ಆರ್‌ಎಸ್‌ಎಸ್‌ ಮಾನನಷ್ಟ ಮೊಕದ್ದಮೆ: ರಾಹುಲ್‌ ಗಾಂಧಿಗೆ ಬಿಗ್‌ ರಿಲೀಫ್‌

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಆರ್‌ಎಸ್‌ಎಸ್‌ನ ಧ್ರುತಿಮನ್‌ ಜೋಷಿ ಎಂಬುವ ವ್ಯಕ್ತಿ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

Last Updated : Jul 4, 2019, 12:18 PM IST
ಆರ್‌ಎಸ್‌ಎಸ್‌ ಮಾನನಷ್ಟ ಮೊಕದ್ದಮೆ: ರಾಹುಲ್‌ ಗಾಂಧಿಗೆ ಬಿಗ್‌ ರಿಲೀಫ್‌ title=
Pic Courtesy: ANI

ಮುಂಬೈ: ಆರ್‌ಎಸ್‌ಎಸ್‌ನ ಧ್ರುತಿಮನ್‌ ಜೋಷಿ ಎಂಬ ವ್ಯಕ್ತಿ ಸಂಸದ ರಾಹುಲ್ ಗಾಂಧಿ ವಿರುದ್ಧ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ವಿಚಾರವಾಗಿ ರಾಹುಲ್ ಗಾಂಧಿಗೆ ಬಿಗ್ ರಿಲೀಫ್ ಸಿಕ್ಕಿದೆ.

ತಮ್ಮ ಮೇಲೆ ಸಲ್ಲಿಸಲಾಗಿದ್ದ ಮಾನನಷ್ಟ ಮೊಕದ್ದಮೆ ವಿಚಾರಣೆಯ ಸಲುವಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಇಂದು ಮುಂಬೈಯ ಮೆಟ್ರೋ ಪೊಲಿಟಿಯನ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಹಾಜರಾಗಿದ್ದರು. ಇದೇ ವೇಳೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತೀರ್ಪು ನೀಡಿರುವ ನ್ಯಾಯಾಲಯ ರಾಹುಲ್‌ಗಾಂಧಿ ತಪ್ಪಿತಸ್ಥರಲ್ಲ ಎಂದು ಆದೇಶ ನೀಡಿದೆ.

ಗೌರಿ ಲಂಕೇಶ್‌ ಹತ್ಯೆ ವಿಚಾರದಲ್ಲಿ ರಾಹುಲ್‌ ಗಾಂಧಿ ಅವರು ಆರ್‌ಎಸ್‌ಎಸ್‌ ಮತ್ತು ಬಿಜೆಪಿ ವಿಚಾರದಲ್ಲಿ ನೀಡಿದ ಹೇಳಿಕೆ ಖಂಡಿಸಿ ಆರ್‌ಎಸ್‌ಎಸ್‌ನ ಧ್ರುತಿಮನ್‌ ಜೋಷಿ ಅವರು ರಾಹುಲ್‌ ಅವರೊಂದಿಗೆ ಸೋನಿಯಾ ಗಾಂಧಿ ಮತ್ತು ಸಿಪಿಐ(ಎಂ) ನಾಯಕ ಸೀತಾರಾಮ್‌ ಯಚೂರಿ ಅವರ ವಿರುದ್ಧವೂ ಕೇಸು ದಾಖಲಿಸಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ರಾಹುಲ್‌ ಗಾಂಧಿಯವರ ಪರ ವಕೀಲರು ನ್ಯಾಯಾಲಯ ಮುಂದೆ ಚುನಾವಣಾ ಪ್ರಚಾರದಲ್ಲಿ ಆರೋಪ-ಪ್ರತ್ಯಾರೋಪಗಳನ್ನು ಮಾಡುವುದು ಸಹಜ. ಇದಲ್ಲದೇ, ರಾಹುಲ್‌ ಗಾಂಧಿಯವರು ಹೇಳಿರುವುದು ಆರ್‌ಎಸ್‌ಎಸ್‌ ಮನಸ್ಥಿತಿ ಉಳ್ಳವರು ಈ ರೀತಿ ಹತ್ಯೆ ಮಾಡಿರುವ ಸಂಭವ ಹೆಚ್ಚಿರುತ್ತದೆ ಎಂದು ವಾದಿಸಿದರಲ್ಲದೆ, ಇಲ್ಲಿ ಯಾವುದೇ ವ್ಯಕ್ತಿಯನ್ನು ಉಲ್ಲೇಖ ಮಾಡಿ ರಾಹುಲ್‌ ಗಾಂಧಿ ಹೇಳಿಕೆ ನೀಡಿರದ ಕಾರಣ ಈ ಕೇಸ್‌ ಅನ್ನು ಮುಂದುವರಿಸುವ ಅವಶ್ಯಕತೆ ಇಲ್ಲ ಎಂದು ತಮ್ಮ ವಾದ ಮಂಡಿಸಿದ್ದಾರೆ ಎನ್ನಲಾಗಿದೆ.

ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು, ರಾಹುಲ್ ಗಾಂಧಿ ಗೌರಿ ಲಂಕೇಶ್‌ ಹತ್ಯೆ ವಿಚಾರದಲ್ಲಿ ಯಾವೊಬ್ಬ ವ್ಯಕ್ತಿಯ ಮೇಲೆ ನಿರ್ದಿಷ್ಟ ಆರೋಪ ಮಾಡಿಲ್ಲ. ಹೀಗಾಗಿ ರಾಹುಲ್ ಗಾಂಧಿ ವಿರುದ್ಧ ಕೇಸು ದಾಖಲಿಸುವ ಯಾವುದೇ ನಿರ್ದಿಷ್ಟ ಗುರುತರ ಸಾಕ್ಷಿಗಳಿಲ್ಲದ ಕಾರಣ ಅವರನ್ನು ಕೇಸಿಗೆ ಸಂಬಂಧಪಟ್ಟಂತೆ ಆರೋಪ ಮುಕ್ತಗೊಳಿಸಿದೆ ಎಂದು ತೀರ್ಪು ನೀಡಿದ್ದಾರೆ.

ಮುಂಬೈ ನ್ಯಾಯಾಲಯದ ಹೊರಗೆ ಕಾಂಗ್ರೆಸ್ ಬೆಂಬಲಿಗರು...

 

Trending News