್ತದೆ.
ಇದನ್ನೂ ಓದಿ- ವೃದ್ಧಾಪ್ಯದಲ್ಲಿ ನೀವು ಯಂಗ್ ಆಗಿ ಕಾಣಬೇಕೆಂದರೆ ಇಂದಿನಿಂದಲೇ ಇವುಗಳನ್ನು ತಿನ್ನಲು ಆರಂಭಿಸಿ...!
ಬೇಕಿಂಗ್ ಸೋಡಾ:
ಬೇಕಿಂಗ್ ಸೋದಾದಲ್ಲಿ ಸ್ವಲ್ಪ ನೀರು ಬೆರೆಸಿ ಲೇಪಿಸಿ 10 ನಿಮಿಷಗಳ ಬಳಿಕ ಮುಖ ತೊಳೆಯಿರಿ. ಇದೂ ಕೂಡ ಬ್ಲ್ಯಾಕ್ ಹೆಡ್ಸ್ ನಿವಾರಿಸುವಲ್ಲಿ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.