ʼಎರಡನೇ ಮಗುವಿನ ನಿರೀಕ್ಷೆಯುಲ್ಲಿರುವ ಅನುಷ್ಕಾʼ: ವದಂತಿಗಳಿಗೆ ಫುಲ್‌ಸ್ಟಾಪ್‌ ಇಟ್ಟ ಪತಿ ವಿರಾಟ್

Virat-Anushka: ಕೆಲವು ದಿನಗಳ ಹಿಂದೆ ನಟಿ ಅನುಷ್ಕಾ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಎರಡನೇ ಮಗುವಿನ ನಿರೀಕ್ಷೆಯಲಿದ್ದಾರೆಂಬ ವದಂತಿಗಳು ಹರಡಿದ್ದು, ಇದಕ್ಕೆ ಸದ್ಯ ವಿರಾಟ್‌ ರೂಮರ್ಸ್‌ಗಳಿಗೆ ಬ್ರೇಕ್‌ ಹಾಕಿದ್ದಾರೆ.

Written by - Zee Kannada News Desk | Last Updated : Oct 31, 2023, 04:25 PM IST
  • ಎರಡನೇ ಮಗುವಿನ ನಿರೀಕ್ಷೆಯಲಿದ್ದಾರೆಂಬ ವದಂತಿಗಳಿಗೆ ವಿರಾಟ್‌ ಬ್ರೇಕ್‌ ಹಾಕಿದ್ದಾರೆ
  • ವಿರಾಟ್‌ - ಅನುಷ್ಕಾ ತಮ್ಮ ಮೊದಲ ಮಗಳು ವಾಮಿಕಾಳನ್ನು ಜನವರಿ 2021 ರಲ್ಲಿ ಸ್ವಾಗತಿಸಿದರು.
  • ವಿರಾಟ್‌ ಅನುಷ್ಕಾಳಿಂದ ಜೀವನದ ಬಗ್ಗೆ ಹಲವಾರು ವಿಷಯಗಳನ್ನು ಕಲಿತಿದ್ದೇನೆ ಎಂದು ಹೇಳಿದರು
ʼಎರಡನೇ ಮಗುವಿನ ನಿರೀಕ್ಷೆಯುಲ್ಲಿರುವ ಅನುಷ್ಕಾʼ: ವದಂತಿಗಳಿಗೆ ಫುಲ್‌ಸ್ಟಾಪ್‌ ಇಟ್ಟ ಪತಿ ವಿರಾಟ್ title=

Bollywood Rumours: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ವದಂತಿಗಳ ನಡುವೆ, ಭಾರತೀಯ ಕ್ರಿಕೆಟಿಗ ತಮ್ಮ ಪತ್ನಿ ತಾಯ್ತನವನ್ನು ಹೇಗೆ ನಿಭಾಯಿಸಿದರು ಎನ್ನುವ ಬಗ್ಗೆ ತೆರೆದಿಟ್ಟಿದಾರೆ. ಈ ದಂಪತಿಗಳು ತಮ್ಮ ಮೊದಲ ಮಗು, ಮಗಳು ವಾಮಿಕಾಳನ್ನು  ಜನವರಿ 2021 ರಲ್ಲಿ ಸ್ವಾಗತಿಸಿ,  ಸಂದರ್ಶನವೊಂದರಲ್ಲಿ, ವಿರಾಟ್ ಅನುಷ್ಕಾ ಹೇಗೆ ತಮ್ಮ ಕರ್ತವ್ಯ ಮತ್ತು ಕೆಲಸವನ್ನು ಹೇಗೆ ನಿಭಾಯಿಸುತ್ತದ್ದರು ಎಂಬುದರ ಬಗ್ಗೆ ವಿಸ್ಮಯಗೊಂಡ್ಡು, ಮಗಳು ವಾಮಿಕಾ ಸ್ವಾಗತಿಸಿದ ನಂತರ ಸಿನಿಮಾ ಸಹ ಮಾಡಿದ್ದಾರೆ ಎಂದು ಹೇಳಿದರು.

