ನವದೆಹಲಿ: ಜಾಗತಿಕ ಉನ್ನತ ಶಿಕ್ಷಣ ಸಲಹಾ ಕ್ವಾಕ್ವೆರೆಲ್ಲಿ ಸೈಮಂಡ್ಸ್ (ಕ್ಯೂಎಸ್) ಸಿದ್ಧಪಡಿಸಿದ100 ಉನ್ನತ ವಿಶ್ವವಿದ್ಯಾಲಯಗಳ ಜಾಗತಿಕ ಪಟ್ಟಿಯಲ್ಲಿ ಸ್ಥಾನ ಪಡೆಯಲು ಯಾವುದೇ ಭಾರತೀಯ ವಿಶ್ವವಿದ್ಯಾಲಯಕ್ಕೆ ಸಾಧ್ಯವಾಗಿಲ್ಲ ಎನ್ನಲಾಗಿದೆ.ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳಾದ ಐಐಟಿ-ಬಾಂಬೆ, ಐಐಟಿ-ದೆಹಲಿ ಮತ್ತು ಐಐಎಸ್ಸಿ (ಬೆಂಗಳೂರು) ವಿಶ್ವದ ಅಗ್ರ 200 ವಿಶ್ವವಿದ್ಯಾಲಯಗಳಲ್ಲಿ ಸ್ಥಾನ ಪಡೆದಿವೆ.
ಐಐಟಿ-ಬಾಂಬೆ ಸತತ ಎರಡನೇ ವರ್ಷ ದೇಶದ ಅತ್ಯುತ್ತಮ ವಿಶ್ವವಿದ್ಯಾಲಯವಾಗಿ ಹೊರಹೊಮ್ಮಿದ್ದು, 2019 ರ ಕ್ಯೂಎಸ್ ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕದಲ್ಲಿ ಕಳೆದ ಸಲಕ್ಕಿಂತ ಹತ್ತು ಸ್ಥಾನಗಳನ್ನು ಹೆಚ್ಚಿಗೆ ಪಡೆದಿದೆ. ಇದಲ್ಲದೆ, ಈ ಬಾರಿ ಕ್ಯೂಎಸ್ ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕದ ಹದಿನಾರನೇ ಆವೃತ್ತಿಯಲ್ಲಿ ಇಪ್ಪತ್ಮೂರು ಭಾರತೀಯ ಸಂಸ್ಥೆಗಳು ಕಾಣಿಸಿಕೊಂಡಿವೆ. 23 ಭಾರತೀಯ ಸಂಸ್ಥೆಗಳಲ್ಲಿ ನಾಲ್ಕು ತಮ್ಮ ಸ್ಥಾನವನ್ನು ಗಮನಾರ್ಹವಾಗಿ ಸುಧಾರಿಸಿವೆ. ಈ ಬಾರಿ ಒಪಿ ಜಿಂದಾಲ್ ಗ್ಲೋಬಲ್ ಈ ವರ್ಷ ಕ್ಯೂಎಸ್ ವಿಶ್ವವಿದ್ಯಾಲಯಶ್ರೇಯಾಂಕದಲ್ಲಿ ಭಾರತದಿಂದ ಹೊಸದಾಗಿ ಪ್ರವೇಶ ಪಡೆದ ವಿವಿಯಾಗಿದೆ.
ಅಚ್ಚರಿ ಎಂದರೆ ಐಐಎಸ್ಸಿ ಬೆಂಗಳೂರು ಸಂಶೋಧನಾ ಪ್ರಭಾವಕ್ಕಾಗಿ ವಿಶ್ವದ ಎರಡನೇ ಅತ್ಯುತ್ತಮ ಸ್ಕೋರ್ ಅನ್ನು ಸಾಧಿಸಿದೆ, ಅಧ್ಯಾಪಕರ ಗಾತ್ರಕ್ಕೆ ಹೊಂದಿಸಲಾಗಿದೆ. ಪ್ರತಿ ಅಧ್ಯಾಪಕ ವೃಂದವನ್ನು ಮೆಟ್ರಿಕ್ಗೆ ಕ್ಯೂಎಸ್ನ ಉಲ್ಲೇಖಗಳಿಗಾಗಿ ಈ ಸಂಸ್ಥೆ 100/100 ಪರಿಪೂರ್ಣ ಸ್ಕೋರ್ ಗಳಿಸಿದೆ ಮತ್ತು ಐದು ವರ್ಷಗಳ ಅವಧಿಯಲ್ಲಿ 100,000 ಕ್ಕೂ ಹೆಚ್ಚು ಬಾರಿ ಅದರ ಸಂಶೋಧನೆಗಳು ಉಲ್ಲೇಖವಾಗಿವೆ ಎನ್ನಲಾಗಿದೆ.
ಜಾಗತಿಕವಾಗಿ, ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ನಂತರ ಸ್ಟ್ಯಾಂಡ್ಫೋರ್ಡ್ ವಿಶ್ವವಿದ್ಯಾಲಯ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯವು ವಿಶ್ವದ ಮೂರು ಉನ್ನತ ಶ್ರೇಣಿಯ 100 ವಿಶ್ವವಿದ್ಯಾಲಯಗಳಲ್ಲಿ ಸೇರಿವೆ.