Apple iPhone 15: ನೀವು iPhone 15 ಖರೀದಿಸಲು ಹೊರಟಿದ್ದರೆ ಕೆಲವು ವಿಚಾರಗಳ ಬಗ್ಗೆ ಗಮನಹರಿಸಬೇಕು. ಇದರಲ್ಲಿ ಹಲವಾರು ಹೊಸ ವೈಶಿಷ್ಟ್ಯಗಳನ್ನು ನೀಡಲಾಗಿದೆ.
Apple iPhone 15: ನೀವು iPhone 15 ಖರೀದಿಸಲು ಹೊರಟಿದ್ದರೆ ಕೆಲವು ವಿಚಾರಗಳ ಬಗ್ಗೆ ಗಮನಹರಿಸಬೇಕು. ಇದರಲ್ಲಿ ಹಲವಾರು ಹೊಸ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಈ ವೈಶಿಷ್ಟ್ಯಗಳನ್ನು ಬಳಸುವ ಮೂಲಕ ನೀವು ನಿಮ್ಮ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸಬಹುದು ಮತ್ತು ಬೇರೆ ಜಗತ್ತನ್ನು ತಲುಪಬಹುದು. ಆದರೆ ನೀವು ಐಫೋನ್ 15 ಖರೀದಿಸುವ ಮುನ್ನ ಕಡ್ಡಾಯವಾಗಿ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನಷ್ಟದಿಂದ ಪಾರಾಗುವ ಕೆಲವು ವಿಷಯಗಳ ಬಗ್ಗೆ ನೀವು ತಿಳಿದಿರಬೇಕು. ಹಾಗಾದರೆ ಐಫೋನ್ 15 ಖರೀದಿಸುವ ಮೊದಲು ಈ ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಬೇಕು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.
ನೀವು ಐಫೋನ್ 15 ಖರೀದಿಸುತ್ತಿದ್ದರೆ ಅದರ ಚಾರ್ಜರ್ ಅನ್ನು ಕಂಪನಿಯಿಂದಲೇ ಖರೀದಿಸಬೇಕು. ಇಲ್ಲದಿದ್ದರೆ ನಕಲಿ ಚಾರ್ಜರ್ ನಿಮ್ಮ ಐಫೋನ್ಅನ್ನು ಹಾನಿಗೊಳಿಸುತ್ತದೆ.
ಐಫೋನ್ 15ರ ಹಿಂಭಾಗದ ಫಲಕವು ಗಾಜಿನಿಂದ ಮಾಡಲ್ಪಟ್ಟಿದೆ. ಇದು ನೆಲದ ಮೇಲೆ ಬಿದ್ದರೆ ಛಿದ್ರವಾಗಬಹುದು. ಹೀಗಾಗಿ ನೀವು ಇದಕ್ಕೆ ಬಲವಾದ ಸಿಲಿಕೋನ್ ಕೇಸ್ ಖರೀದಿಸಬೇಕು. ಇದರಿಂದ ಫೋನ್ಗೆ ಸಂಪೂರ್ಣ ರಕ್ಷಣೆ ದೊರೆಯುತ್ತದೆ.
ನಿಮ್ಮ ಫೋನ್ ಅನ್ನು ದೀರ್ಘಕಾಲದವರೆಗೆ ಹಾನಿಯಾಗದಂತೆ ಇರಿಸಲು ಬಯಸಿದ್ರೆ, ಅದರ ಕ್ಯಾಮೆರಾ ಲೆನ್ಸ್ಗೆ ಲೆನ್ಸ್ ಪ್ರೊಟೆಕ್ಟರ್ ಅನ್ನು ಕಂಪನಿಯಿಂದಲೇ ಪಡೆಯಬೇಕು. ಇದು ಕ್ಯಾಮೆರಾ ಲೆನ್ಸ್ನಲ್ಲಿ ಗೀರುಗಳನ್ನು ತಡೆಯುತ್ತದೆ ಮತ್ತು ಅದರ ಜೀವಿತಾವಧಿಯನ್ನು ಹೆಚ್ಚಿಸುತ್ತದೆ.
ಐಫೋನ್ 15ರ ಕ್ಯಾಮೆರಾ ತುಂಬಾ ಶಕ್ತಿಯುತವಾಗಿದೆ. ನೀವು ಫೋಟೋಗ್ರಫಿಯನ್ನು ಇಷ್ಟಪಡುತ್ತಿದ್ದರೆ ಫೋನ್ ಖರೀದಿಸುವಾಗ ನೀವು ಕಂಪನಿಯ ಟೆಂಪರ್ಡ್ ಗ್ಲಾಸ್ ಬಳಸಬೇಕು. ಫೋಟೊಗ್ರಫಿ ಮಾಡುವಾಗ ಫೋನ್ ಬಿದ್ದರೆ ಅದು ಡಿಸ್ಪ್ಲೇಗೆ ಹಾನಿ ಮಾಡುತ್ತದೆ.ಇದನ್ನು ಗಮನದಲ್ಲಿಟ್ಟುಕೊಂಡು ನೀವು ಯಾವಾಗಲೂ ಆಪಲ್ನ ಟೆಂಪರ್ಡ್ ಗ್ಲಾಸ್ ಅನ್ನೇ ಬಳಸಬೇಕು.
ನೀವು iPhone 15 ಖರೀದಿಸಬೇಕಾದ್ರೆ ಸ್ಟೋರೇಜ್ ಬಗ್ಗೆ ಹೆಚ್ಚು ಗಮನಹರಿಸಬೇಕು. ನೀವು ಹೆಚ್ಚು ಸ್ಟೋರೇಜ್ ಹೊಂದಿರುವ 128 GB ಮತ್ತು 256 GB ರೂಪಾಂತರವನ್ನೇ ಖರೀದಿಸಬೇಕು. ದೀರ್ಘಕಾಲದವರೆಗೆ ಐಫೋನ್ ಬಳಸಲು ಮತ್ತು ಸಾಕಷ್ಟು ಫೋಟೋಗ್ರಫಿ, ವಿಡಿಯೋ ತೆಗೆಯಲು ಇದು ನೆರವಾಗುತ್ತದೆ. ಹೀಗಾಗಿ ಕಡಿಮೆ ಸ್ಟೋರೇಜ್ ಹೊಂದಿರುವ ಫೋನ್ ಖರೀದಿಸುವುದು ನಿಮಗೆ ಸೂಕ್ತವಲ್ಲ.