ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಸಿಕ್ಕಿರುವ ಕೋಟ್ಯಂತರ ರೂಪಾಯಿ ಹಣದ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಆರೋಪ-ಪ್ರತ್ಯಾರೋಪ ನಡೆಯುತ್ತಿದೆ. ಪಂಚ ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಹಣ ಸಂಗ್ರಹಿಸಿ ಕೊಡುತ್ತಿದೆ ಎಂದು ಬಿಜೆಪಿ ಆರೋಪ ಮಾಡಿದ್ರೆ, ಐಟಿ ದಾಳಿ ವೇಳೆ ಸಿಕ್ಕಿರುವ ಹಣ ಬಿಜೆಪಿಯವರಿಗೆ ಸೇರಿದ್ದು ಎಂದು ಕಾಂಗ್ರೆಸ್ ಹೇಳುತ್ತಿದೆ.
ಈ ಬಗ್ಗೆ ಬುಧವಾರ ಟ್ವೀಟ್ ಮಾಡಿರುವ ಬಿಜೆಪಿ, ‘ಕಾಂಗ್ರೆಸ್ಗೆ ಲಕ್ಷ್ಮಿ ಕಂಟಕ ಎದುರಾಗಿದೆ. ಪಂಚ ರಾಜ್ಯ ಚುನಾವಣೆಯ ಕಲೆಕ್ಷನ್ "ಲಕ್ಷ್ಮಿ" ಐಟಿ ಪಾಲಾಯ್ತ, ಬೆಳಗಾವಿಯಲ್ಲಿ "ಲಕ್ಷ್ಮಿ" ಜಗಳದಿಂದ ಲಕ್ಷ್ಮಿ ಕಂಟಕ ಎದುರಾಯ್ತು, ಅಂಬಿಕಾಪತಿ ಸಿಕ್ಕಿ ಬಿದ್ದ ನಂತರ ಕಾಂಗ್ರೆಸ್ಸಿನ "ಲಕ್ಷ್ಮಿ" ಪತಿಯರೆಲ್ಲಾ ಸ್ವಿಚ್ ಆಫ್, ತನ್ನ ಪಾಲಿನ "ಲಕ್ಷ್ಮಿ"ಗಾಗಿ ಸತೀಶ್ ಜಾರಕಿಹೊಳಿ ಹಠ ಹಿಡಿಯುವಂತಾಯಿತು ಮತ್ತು "ಲಕ್ಷ್ಮಿ" ಬೆನ್ನತ್ತಿ ಡಿ.ಕೆ.ಶಿವಕುಮಾರ್ ಬೆಳಗಾವಿಯಲ್ಲಿ ಠಿಕಾಣಿ ಹೂಡುವಂತಾಯಿತು. #ATMSarkaraದಲ್ಲಿ "ಭ್ರಷ್ಟಾಚಾರದ ಲಕ್ಷ್ಮಿ" ತಾಂಡವವಾಡುತ್ತಿರುವುದಕ್ಕೆ ಕನ್ನಡಿಗರ ಬದುಕು ದುಸ್ತರವಾಗಿದೆ’ ಎಂದು ಬಿಜೆಪಿ ಟೀಕಿಸಿದೆ.
“ಕಾಂಗ್ರೆಸ್ಗೆ ಲಕ್ಷ್ಮಿ ಕಂಟಕ”
✔️ ಪಂಚ ರಾಜ್ಯ ಚುನಾವಣೆಯ ಕಲೆಕ್ಷನ್ "ಲಕ್ಷ್ಮಿ" ಐಟಿ ಪಾಲಾಯ್ತು
✔️ ಬೆಳಗಾವಿಯಲ್ಲಿ "ಲಕ್ಷ್ಮಿ" ಜಗಳದಿಂದ ಲಕ್ಷ್ಮಿ ಕಂಟಕ ಎದುರಾಯ್ತು
✔️ ಅಂಬಿಕಾಪತಿ ಸಿಕ್ಕಿ ಬಿದ್ದ ನಂತರ ಕಾಂಗ್ರೆಸ್ಸಿನ "ಲಕ್ಷ್ಮಿ" ಪತಿಯರೆಲ್ಲಾ ಸ್ವಿಚ್ ಆಫ್
✔️ ತನ್ನ ಪಾಲಿನ "ಲಕ್ಷ್ಮಿ" ಗಾಗಿ ಸತೀಶ್ ಜಾರಕಿಹೊಳಿ ಹಠ…— BJP Karnataka (@BJP4Karnataka) October 18, 2023
ಇದನ್ನೂ ಓದಿ: ಇನ್ಮುಂದೆ ಕೈಗಾರಿಕಾ ಪ್ರದೇಶದಲ್ಲಿ ಲೋಡ್ ಶೆಡ್ಡಿಂಗ್ ಇರಲ್ಲ..!
