ವಿಜಯವಾಡ: ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಕುಟುಂಬಕ್ಕೆ ಒದಗಿಸಿದ್ದ ಜೆಡ್ + ಭದ್ರತೆಯನ್ನು ಈಗ ಕಡಿತಗೊಳಿಸಲಾಗಿದೆ. ಈಗ ಜೆಡ್ + ಬದಲಿಗೆ ನಾಲ್ಕು ಸಶಸ್ತ್ರ ಬಂದೂಕುಧಾರಿಗಳನ್ನು ನೀಡಲಾಗಿದೆ.
ಈಗ ಜಗನ್ ಮೋಹನ್ ರೆಡ್ಡಿ ನೇತೃತ್ವದ ರಾಜ್ಯ ಸರ್ಕಾರದ ನಿರ್ಧಾರದಿಂದ ಅಸಮಾಧಾನಗೊಂಡ ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕರು ಮಾಜಿ ಮುಖ್ಯಮಂತ್ರಿ ಮತ್ತು ಅವರ ಕುಟುಂಬಕ್ಕೆ ಈ ನಿರ್ಧಾರವನ್ನು ತಿಳಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು, ನಾಯ್ಡು ಮತ್ತು ಅವರ ಕುಟುಂಬ ದೇಶದಲ್ಲಿ ಇಲ್ಲದಿದ್ದಾಗ ತೆಗೆದುಕೊಳ್ಳಲಾಗಿದೆ ಎಂದು ಅವರು ಆರೋಪಸಿದರು. ಈ ತಿಂಗಳ ಆರಂಭದಲ್ಲಿ, ಚಂದ್ರಬಾಬು ನಾಯ್ಡು ಅವರ ಜೆಡ್ + ವರ್ಗದ ಭದ್ರತೆಯನ್ನು ರಾಜ್ಯ ಸರ್ಕಾರವು ಹಿಂತೆಗೆದುಕೊಂಡಿತು, ಇದಕ್ಕೆ ತೆಲುಗು ದೇಶಂ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸೋಲನ್ನು ಅನುಭವಿಸಿತು. 175 ಸ್ಥಾನಗಳಲ್ಲಿ ಅದು ಕೇವಲ 23 ಸ್ಥಾನಗಳನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ, ಆದರೆ ವೈಎಸ್ಸಿಆರ್ಪಿ 151 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದಿದೆ. ಇನ್ನು ವೈಎಸ್ಆರ್ ಕಾಂಗ್ರೆಸ್ ಪಕ್ಷವು ರಾಜ್ಯದ 25 ಲೋಕಸಭಾ ಸ್ಥಾನಗಳಲ್ಲಿ 22 ಸ್ಥಾನಗಳನ್ನು ಗೆದ್ದರೆ, ಟಿಡಿಪಿ ಕೇವಲ 3 ಸ್ಥಾನಗಳನ್ನು ಗಳಿಸಿದೆ.