ಕೇರಳದ ನೀರಿನ ಸಹಾಯಹಸ್ತಕ್ಕೆ 'ಸಾಕಾಗುವುದಿಲ್ಲ' ಎಂದ ತಮಿಳುನಾಡು ಸಿಎಂ

ತಮಿಳುನಾಡಿಗೆ ಕುಡಿಯುವ ನೀರು ಸರಬರಾಜು ಮಾಡುವ ಕೇರಳದ ಕಾರ್ಯವನ್ನು ಸ್ವಾಗತಿಸಿದ  ತಮಿಳುನಾಡಿನ ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಆದರೆ ಇಷ್ಟು ನೀರು ಸಾಕಾಗುವುದಿಲ್ಲ ಎಂದು ಹೇಳಿದ್ದಾರೆ. 

Last Updated : Jun 21, 2019, 05:36 PM IST
 ಕೇರಳದ ನೀರಿನ ಸಹಾಯಹಸ್ತಕ್ಕೆ 'ಸಾಕಾಗುವುದಿಲ್ಲ' ಎಂದ ತಮಿಳುನಾಡು ಸಿಎಂ   title=
ಸಾಂದರ್ಭಿಕ ಚಿತ್ರ

ನವದೆಹಲಿ: ತಮಿಳುನಾಡಿಗೆ ಕುಡಿಯುವ ನೀರು ಸರಬರಾಜು ಮಾಡುವ ಕೇರಳದ ಕಾರ್ಯವನ್ನು ಸ್ವಾಗತಿಸಿದ  ತಮಿಳುನಾಡಿನ ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಆದರೆ ಇಷ್ಟು ನೀರು ಸಾಕಾಗುವುದಿಲ್ಲ ಎಂದು ಹೇಳಿದ್ದಾರೆ. 

"ನಾನು ಕೇರಳ ಮುಖ್ಯಮಂತ್ರಿಗೆ ಧನ್ಯವಾದ ಹೇಳುತ್ತೇನೆ, ಆದರೆ 2 ಎಂಎಲ್ಡಿ (ದಿನಕ್ಕೆ ಮಿಲಿಯನ್ ಲೀಟರ್) ನೀರು ಸಾಕಾಗುವುದಿಲ್ಲ. ನಾವು ಪ್ರತಿದಿನ 525 ಎಂಎಲ್ಡಿ ನೀರನ್ನು (ಚೆನ್ನೈನಲ್ಲಿ) ಪೂರೈಸುತ್ತಿದ್ದೇವೆ ಮತ್ತು ಪ್ರತಿದಿನ 2 ಎಂಎಲ್ಡಿ ನೀರನ್ನು ನೀಡಬಹುದಾದರೆ, ಅದು ಜನರಿಗೆ ಉಪಯುಕ್ತವಾಗಿರುತ್ತದೆ "ಎಂದು  ಪಳನಿಸ್ವಾಮಿ ಹೇಳಿದರು.

ಮುಲ್ಲಾಪೇರಿಯಾರ್ ಅಣೆಕಟ್ಟಿನಲ್ಲಿ ನೀರನ್ನು ಪೂರ್ಣ ಮಟ್ಟಕ್ಕೆ ಸಂಗ್ರಹಿಸುವಲ್ಲಿ ಸಹಕಾರವನ್ನು ವಿಸ್ತರಿಸಬೇಕೆಂದು ಎಐಎಡಿಎಂಕೆ ಮುಖಂಡ  ಕೇರಳ ಸಿಎಂ ಪಿಣರಾಯಿ ವಿಜಯನ್ ಅವರನ್ನು ಒತ್ತಾಯಿಸಿದರು. ಮುಲ್ಲೈಪೆರಿಯಾರ್ ಅಣೆಕಟ್ಟು ನಲ್ಲಿ  152 ಅಡಿವರೆಗೆ ಸಂಗ್ರಹಿಸಬಹುದು ಎಂದು ಹೇಳಿದ್ದ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿ ಮಾತನಾಡಿದ ಅವರು  ಅವರು ಕೇರಳವು ನವೀಕರಣ ಪ್ರಯತ್ನಗಳನ್ನು ತಡೆದಿದೆ ಎಂದು ಆರೋಪಿಸಿದರು. 

ಥೇನಿ ಮತ್ತು ರಾಮನಾಥಪುರಂ ಸೇರಿದಂತೆ ಐದು ಜಿಲ್ಲೆಗಳ ಜನರು ತಮ್ಮ ಜೀವನೋಪಾಯಕ್ಕಾಗಿ ಮುಲ್ಲೈಪೆರಿಯಾರ್ ನೀರಿನ ಮೇಲೆ ಅವಲಂಬಿತರಾಗಿದ್ದರು. ಆದ್ದರಿಂದ ನಮಗೆ ಪ್ರತಿ ಹನಿ ನೀರು ಬೇಕು, ”ಎಂದು ಅವರು ಹೇಳಿದರು.ಚೆನ್ನೈನ ಪೂಂಡಿ, ಚೆಂಬರಂಬಕ್ಕಂ, ಶೋಲವರಂ ಮತ್ತು ರೆಡ್ ಹಿಲ್ಸ್ ಜಲಾಶಯಗಳು ಒಣಗಿ ಹೋಗಿದ್ದರೂ, ಸರ್ಕಾರ ಜನರಿಗೆ ನೀರು ಪೂರೈಸುತ್ತಿದೆ ಎಂದು ಹೇಳಿದರು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕಚೇರಿ ತಮಿಳುನಾಡಿಗೆ 20 ಲಕ್ಷ ಲೀಟರ್ ನೀರನ್ನು ಕಳುಹಿಸುವ ಪ್ರಸ್ತಾಪವನ್ನು ನೆರೆಯ ರಾಜ್ಯ ತಿರಸ್ಕರಿಸಿದೆ ಎಂದು ಹೇಳಿದ ನಂತರ ಪಳನಿಸ್ವಾಮಿಯ ಪ್ರತಿಕ್ರಿಯೆ ವ್ಯಕ್ತವಾಗಿದೆ.

"ನಮ್ಮ ಪ್ರಸ್ತಾಪಕ್ಕೆ ಪ್ರತಿಕ್ರಿಯೆಯಾಗಿ, ಪ್ರಸ್ತುತ ತಮಿಳುನಾಡಿಗೆ ಸಾಕಷ್ಟು ಪೂರೈಕೆ ಇದೆ ಮತ್ತು ಕೇರಳದಿಂದ ಹೆಚ್ಚುವರಿ ನೆರವು ಅಗತ್ಯವಿಲ್ಲ ಎಂದು ನಮಗೆ ತಿಳಿಸಲಾಗಿದೆ" ಎಂದು ಕೇರಳ ಸಿಎಂ ವಿಜಯನ್ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ .

  

 

Trending News