‘ರಾಜ್ಯದ ಕಾಂಗ್ರೆಸ್ ಸರ್ಕಾರ ಪಂಚ ರಾಜ್ಯ ಚುನಾವಣೆಗಾಗಿ ಗುತ್ತಿಗೆದಾರರ ಬಳಿ ಕಲೆಕ್ಷನ್ ಮಾಡಿದ್ದ ಕೋಟಿ ಕೋಟಿ ಅಕ್ರಮ ಹಣವನ್ನು ಸಂಗ್ರಹಿಸಿಟ್ಟು ಐಟಿ ದಾಳಿಯಲ್ಲಿ ಸಿಕ್ಕಿ ಬಿದ್ದಿದ್ದು ಸಿಎಂ ಸಿದ್ದರಾಮಯ್ಯರ ಅತ್ಯಾಪ್ತ ಗುತ್ತಿಗೆದಾರ ಅಂಬಿಕಾಪತಿ ಮನೆಯಲ್ಲಿ. ಈಗ ಅವರು ಯಾರೋ ಗೊತ್ತಿಲ್ಲ, ಅದು ಯಾರದೋ ಮನೆಯಲ್ಲಿ ಸಿಕ್ಕ ಹಣವೆಂದು ಕಾಂಗ್ರೆಸ್ ನಾಟಕ ಆರಂಭಿಸಿದೆ. ಆ ಹಣ ಯಾರದ್ದೋ ಎಂದಾದರೆ, ಸಚಿವ ಕೆ.ಎನ್.ರಾಜಣ್ಣ ಹಾಗೂ ಶಾಸಕ ಶಿವಲಿಂಗೇಗೌಡ ಅವರು ಅಂಬಿಕಾಪತಿಯ ಬೆಂಬಲಕ್ಕೆ ನಿಂತಿರುವುದಾದರೂ ಏಕೆ?’ ಎಂದು ಬಿಜೆಪಿ ಪ್ರಶ್ನಿಸಿದೆ.
‘ಕಲೆಕ್ಷನ್ ದಂಧೆಯಲ್ಲಿ ಕಾಂಗ್ರೆಸ್ ಸಚಿವರು ನಿತ್ಯವೂ ಮಿಂದೇಳುತ್ತಿದ್ದಾರೆ. ನಾಡಿನ ಜನರಿಂದ ಲೂಟಿ ಮಾಡಿದ ಹಣದಲ್ಲಿ ಮಂತ್ರಿಗಳು ಹೇಗೆ ಮಜಾ ಉಡಾಯಿಸುತ್ತಿದ್ದಾರೆ ಎಂಬುದನ್ನು ಸಕ್ಕರೆ ಸಚಿವ ಶಿವಾನಂದ ಪಾಟೀಲರು ನೈಜ ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟಿದ್ದಾರೆ’ ಎಂದು ಬಿಜೆಪಿ ವಿಡಿಯೋವೊಂದನ್ನು ಹಂಚಿಕೊಂಡಿದೆ.
ಇದನ್ನೂ ಓದಿ: ನಾಡಹಬ್ಬ ದಸರಾ ಪ್ರಯುಕ್ತ ವಿಶೇಷ ರೈಲು ಸೇವೆ..!
ಕಾಂಗ್ರೆಸ್ನ ಪಾಲಿಗೆ ಕರ್ನಾಟಕ ಎಂದಿಗೂ ಮುಚ್ಚದ ATM.
ಆಗುವ ಕಲೆಕ್ಷನ್ನಲ್ಲಿ ಸೋರಿಕೆಯಾಗಿ ದೆಹಲಿಗೆ ಕಳಿಸುವುದರಲ್ಲಿ ಯಾವುದೇ ಕೊರತೆಯಾಗಬಾರದು ಎಂಬ ದೃಷ್ಟಿಯಿಂದ @siddaramaiah ಅವರ ಸರ್ಕಾರ ಪ್ರತಿ ಸಚಿವಾಲಯಕ್ಕೂ ತಿಂಗಳ ಕಲೆಕ್ಷನ್ ಟಾರ್ಗೆಟ್ ನಿಗದಿ ಮಾಡಿದೆ.#ATMSarkara#CongressLootsKarnataka pic.twitter.com/VqzhsgmpDK
— BJP Karnataka (@BJP4Karnataka) October 18, 2023
‘ಕಾಂಗ್ರೆಸ್ನ ಪಾಲಿಗೆ ಕರ್ನಾಟಕ ಎಂದಿಗೂ ಮುಚ್ಚದ ATM. ಆಗುವ ಕಲೆಕ್ಷನ್ನಲ್ಲಿ ಸೋರಿಕೆಯಾಗಿ ದೆಹಲಿಗೆ ಕಳಿಸುವುದರಲ್ಲಿ ಯಾವುದೇ ಕೊರತೆಯಾಗಬಾರದು ಎಂಬ ದೃಷ್ಟಿಯಿಂದ ಸಿದ್ದರಾಮಯ್ಯರ ಸರ್ಕಾರ ಪ್ರತಿ ಸಚಿವಾಲಯಕ್ಕೂ ತಿಂಗಳ ಕಲೆಕ್ಷನ್ ಟಾರ್ಗೆಟ್ ನಿಗದಿ ಮಾಡಿದೆ’ ಎಂದು ಬಿಜೆಪಿ ಕುಟುಕಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.