ಮತ್ತಿಬ್ಬರು ಶಾಸಕರ ರಾಜೀನಾಮೆ, ಸಂಕಷ್ಟಕ್ಕೆ ಸಿಲುಕಿದ ಸಮ್ಮಿಶ್ರ ಸರ್ಕಾರ

ಮತ್ತಿಬ್ಬರು ಶಾಸಕರು ರಾಜೀನಾಮೆ ನೀಡಿರುವ ಬೆನ್ನಲ್ಲೇ ರಾಜ್ಯದಲ್ಲಿನ ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರ ಈಗ ಸಂಕಷ್ಟಕ್ಕೆ ಸಿಲುಕಿದೆ.\

Last Updated : Jul 10, 2019, 05:54 PM IST
ಮತ್ತಿಬ್ಬರು ಶಾಸಕರ ರಾಜೀನಾಮೆ, ಸಂಕಷ್ಟಕ್ಕೆ ಸಿಲುಕಿದ ಸಮ್ಮಿಶ್ರ ಸರ್ಕಾರ title=
photo:ANI

ನವದೆಹಲಿ: ಮತ್ತಿಬ್ಬರು ಶಾಸಕರು ರಾಜೀನಾಮೆ ನೀಡಿರುವ ಬೆನ್ನಲ್ಲೇ ರಾಜ್ಯದಲ್ಲಿನ ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರ ಈಗ ಸಂಕಷ್ಟಕ್ಕೆ ಸಿಲುಕಿದೆ.\

ಒಂದೆಡೆ ಡಿ.ಕೆ.ಶಿವಕುಮಾರ್ ಮುಂಬೈನ ಹೋಟೆಲ್‌ವೊಂದರಲ್ಲಿ ಬೀಡುಬಿಟ್ಟಿರುವ ಬಂಡಾಯ ಶಾಸಕರನ್ನು ಭೇಟಿಯಾಗಲು ಪ್ರಯತ್ನ ನಡೆಸಿದ್ದರೆ. ಇನ್ನೊಂದೆಡೆಗೆ ಇಬ್ಬರು ಕಾಂಗ್ರೆಸ್ ಶಾಸಕರು ತಮ್ಮ ರಾಜೀನಾಮೆಯನ್ನು ಸ್ಪೀಕರ್‌ಗೆ ಸಲ್ಲಿಸಿದ್ದಾರೆ. ಈಗ ಶಾಸಕರಾದ ಎಂ ಟಿ ಬಿ ನಾಗರಾಜ್ ಮತ್ತು ಕೆ ಸುಧಾಕರ್ ಅವರ ರಾಜೀನಾಮೆಯಿಂದ ಬಂಡಾಯ ಶಾಸಕರ ಸಂಖ್ಯೆ 16 ಕ್ಕೆ ಏರಿದೆ.

ಇಂದು ರಾಜೀನಾಮೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಾಗರಾಜ್  'ನಾನು ಯಾವುದೇ ಮಂತ್ರಿ ಸ್ಥಾನ ಅಥವಾ ಯಾವುದನ್ನೂ ಬಯಸುವುದಿಲ್ಲ. ನಾನು ರಾಜಕೀಯದಿಂದ ಬೇಸರಗೊಂಡಿದ್ದೇನೆ" ಎಂದು ಹೇಳಿದ್ದಾರೆ. ಇನ್ನೊಂದೆಡೆಗೆ ಸ್ಪೀಕರ್ ರಮೇಶ್ ಕುಮಾರ್ ಮಾತನಾಡಿ " ಕಾನೂನು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುವುದಿಲ್ಲ. ಆದ್ದರಿಂದ ಇದು ಎಲ್ಲರಿಗೂ ಅನ್ವಯಿಸಲಿದೆ ಎಂದು ಶಾಸಕರು ಭೇಟಿಯಾದ ನಂತರ ಎಎನ್ಐ ಹೇಳಿದರು. 

Trending News