/kannada/photo-gallery/shukra-gochar-laxmi-narayana-yoga-bless-this-zodiac-signs-with-huge-wealth-and-success-221344 Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು 221344

Babar Azam scolded teammates: ಸೆಪ್ಟೆಂಬರ್ 17 ಅಂದರೆ ನಾಳೆ ಏಷ್ಯಾಕಪ್ ಫೈನಲ್ ಫೈಟ್ ನಡೆಯಲಿದ್ದು, ಭಾರತ ಮತ್ತು ಶ್ರೀಲಂಕಾ ಟ್ರೋಫಿಗಾಗಿ ಕಾದಾಡಲಿದೆ. ಈ ಹಣಾಹಣಿಗೆ ಕೊಲಂಬೊದ ಆರ್ ಪ್ರೇಮದಾಸ್ ಮೈದಾನ ಸಾಕ್ಷಿಯಾಗಲಿದೆ.

ಇದನ್ನೂ ಓದಿ: ಅಕ್ಟೋಬರ್’ನಲ್ಲಿ ತೆರೆಗೆ ಬರಲಿದೆ ‘ಫೈಟರ್’: ವಿನೋದ್ ಪ್ರಭಾಕರ್ ಅಭಿನಯದ ಸಿನಿಮಾದ ಹಾಡು ಬಿಡುಗಡೆ

ಏಷ್ಯಾಕಪ್’ನಲ್ಲಿ ಅತಿ ಹೆಚ್ಚು ಬಾರಿ ಟ್ರೋಫಿ ಗೆದ್ದ ತಂಡವಾಗಿ ಭಾರತ ಮೊದಲ ಸ್ಥಾನದಲ್ಲಿದೆ. ಇನ್ನು ಮತ್ತೊಂದು ಬಾರಿ ವಿಜಯ ಬಾರಿಸಿ, ಇದೇ ದಾಖಲೆಯನ್ನು ಮುಂದುವರೆಸಿಕೊಂಡು ಹೋಗುವ ತವಕದಲ್ಲಿ ಟೀಂ ಇಂಡಿಯಾ. ಇನ್ನೊಂದೆಡೆ ಆರು ಟ್ರೋಫಿ ಗೆದ್ದಿರುವ ಶ್ರೀಲಂಕಾ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, 2023ರ ಏಷ್ಯಾಕಪ್ ಗೆದ್ದು ಭಾರತದ ಸರಿಸಮಾನಕ್ಕೆ ನಿಲ್ಲಲು ಹಾತೊರೆಯುತ್ತಿದೆ.

ಈ ಎಲ್ಲದರ ಮಧ್ಯೆ ವಿಡಿಯೋವೊಂದು ಹೊರಬಿದ್ದಿದೆ. ಇದು ಪಾಕಿಸ್ತಾನ ತಂಡದ ಆಟಗಾರರಿಗೆ ಸಂಬಂಧಿಸಿದ್ದಾಗಿದೆ. ಗುರುವಾರ ಅಂದರೆ ಸೆಪ್ಟೆಂಬರ್ 14ರಂದು ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ vs ಪಾಕಿಸ್ತಾನ ನಡುವಿನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಪಾಕಿಸ್ತಾನ ಎರಡು ವಿಕೆಟ್’​ಗಳ ಆಘಾತಕಾರಿ ಸೋಲು ಅನುಭವಿಸಿತು.

ಈ ಸೋಲಿನ ಮೂಲಕ ಸೂಪರ್-4 ನಿಂದಲೇ ಪಾಕಿಸ್ತಾನ ಹೊರಗುಳಿಯಿತು. ಫೈನಲ್’ನಲ್ಲಿ ಭಾರತದ ವಿರುದ್ಧ ಕಾದಾಡಿ ಟ್ರೋಫಿ ಗೆಲ್ಲಬೇಕು ಎಂದು ಭಾವಿಸಿದ್ದ ಪಾಕ್’ಗೆ ಆಘಾತವನ್ನುಂಟು ಮಾಡಿತ್ತು. ಇನ್ನು ಈ ಸೋಲಿಗೆ ಪ್ರಮುಖ ಕಾರಣವಾಗಿದ್ದು ಅಂತಿಮ ಹಂತದಲ್ಲಿ ಫೀಲ್ಡಿಂಗ್​’ನಲ್ಲಿ ಮಾಡಿದ ಎಡವಟ್ಟುಗಳು.

ಈ ಪಂದ್ಯದಲ್ಲಿ, ಮೊಹಮ್ಮದ್ ರಿಜ್ವಾನ್ ಮತ್ತು ಇಫ್ತಿಕರ್ ಅಹ್ಮದ್ ಹೊರತುಪಡಿಸಿ ಇತರೆ ಯಾವೊಬ್ಬ ಬ್ಯಾಟ್ಸ್’ಮನ್’ಗಳು ಉತ್ತಮವಾಗಿ ಆಡಲು ಸಾಧ್ಯವಾಗಲಿಲ್ಲ. ಇದರ ಜೊತೆಗೆ ಬೌಲರ್’ಗಳೂ ಕೂಡ ವಿಫಲರಾದರು. ಕಳಪೆ ಫೀಲ್ಡಿಂಗ್ ಕೂಡ ಪಾಕ್ ಸೋಲಿಗೆ ಪ್ರಮುಖ ಕಾರಣವಾಗಿತ್ತು.