ಸಂದರ್ಶನವೊಂದರಲ್ಲಿ ವಿರಾಟ್, “ಯಾವಾಗ ನಿಮ್ಮ ಜೀವನ ಸಂಗಾತಿ ತಾಯಿಯಾಗುದನ್ನು ನೀವು ನೋಡುತ್ತೀರ, ಆಗ ನೀವು ತಾಯಿಯ ಶಕ್ತಿಯನ್ನು ಅರಿತುಕೊಳ್ಳುತ್ತೀರ ಮತ್ತು ಅರ್ಥಮಾಡಿಕೊಳ್ಳುತ್ತೀರ. ಅನುಷ್ಕಾ ಎಲ್ಲವನ್ನೂ ನಿಭಾಯಿಸಿದ ರೀತಿ ಅದ್ಭುತವಾಗಿದ್ದು ಮತ್ತು ಬೆರಗುಗೊಳಿಸುತ್ತಿತ್ತು. ಅನುಷ್ಕಾ ಇದರ ನಡುವೆಯೇ ಇಡೀ ಚಿತ್ರವನ್ನು ಶೂಟ್ ಮಾಡಿದ್ದಾರೆಂದು, ವಿರಾಟ್ ಅನುಷ್ಕಾ ಅವರನ್ನು ಹೊಗಳಿದರು.ಹಾಗೆಯೇ  ಅನುಷ್ಕಾ-ವಿರಾಟ್ ತಮ್ಮ ಎರಡನೇ ಮಗುವಿನ ರೂಮರ್ಸ್‌ಗೆ ಫುಲ್‌ಸ್ಟಾಪ್‌ ಹಾಕಿದರು.

ಇದನ್ನು ಓದಿ: BBK 10: ಉಪ್ಪಿನಕಾಯಿ ಟೇಸ್ಟು ನಿಮಗೆ ಸಾಲ್ತಿಲ್ವಾ?.. ಟಿಶ್ಯೂ ಮೇಲೆ ಇಶಾನಿ ರಾಪ್‌ ಲಿರಿಕ್‌!

ವಿರಾಟ್‌ "ಕೆಲವು ಕಡೆ ಅನುಷ್ಕಾ ತನ್ನ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ಬಾರಿಯಂತೆ,  ಅವರು ಕೊನೆಯ ಹಂತದಲ್ಲಿ ಸುದ್ದಿಯನ್ನು ಪ್ರಪಂಚದೊಂದಿಗೆ ಹಂಚಿಕೊಳ್ಳುತ್ತಾರೆ, ಈ ಕಾರಣದಿಂದ ಅನುಷ್ಕಾ ನಟಿ ಇತ್ತೀಚೆಗೆ ಸಾರ್ವಜನಿಕ ಕಾಣಿಸಿಕೊಳುತ್ತಿರುವುದಿಲ್ಲ ಎಂದು ಸುದಿ ಹಬ್ಬಿದ್ದವು" ಎಂದು ಹೇಳಿದರು. ಹಾಗೆ “ಇದು ಕಾಕತಾಳೀಯವಲ್ಲ. ಊಹಾಪೋಹಗಳನ್ನು ತಪ್ಪಿಸಲು ಅವರು ಸಾರ್ವಜನಿಕರ ಕಣ್ಣುಗಳಿಂದ ದೂರ ಉಳಿದಿದ್ದಾರೆ" ಎಂದು ಸ್ಪಷ್ಟನೇ ನೀಡಿದ್ದಾರೆ.

ವಿರಾಟ್‌ ಅನುಷ್ಕಾಳಿಂದ ಜೀವನದ ಬಗ್ಗೆ ಹಲವಾರು ವಿಷಯಗಳನ್ನು ಕಲಿತಿದ್ದೇನೆ ಎಂದು  ಹೇಳಿದರು. "ಯಾರೂ ನಮ್ಮನ್ನು ನಂಬಲು ಅಥವಾ ನಾವು ಹೇಳುವುದನ್ನು ಕೇಳಲು ಸಿದ್ದರಿಲ್ಲದಾಗ ಸತ್ಯದ ಪರವಾಗಿ ನಿಲ್ಲುವುದು ಹೇಗೆ ಎಂದು ನಾನು ಅನುಷ್ಕಾಳಿಂದ ಕಲಿತಿದ್ದೇನೆ. - ಅವಳು ಯಾವಾಗಲೂ ನನಗೆ ಹೇಳುತ್ತಿದ್ದಳು, ನೀವು ಸತ್ಯದ ಪರವಾಗಿ ನಿಂತಿದ್ದರೆ ನೀವು ಯಾವುದರ ಬಗ್ಗೆಯೂ  ತೆಲೆಕೆಡಿಸಿಕೊಳ್ಳಬೇಕಾಗಿಲ್ಲ.”ಎಂದು  ಹೇಳಿದರು.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News