ನವದೆಹಲಿ: ವಿಶ್ವಕಪ್ ಟೂರ್ನಿಯ ಅಂಗವಾಗಿ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಭಾರತದ ವಿರುದ್ಧ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 337 ರನ್ ಗಳಿಸಿದೆ.
Mohammed Shami completes his five-for ✋
It's his first five-wicket haul in ODIs 👏
He now has 13 wickets in three games at #CWC19
What an impact he's having 🔥#ENGvIND pic.twitter.com/m8AGmaNgKB
— Cricket World Cup (@cricketworldcup) June 30, 2019
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡವು ತನ್ನ ಟಾಸ್ ನಿರ್ಧಾರಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡಿತು. ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರರಾದ ಜೇಸನ್ ರಾಯ್ 66) ಹಾಗೂ ಜಾನಿ ಬೇರ್ ಸ್ಟೋವ್ (111) 160 ರನ್ ಗಳ ಮೊದಲ ವಿಕೆಟ್ ಜೊತೆಯಾಟದ ಇಂಗ್ಲೆಂಡ್ ತಂಡಕ್ಕೆ ಬೃಹತ್ ಮೊತ್ತ ಗಳಿಸಲು ನೆರವಾಯಿತು.
Ben Stokes' excellent 79 off 54 balls builds on Bairstow's 111 as England post 337/7 in a must-win game! Have they got enough?
Scores, stats and highlights of #ENGvIND on the #CWC19 app 👇
APPLE 🍎 https://t.co/VpYh7SIMyP
ANDROID 🤖 https://t.co/cVREQ16w2N pic.twitter.com/8MOEJlQlpI— ICC (@ICC) June 30, 2019
ತದನಂತರ ಬಂದಂತಹ ಜೋಯ ರೂಟ್ (44) ಬೆನ್ ಸ್ಟೋಕ್ ( 79) ಅವರು ಕೊನೆಯಲ್ಲಿ ತಂಡ 300 ರ ಗಡಿ ದಾಟುವಲ್ಲಿ ನೆರವಾದರು. ಭಾರತ ತಂಡದ ಪರವಾಗಿ ಮೊಹಮ್ಮದ್ ಶಮಿ ಐದು ವಿಕೆಟ್ ಗಳನ್ನು ತೆಗೆದುಕೊಳ್ಳುವ ಮೂಲಕ ಇಂಗ್ಲೆಂಡ್ ತಂಡದ ರನ್ ವೇಗಕ್ಕೆ ಕಡಿವಾಣ ಹಾಕಿದರು. ಜಸ್ಪ್ರೀತ್ ಬುಮ್ರಾ ಸ್ಟೋಕ್ ವಿಕೆಟ್ ಪಡೆಯುವುದಲ್ಲದೆ ರನ್ ವೇಗಕ್ಕೂ ಕಡಿವಾಣ ಹಾಕಿದರು.ಭಾರತದ ಪರ ಯಜುವೆಂದ್ರ ಚಹಾಲ್ 88 ರನ್ ನೀಡುವ ಮೂಲಕ ಅತಿ ದುಬಾರಿಯಾಗಿ ಪರಿಣಮಿಸಿದರು.