Komaki SE Dual Electric Scooter: ಭಾರತದ ಪ್ರಸಿದ್ಧ ದ್ವಿಚಕ್ರ ವಾಹನಗಳ ತಯಾರಕ ಕೊಮಾಕಿ ಈ ಹಬ್ಬದ ಋತುವಿನಲ್ಲಿ ಗ್ರಾಹಕರಿಗೆ ಬಂಪರ್ ಕೊಡುಗೆಯನ್ನು ಘೋಷಿಸಿದೆ. ನೀವು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಯೋಜಿಸುತ್ತಿದ್ದರೆ ಕೋಮಾಕಿ ತನ್ನ ಎಸ್ಈ ಡ್ಯುಯಲ್ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಭರ್ಜರಿ ಕೊಡುಗೆಯನ್ನು ನೀಡುತ್ತಿದೆ.
ವಾಸ್ತವವಾಗಿ, ಹಬ್ಬದ ಋತುವಿನಲ್ಲಿ ಲಾಭ ಪಡೆಯಲು ಮತ್ತು ಗ್ರಾಹಕರಿಗೆ ತಮ್ಮ ವ್ಯಾಪ್ತಿಯನ್ನು ಹೆಚ್ಚಿಸಲು, ಹಲವು ಕಂಪನಿಗಳು ಅನೇಕ ಹೊಸ ಹೊಸ ಕೊಡುಗೆಗಳು ಮತ್ತು ರಿಯಾಯಿತಿಗಳೊಂದಿಗೆ ಬರುತ್ತಿವೆ. ಆದರೆ ಈ ಹಬ್ಬದ ಋತುವಿನಲ್ಲಿ ನೀವು Komaki SE Dual ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದರೆ, ನಿಮಗೆ ಉಚಿತ ಬ್ಯಾಟರಿ ಮತ್ತು ಚಾರ್ಜರ್ ಸಿಗುತ್ತದೆ.
ಇದನ್ನೂ ಓದಿ- ವಿದ್ಯುತ್ ವೆಚ್ಚವಿಲ್ಲದೆ ಮನೆಯನ್ನು ಬೆಳಗಿಸಲು ಇಂದೇ ಖರೀದಿಸಿ ಸೌರಶಕ್ತಿ ಚಾಲಿತ ಎಲ್ಇಡಿ ಲೈಟ್
ಈ ಫೆಸ್ಟೀವ್ ಸೀಸನ್ ನಲ್ಲಿ ಕೋಮಾಕಿ ಕಂಪನಿಯು ತನ್ನ ಶಕ್ತಿಶಾಲಿ ಮತ್ತು ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್ ತನ್ನ ಎಸ್ಈ ಡ್ಯುಯಲ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಯಲ್ಲಿ ವಿಶೇಷ ಕೊಡುಗೆ ಪರಿಚಯಿಸಿದ್ದು, ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಿದಾಗ ಗ್ರಾಹಕರಿಗೆ ಉಚಿತ ಚಾರ್ಜರ್ ಮತ್ತು ಬ್ಯಾಟರಿ ಪ್ಯಾಕ್ ಕೂಡ ಸಿಗುತ್ತದೆ ಎಂದು ಹೇಳಿದೆ. ಇದಲ್ಲದೇ ಕಂಪನಿಯು ಮತ್ತೊಂದು ಹಬ್ಬದ ಉಡುಗೊರೆಯನ್ನು ಸಹ ನೀಡಿದ್ದು ಈ ಸ್ಕೂಟರ್ ಅನ್ನು 2 ಹೊಸ ಬಣ್ಣ ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ.
ಹೌದು, ಕೋಮಾಕಿ ಎಸ್ಈ ಡ್ಯುಯಲ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದಾಗ ಗ್ರಾಹಕರು ಒಂದು ಬ್ಯಾಟರಿಯ ಮೌಲ್ಯವನ್ನು ನೀಡಿ 2 ಬ್ಯಾಟರಿಗಳು ಮತ್ತು ಚಾರ್ಜರ್ಗಳ ಬೆಂಬಲವನ್ನು ಪಡೆಯಬಹುದಾಗಿದೆ.
ಇದನ್ನೂ ಓದಿ- ಭಾರತದಲ್ಲಿ ಈ ಪವರ್ಫುಲ್ ಬೈಕ್ ಖರೀದಿಯ ಮೇಲೆ ಸಿಗುತ್ತಿದೆ 5.25 ಲಕ್ಷ ರೂ.ಗಳ ಭರ್ಜರಿ ಡಿಸ್ಕೌಂಟ್!
ಎರಡು ಹೊಸ ಬಣ್ಣದ ಆಯ್ಕೆಗಳಲ್ಲಿ Komaki SE Dual:
ಕೋಮಾಕಿ ಕಂಪನಿಯಿಂದ ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಫೆಸ್ಟೀವ್ ಸೀಸನ್ ನಲ್ಲಿ ಕೋಮಾಕಿ ಈ ಎಲೆಕ್ಟ್ರಿಕ್ ಸ್ಕೂಟರ್ನ 2 ಹೊಸ ಬಣ್ಣ ರೂಪಾಂತರಗಳನ್ನು ಸಹ ಬಿಡುಗಡೆ ಮಾಡಿದೆ. ಇದು ಚಾರ್ಕೋಲ್ ಗ್ರೇ ಮತ್ತು ಸ್ಯಾಕ್ರಮೆಂಟೊ ಹಸಿರು ಬಣ್ಣವನ್ನು ಒಳಗೊಂಡಿದೆ. ಈ ಸ್ಕೂಟರ್ ಖರೀದಿಯಲ್ಲಿಯೂ ಸಹ ಕಂಪನಿಯು ಒಂದೇ ಬ್ಯಾಟರಿ ಬೆಲೆಯಲ್ಲಿ ಡಬಲ್ ಬ್ಯಾಟರಿ ಮತ್ತು ಡಬಲ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
Komaki SE Dual ವಿಶೇಷತೆ:
ಕೋಮಾಕಿ ಎಸ್ಈ ಡ್ಯುಯಲ್ ಎಲೆಕ್ಟ್ರಿಕ್ ಸ್ಕೂಟರ್ ಒಮ್ಮೆ ಫುಲ್ ಚಾರ್ಜ್ ಆದ ಬಳಿಕ ಸುಮಾರು 200 ಕಿಮೀ ವರೆಗೆ ಚಲಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.