 

ಶ್ರೀಲಂಕಾದ ಬ್ಯಾಟಿಂಗ್ ಸಮಯದಲ್ಲಿ, ಪಾಕ್ ಆಟಗಾರರು ಅನೇಕ ಕ್ಯಾಚ್‌’ಗಳನ್ನು ಕೈಚೆಲ್ಲಿದ್ದರು. ಓವರ್‌ ಥ್ರೋಗಳಲ್ಲಿ ಕೆಲವು ರನ್‌ ಕೂಡ ನೀಡಿದ್ದರು. ಈ ಎಲ್ಲಾ ಸನ್ನಿವೇಶಗಳಿಂದ ಕೋಪಗೊಂಡ ನಾಯಕ ಬಾಬರ್ ಅಜಂ ಆಟಗಾರರ ಮೇಲೆ ಕೂಗಾಡಿದ್ದಾರೆ. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಏಷ್ಯಾಕಪ್ ಫೈನಲ್‌ನಲ್ಲಿ ಶತಕ ಸಿಡಿಸಿದ ಬ್ಯಾಟ್ಸ್‌ಮನ್‌ಗಳು

ಶ್ರೀಲಂಕಾ ಗೆಲುವಿಗೆ ಕೊನೆಯ ಓವರ್​ನಲ್ಲಿ 8 ರನ್ ಬೇಕಾಗಿತ್ತು. ಈ ಸಂದರ್ಭದಲ್ಲಿ ಬೌಲಿಂಗ್ ಮಾಡಿದ್ದು ಝಮಾನ್ ಖಾನ್. ಕೊನೆಯ ಎಸೆತದಲ್ಲಿ 2 ರನ್ ಬೇಕಿದ್ದಾಗ ಸುಲಭವಾಗಿ ರನ್ ತೆಗೆದುಕೊಂಡ ಲಂಕಾ ಜಯ ಸಾಧಿಸಿ, ಫೈನಲ್ ಪ್ರವೇಶಿಸಿತು. ಈ ಸಂದರ್ಭದಲ್ಲಿ ಬೇಸರಗೊಂಡ ಪಾಕ್ ಆಟಗಾರರು ಮೈದಾನದಲ್ಲೇ ಕಣ್ಣೀರಿಟ್ಟರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Section: 
English Title: 
Watch: Pakistan Skipper Babar Azam scolded his own teammates: Players in tears on the field
News Source: 
Home Title: 

ತನ್ನದೇ ತಂಡದ ಆಟಗಾರರಗೆ ಬಾಯಿಗೆ ಬಂದಂತೆ ಬೈದ ಬಾಬರ್ ಅಜಂ! ಮೈದಾನದಲ್ಲೇ ಕಣ್ಣೀರಿಟ್ಟ ಪ್ಲೇಯರ್ಸ್

Watch: ತನ್ನದೇ ತಂಡದ ಆಟಗಾರರಗೆ ಬಾಯಿಗೆ ಬಂದಂತೆ ಬೈದ ಬಾಬರ್ ಅಜಂ! ಮೈದಾನದಲ್ಲೇ ಕಣ್ಣೀರಿಟ್ಟ ಪ್ಲೇಯರ್ಸ್
Caption: 
Babar Azam
Yes
Is Blog?: 
No
Tags: 
Facebook Instant Article: 
Yes
Highlights: 
  • ಏಷ್ಯಾಕಪ್’ನಲ್ಲಿ ಅತಿ ಹೆಚ್ಚು ಬಾರಿ ಟ್ರೋಫಿ ಗೆದ್ದ ತಂಡವಾಗಿ ಭಾರತ ಮೊದಲ ಸ್ಥಾನದಲ್ಲಿದೆ
  • ಪಾಕಿಸ್ತಾನ ಏಷ್ಯಾಕಪ್’ನಲ್ಲಿ ಆಘಾತಕಾರಿ ಸೋಲು ಅನುಭವಿಸಿತು.
  • ಈ ಸೋಲಿನ ಮೂಲಕ ಸೂಪರ್-4 ನಿಂದಲೇ ಪಾಕಿಸ್ತಾನ ಹೊರಗುಳಿಯಿತು
Mobile Title: 
ತನ್ನದೇ ತಂಡದ ಆಟಗಾರರಗೆ ಬಾಯಿಗೆ ಬಂದಂತೆ ಬೈದ ಬಾಬರ್ ಅಜಂ! ಮೈದಾನದಲ್ಲೇ ಕಣ್ಣೀರಿಟ್ಟ ಪ್ಲೇಯರ್ಸ್
Bhavishya Shetty
Publish Later: 
No
Publish At: 
Saturday, September 16, 2023 - 11:43
Created By: 
Bhavishya Shetty
Updated By: 
Bhavishya Shetty
Published By: 
Bhavishya Shetty
Request Count: 
1
Is Breaking News: 
No
Word Count: 
278