ವಿಜಯ ದಶಮಿ ಪ್ರಯುಕ್ತ ಮೈಸೂರಿನ ಬನ್ನಿ ಮಂಟಪ ಮೈದಾನದಲ್ಲಿ ಪಂಜಿನ ಕವಾಯಿತು ನಡೆಯಿತು.
ವಿಜಯ ದಶಮಿ ಪ್ರಯುಕ್ತ ಮೈಸೂರಿನ ಬನ್ನಿ ಮಂಟಪ ಮೈದಾನದಲ್ಲಿ ಪಂಜಿನ ಕವಾಯಿತು ನಡೆಯಿತು.ಇದೆ ಸಂದರ್ಭದಲ್ಲಿ ಕವಾಯಿತಿನ ಫೋಟೋಗಳನ್ನು ಹಂಚಿಕೊಂಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್ "ವಿಜಯ ದಶಮಿ ಪ್ರಯುಕ್ತ ಮೈಸೂರಿನ ಬನ್ನಿ ಮಂಟಪ ಮೈದಾನದಲ್ಲಿ ಇಂದು ನಡೆದ ಪಂಜಿನ ಕವಾಯತಿನಲ್ಲಿ ಕರ್ನಾಟಕ ಪೊಲೀಸರ ಪ್ರದರ್ಶನ, ಸಾಹಸ, ನೈಪುಣ್ಯತೆ ಅಂತಾರಾಷ್ಟ್ರೀಯ ಮಟ್ಟದ್ದಾಗಿತ್ತು.ಇದಕ್ಕಾಗಿ ಅವರನ್ನು ತುಂಬು ಹೃದಯದಿಂದ ಅಭಿನಂದಿಸುತ್ತೇನೆ.1998 ರಲ್ಲಿ ಉತ್ತರ ಕೊರಿಯಾದ ಪ್ಯೊಂಗ್ ಯಾಂಗ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಯುವ ಸಮ್ಮೇಳನದಲ್ಲಿ ನಾನು ಭಾಗವಹಿಸಿದ್ದೆ. ಇಂದಿನ ಕಾರ್ಯಕ್ರಮದ ಗುಣಮಟ್ಟ ಅಲ್ಲಿನ ವಿಶ್ವಮಟ್ಟದ ಕಾರ್ಯಕ್ರಮಕ್ಕೆ ಸರಿಸಾಟಿಯಾಗಿತ್ತು. ಆ ದಿನಗಳ ನೆನಪು ನನ್ನ ಕಣ್ಣ ಮುಂದೆ ಹಾದುಹೋಯಿತು ಎಂದು ಅವರು ಹಳೆಯ ದಿನಗಳನ್ನು ಸ್ಮರಿಸಿದ್ದಾರೆ.