ನವದೆಹಲಿ: ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಂಖ್ಯೆ ಹಾಗೂ ನಿವೃತ್ತಿ ವಯಸ್ಸು ಹೆಚ್ಚಿಸುವಂತೆ ಕೋರಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ಹಲವಾರು ವರ್ಷಗಳ ಕಾಲ ಬಾಕಿ ಇರುವ ಪ್ರಕರಣಗಳ ಬ್ಯಾಕ್ಲಾಗ್ ನ್ನು ತೆರವುಗೊಳಿಸಲು ಸಂವಿಧಾನದ ವಿಧಿ 128 ಮತ್ತು 224 ಎ ಅಡಿಯಲ್ಲಿ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಮತ್ತು ಹೈಕೋರ್ಟ್ ನ್ಯಾಯಾಧೀಶರ ಅಧಿಕಾರಾವಧಿ ಮತ್ತು ನಿವೃತ್ತಿ ವಯಸ್ಸನ್ನು ಹೆಚ್ಚಿಸಲು ಸಿಜೆಐ ಪ್ರಧಾನ ಮಂತ್ರಿ ಮೋದಿಗೆ ಮನವಿ ಮಾಡಿಕೊಂಡಿದ್ದಾರೆ.
ಈಗ ಈ ವಿಚಾರವಾಗಿ ಪ್ರಧಾನಿ ಮೋದಿಗೆ ಗಮನ ಸೆಳೆಯಲು ಸಿಜೆಐ ಮೂರು ಪತ್ರಗಳನ್ನು ಬರೆದಿದ್ದಾರೆ. ಸುಪ್ರೀಂ ಕೋರ್ಟ್ ನಲ್ಲಿ 58,669 ಪ್ರಕರಣಗಳು ಬಾಕಿ ಉಳಿದಿವೆ ಮತ್ತು ಹೊಸ ಪ್ರಕರಣಗಳ ಸಂಖ್ಯೆ ಅಧಿಕಗೊಳ್ಳುತ್ತಿರುವ ಕಾರಣ ನ್ಯಾಯಾಧೀಶರ ಕೊರತೆಯಿಂದಾಗಿ, ಕಾನೂನಿನ ಪ್ರಶ್ನೆಗಳನ್ನು ಒಳಗೊಂಡ ಪ್ರಮುಖ ಪ್ರಕರಣಗಳನ್ನು ನಿರ್ಧರಿಸಲು ಅಗತ್ಯವಾದ ಸಂವಿಧಾನ ಪೀಠಗಳು ರಚನೆಯಾಗುತ್ತಿಲ್ಲ ಎಂದು ಸಿಜೆಐ ತಿಳಿಸಿದ್ದಾರೆ.
"1988 ರಲ್ಲಿ, ಸುಮಾರು ಮೂರು ದಶಕಗಳ ಹಿಂದೆ ಸುಪ್ರೀಂಕೋರ್ಟ್ ನ್ಯಾಯಾಧೀಶರ ಶಕ್ತಿಯನ್ನು 18 ರಿಂದ 26 ಕ್ಕೆ ಹೆಚ್ಚಿಸಲಾಯಿತು, ಮತ್ತು ನಂತರ 2009 ರಲ್ಲಿ ಎರಡು ದಶಕಗಳ ನಂತರ, ವಿಲೇವಾರಿಯನ್ನು ತ್ವರಿತಗೊಳಿಸಲು ಸಿಜೆಐ ಸೇರಿದಂತೆ 31 ಕ್ಕೆ ಹೆಚ್ಚಿಸಲಾಯಿತು" ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ಪತ್ರದಲ್ಲಿ ವಿವರಿಸಿದ್ದಾರೆ.