Guru Vakri: 2023ರ ವರ್ಷಾಂತ್ಯದವರೆಗೆ ಈ ರಾಶಿಯವರಿಗೆ ಬಂಗಾರದ ಸಮಯ, ಕೈ ತುಂಬಾ ಹಣ

Guru Vakri: ಈ ತಿಂಗಳ ಮೊದಲ ವಾರದಿಂದ ತನ್ನ ಹಿಮ್ಮುಖ ಚಲನೆ ಆರಂಭಿಸಿರುವ ಬೃಹಸ್ಪತಿಯು ಕೆಲವು ರಾಶಿಯವರ ಜೀವನದಲ್ಲಿ ಭಾರೀ ಅದೃಷ್ಟವನ್ನು ಹೊತ್ತು ತರಲಿದ್ದಾನೆ ಎಂದು ಹೇಳಲಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

1 /6

ಜ್ಯೋತಿಷ್ಯ ಶಾಸ್ತ್ರದಲ್ಲಿ, ಪ್ರಗತಿ, ಕೀರ್ತಿಕಾರಕನೆಂದು ಪರಿಗಣಿಸಲ್ಪಟ್ಟಿರುವ ದೇವಗುರು ಬೃಹಸ್ಪತಿಯು ಸದ್ಯ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. 

2 /6

ಸೆಪ್ಟೆಂಬರ್ 04, 2023ರಿಂದ ಮೇಷ ರಾಶಿಯಲ್ಲಿ ಗುರುವಿನ ಹಿಮ್ಮುಖ ಚಲನೆ ಆರಂಭವಾಗಿದೆ ಮತ್ತು ಈ ವರ್ಷಾಂತ್ಯದವರೆಗೆ ಎಂದರೆ ಡಿಸೆಂಬರ್ 31, 2023ರವರೆಗೆ ಗುರು ಇದೇ ಸ್ಥಿತಿಯಲ್ಲಿ ಚಲಿಸಲಿದ್ದಾನೆ.   

3 /6

ಸುಮಾರು 12 ವರ್ಷಗಳ ಬಳಿಕ ಮೇಷ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿರುವ ಗುರುವು ಈ ಸಮಯದಲ್ಲಿ ಎಲ್ಲಾ ರಾಶಿಯವರ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಬೀರುತ್ತಾನೆ. ಆದರೂ, ಗುರು ಹಿಮ್ಮುಖ ಚಲನೆಯ ಪರಿಣಾಮವಾಗಿ ಕೆಲವು ರಾಶಿಯವರು ಈ ವರ್ಷಾಂತ್ಯದವರೆಗೆಗುರುವಿನ ವಿಶೇಷ ಆಶೀರ್ವಾದಕ್ಕೆ ಪಾತ್ರರಾಗಲಿದ್ದು, ಭರ್ಜರಿ ಧನ ಲಾಭವನ್ನು ಪಡೆಯುತ್ತಾರೆ, ಶ್ರೀಮಂತರಾಗುವ ಯೋಗವೂ ಇದೆ ಎಂದು ಹೇಳಲಾಗುತ್ತಿದೆ.  ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 

4 /6

ಸದ್ಯ ಸ್ವ ರಾಶಿಯಲ್ಲಿಯೇ ಹಿಮ್ಮುಖವಾಗಿ ಚಲಿಸುತ್ತಿರುವ ಗುರು ಮೇಷ ರಾಶಿಯವರಿಗೆ ವ್ಯಾಪಾರ-ವ್ಯವಹಾರದಲ್ಲಿ ಬಂಪರ್ ಲಾಭವನ್ನು ನೀಡಲಿದ್ದಾನೆ. ಇದಲ್ಲದೆ, ಉದ್ಯೋಗಿಗಳಿಗೂ ಪ್ರಗತಿಯ ಹೊಸ ಹಾದಿಯನ್ನು ತೆರೆಯಲಿದ್ದು ಸಂಪತ್ತಿನ ಹೊಳೆಯನ್ನೇ ಹರಿಸಲಿದ್ದಾನೆ. ಮನೆಯ ಹಿರಿಯರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿದೆ. 

5 /6

ಗುರುವಿನ ಹಿಮ್ಮುಖ ಚಲನೆಯು ಮಿಥುನ ರಾಶಿಯವರಿಗೆ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದೆ. ಈ ಸಮಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಳ್ಳುವವರಿಗೆ ಯಶಸ್ಸು ನಿಮ್ಮದಾಗಲಿದೆ. ಉದ್ಯೋಗಿಗಳಿಗೂ ಗುಡ್ ನ್ಯೂಸ್ ದೊರೆಯುವ ಸಾಧ್ಯತೆ ಇದೆ. 

6 /6

ವಕ್ರಿ ಗುರು ಕುಂಭ ರಾಶಿಯ ವ್ಯಾಪಾರಸ್ಥರಿಗೆ ಲಾಭವನ್ನು, ಉದ್ಯೋಗಸ್ಥರಿಗೆ ಬಡ್ತಿ ಯೋಗವನ್ನು ನೀಡಲಿದ್ದಾನೆ. ಹಣಕಾಸಿನ ಹೊಸ ಮೂಲಗಳು ಸೃಷ್ಟಿಯಾಗಲಿದ್ದು ಹೊಸ ಮನೆ, ಹೊಸ ವಾಹನ ಖರೀದಿಸುವ ಯೋಗವೂ ಇದೆ.  ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.