ಬೆಂಗಳೂರು: ವಿವಾಹಿತ ದಂಪತಿಗಳು ಮಕ್ಕಳನ್ನು ಪಡೆಯಲು ಬಯಸುವುದು ಒಂದು ಸಾಮಾನ್ಯ ಸಂಗತಿಯಾಗಿದೆ. ಆದರೆ ಇದೇ ವೇಳೆ, ಪ್ರತಿ ಪೋಷಕರು ತಮ್ಮ ಮಕ್ಕಳು ಆರೋಗ್ಯವಂತರಾಗಿರುವುದರ ಜೊತೆಗೆ ಸುಸಂಸ್ಕೃತ ಮತ್ತು ಅರ್ಹತೆ ಹೊಂದಿರಬೇಕೆಂದು ಬಯಸುತ್ತಾರೆ. ಜನನದ ನಂತರ ಮಗು ಹೇಗಿರುತ್ತದೆ, ಅವನ ಹಿಂದಿನ ಜನ್ಮದ ಕರ್ಮಗಳು, ತಾಯಿಯ ನಡವಳಿಕೆ ಮತ್ತು ಗರ್ಭಧಾರಣೆಯ ಸಮಯವು ತುಂಬಾ ಮುಖ್ಯವಾಗಿದೆ ಎಂದು ಶಾಸ್ತ್ರಗಳಲ್ಲಿ ಮತ್ತು ಗರುಡ ಪುರಾಣದಲ್ಲಿ ಹೇಳಲಾಗಿದೆ. ಇದನ್ನು ಗರ್ಭ ಸಂಸ್ಕಾರ ಎಂದೂ ಕೂಡ ಕರೆಯಲಾಗುತ್ತದೆ. (Spiritual News In Kannada)
ಗರ್ಭ ಸಂಸ್ಕಾರದಲ್ಲಿ, ಗರ್ಭಧಾರಣೆಯ ಸಮಯದಿಂದ ಹಿಡಿದು ಮಗುವಿನ ಜನನದವರೆಗೆ, ಅಂದರೆ ಸಂಪೂರ್ಣ 9 ತಿಂಗಳವರೆಗೆ ತಾಯಿಯ ಆರೋಗ್ಯ, ಆಹಾರ ಪದ್ಧತಿ, ದಿನಚರಿ ಮತ್ತು ಯೋಗ ಇತ್ಯಾದಿಗಳನ್ನು ವಿವರಿಸಲಾಗಿದೆ. ಅದೇ ರೀತಿ, 18 ಮಹಾಪುರಾಣಗಳಲ್ಲಿ ಒಂದಾದ ಗರುಡ ಪುರಾಣದಲ್ಲಿ, ಗರ್ಭಧಾರಣೆಯ ಸಮಯ ಮತ್ತು ನಿಯಮವನ್ನು ವಿವರಿಸಲಾಗಿದ್ದು, ಅವುಗಳನ್ನು ಅನುಸರಿಸಿ ದಂಪತಿಗಳು ಶ್ರೇಷ್ಠ ಮಗುವನ್ನು ಪಡೆಯಬಹುದು ಎಂದು ಹೇಳಲಾಗಿದೆ.
ಗರ್ಭಧಾರಣೆಯ ಈ ವಿಷಯಗಳನ್ನು ನೆನಪಿನಲ್ಲಿಡಿ
>> ಗರುಡ ಪುರಾಣದ ಪ್ರಕಾರ, ಮಹಿಳೆ ಋತುಮತಿಯಾದಾಗ, ಅವಳನ್ನು ಗೌರವದಿಂದ ನೋಡಿಕೊಳ್ಳಿ ಮತ್ತು ದಂಪತಿಗಳು ಈ ಅವಧಿಯಲ್ಲಿ ಬ್ರಹ್ಮಚರ್ಯವನ್ನು ಆಚರಿಸಬೇಕು. ಇದು ಅತ್ಯುತ್ತಮ ಮಗುವಿಗೆ ಜನ್ಮ ನೀಡಲು ಸಹಕರಿಸುತ್ತದೆ.
>> ಮುಟ್ಟಿನ ಶುದ್ಧೀಕರಣದ ಬಳಿಕ ಎಂಟನೇ ಮತ್ತು ಹದಿನಾಲ್ಕನೇ ದಿನವನ್ನು ಗರ್ಭಧಾರಣೆಗೆ ಉತ್ತಮವೆಂದು ಪರಿಗಣಿಸಲಾಗುತ್ತದೆ. ಇಂತಹ ಮಕ್ಕಳು ಕೇವಲ ಸಮರ್ಥರಾಗಿರದೆ ಸದ್ಗುಣಶೀಲರು, ಅದೃಷ್ಟವಂತರು ಮತ್ತು ಉತ್ತಮ ನಡವಳಿಕೆಯನ್ನು ಹೊಂದಿರುತ್ತಾರೆ.
>> ಮುಟ್ಟಿನ ಶುದ್ಧೀಕರಣದ ಬಳಿಕ ಮಹಿಳೆ ಏಳು ದಿನಗಳವರೆಗೆ ಗರ್ಭಿಣಿಯಾಗಬಾರದು. ಈ ದಿನಗಳಲ್ಲಿ ಗರ್ಭಿಣಿಯಾಗಿರುವುದು ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ದೈಹಿಕವಾಗಿ ದುರ್ಬಲರಾಗಿದ್ದಾರೆ ಎನ್ನಲಾಗಿದೆ.
>> ಶುಭ ದಿನಗಳ ಕುರಿತು ಹೇಳುವುದಾದರೆ, ಸೋಮವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರವನ್ನು ಧರ್ಮಗ್ರಂಥಗಳಲ್ಲಿ ಗರ್ಭಧಾರಣೆಗೆ ಅತ್ಯುತ್ತಮ ದಿನಗಳು ಎಂದು ಪರಿಗಣಿಸಲಾಗಿದೆ. ಇವುಗಳನ್ನು ಹೊರತುಪಡಿಸಿ ಪಂಚಾಂಗದ ಅಷ್ಟಮಿ, ದಶಮಿ ಮತ್ತು ಹನ್ನೆರಡನೆಯ ತಿಥಿಗಳೂ ಕೂಡ ಶುಭ ಎಂದು ಭಾವಿಸಲಾಗಿದೆ.
>> ಶುಭ ದಿನಗಳನ್ನು ಹೊರತುಪಡಿಸಿ, ಶುಭ ನಕ್ಷತ್ರಗಳೂ ಕೂಡ ಪ್ರಮುಖವೆಂದು ಪರಿಗಣಿಸಲಾಗುತ್ತದೆ. ಇವುಗಳಲ್ಲಿ ರೋಹಿಣಿ, ಮೃಗಶಿರ, ಹಸ್ತ, ಚಿತ್ರ, ಪುನರ್ವಸು, ಅನುರಾಧ, ಶ್ರಾವಣ, ಧನಿಷ್ಠ, ಶತಭಿಷ, ಉತ್ತರ, ಭಾದ್ರಪದ, ಉತ್ತರಾಷಾಢ ಮತ್ತು ಉತ್ತರ ಫಾಲ್ಗುಣಿ ನಕ್ಷತ್ರಗಳನ್ನು ಅತ್ಯಂತ ಶುಭ ನಕ್ಷತ್ರಗಳೆಂದು ಪರಿಗಣಿಸಲಾಗಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