ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ 2017ರ ಫಲಿತಾಂಶ ಬಿಜೆಪಿ ಪಾಲಾಗುವಂತೆ ಕಾಣುತ್ತಿದೆ. ಬಿಜೆಪಿ 45 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆದರೆ ಕಾಂಗ್ರೆಸ್ 20 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದ್ದು, ಒಂದು ಸ್ಥಾನವನ್ನು ಮಾತ್ರ ಗೆದ್ದುಕೊಂಡಿದೆ.
ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಸಿಎಂ ಪ್ರೇಮ್ ಕುಮಾರ್ ಧುಮಾಲ್, ಆರಂಭದಲ್ಲಿ ಸುಜಾನ್ಫುರ್ ಕ್ಷೇತ್ರದಲ್ಲಿ ಹಿನ್ನಡೆ ಸಾಧಿಸಿದ್ದರಾದರೂ ಇದೀಗ ೫೦೦ ಮತಗಳ ಮುನ್ನಡೆ ಸಾಧಿಸಿದ್ದಾರೆ.
ಈ ರಾಜ್ಯದ ಮತದಾರರು ಪ್ರತಿ ಚುನಾವಣೆಯಲ್ಲಿ ವಿವಿಧ ಪಕ್ಷಗಳನ್ನು ಗೆಲ್ಲಿಸುವ ಪರಿಪಾಠ ಹೊಂದಿದ್ದಾರೆ. 68 ಕ್ಷೇತ್ರಗಳ ಮತಎಣಿಕೆಯು 48 ಮತ ಕೇಂದ್ರಗಳಲ್ಲಿ ಪ್ರಾರಂಭವಾದ ಎಣಿಕೆಯಲ್ಲಿ ಆರಂಭದಲ್ಲಿ ಬಿಜೆಪಿ 26 ಕ್ಷೇತ್ರಗಳಲ್ಲಿ ಮತ್ತು ಕಾಂಗ್ರೆಸ್ 21 ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿತ್ತು. ಇತ್ತೀಚಿನ ವರದಿಗಳ ಪ್ರಕಾರ ಬಿಜೆಪಿ ಮುನ್ನಡೆ ಸಾಧಿಸುವ ಮೂಲಕ ಕಾಂಗ್ರೆಸ್ನೊಂದಿಗೆ ಬಹಳ ಅಂತರ ಕಾಯ್ದುಕೊಂಡಿದೆ.
ಎಕ್ಸಿಟ್ ಸಮೀಕ್ಷೆಗಳ ಪ್ರಕಾರ ಈಗಿರುವ ಕಾಂಗ್ರೆಸ್ ಆಡಳಿತವನ್ನು ಬಿಜೆಪಿ ಪಾಲಾಗಲಿದೆ ಎನ್ನಲಾಗಿದೆ. ಆದರೆ ಈ ಉಉಹೆ ಅದೆಷ್ಟರ ಮಟ್ಟಿಗೆ ನಿಖರವಾಗಿದೆ? ವೀರಭದ್ರ ಸಿಂಗ್ ತನ್ನ ಪಕ್ಷ ಅಧಿಕಾರದಲ್ಲೇ ಇರುವಂತೆ ಮಾಡಲು ಪ್ರಯತ್ನಿಸುತ್ತಾರಾ ಅಥವಾ ಪ್ರೇಮ್ ಕುಮಾರ್ ಧುಮಾಲ್ ಐದು ವರ್ಷಗಳ ನಂತರ ಮತ್ತೆ ಆಗಮಿಸುತ್ತಾರಾ? ಎಂದು ಕಾದು ನೋಡಬೇಕಿದೆ. ಒಟ್ಟು 19 ಮಹಿಳಾ ಅಭ್ಯರ್ಥಿಗಳನ್ನೂ ಒಳಗೊಂಡಂತೆ 337 ಅಭ್ಯರ್ಥಿಗಳ ಭವಿಷ್ಯ ಇಂದು ಮಧ್ಯಾಹ್ನದೊಳಗೆ ಸ್ಪಷ್ಟವಾಗಲಿದೆ.