ಮೋದಿ ಎದುರಿಸುವುದು ಮಮತಾ ಬ್ಯಾನರ್ಜೀ, ನಾಯ್ಡುಗೆ ಕಷ್ಟ- ರಾಮದಾಸ್ ಅಥವಾಲೆ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತುಎನ್.ಚಂದ್ರಬಾಬು ನಾಯ್ಡು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣವಚನ ಕಾರ್ಯಕ್ರಮಕ್ಕೆ ಗೈರು ಆಗುವ ಕುರಿತಾಗಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ರಾಮ್ ದಾಸ್ ಅಥವಾಲೆ ಚುನಾವಣೆ ಫಲಿತಾಂಶದ ನಂತರ ಅವರಿಬ್ಬರಿಗೂ ಈಗ ಮೋದಿ ಎದುರಿಸುವುದು ಕಷ್ಟವಾಗಿರಬಹುದು ಎಂದು ಹೇಳಿದರು.

Last Updated : May 30, 2019, 02:20 PM IST
ಮೋದಿ ಎದುರಿಸುವುದು ಮಮತಾ ಬ್ಯಾನರ್ಜೀ, ನಾಯ್ಡುಗೆ ಕಷ್ಟ- ರಾಮದಾಸ್ ಅಥವಾಲೆ title=
file photo

ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತುಎನ್.ಚಂದ್ರಬಾಬು ನಾಯ್ಡು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣವಚನ ಕಾರ್ಯಕ್ರಮಕ್ಕೆ ಗೈರು ಆಗುವ ಕುರಿತಾಗಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ರಾಮ್ ದಾಸ್ ಅಥವಾಲೆ ಚುನಾವಣೆ ಫಲಿತಾಂಶದ ನಂತರ ಅವರಿಬ್ಬರಿಗೂ ಈಗ ಮೋದಿ ಎದುರಿಸುವುದು ಕಷ್ಟವಾಗಿರಬಹುದು ಎಂದು ಹೇಳಿದರು.

"ಮಮತಾ ಮತ್ತು ಚಂದ್ರಬಾಬು ನಾಯ್ಡು ಅವರು ತಮ್ಮ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ಮೋದಿಯ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಮಮತಾ ಮೋದಿ ಅವರನ್ನು ಮತ್ತು ಅಮಿತ್ ಷಾ ಗುಂಡಾ ಎಂದು ಕರೆದಿದ್ದಾರೆ.ಆದರೆ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದನಂತರ ಅವರು ಪ್ರಧಾನಮಂತ್ರಿ ಮತ್ತು ಇತರರನ್ನು ಎದುರಿಸುವದು ಕಷ್ಟವಾಗಬಹುದು" ಎಂದು ರಾಮ್ ದಾಸ್ ಅಥವಾಲೆ ಎಎನ್ಐಗೆ ತಿಳಿಸಿದರು.

 ಬುಧುವಾರದಂದು ಮಮತಾ ಬ್ಯಾನರ್ಜೀ ಅವರು ಮೋದಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ನಿರಾಕರಿಸಿದ್ದರು. ಪಶ್ಚಿಮಬಂಗಾಳದ ರಾಜಕೀಯ ಹಿಂಸಾಚಾರದಲ್ಲಿ ಮೃತಪಟ್ಟ ಕುಟುಂಬಗಳನ್ನು ಕೂಡ ಪ್ರಧಾನಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಹ್ವಾನಿಸಿದ ಹಿನ್ನಲೆಯಲ್ಲಿ ಮಮತಾ ಕೊನೆ ಕ್ಷಣದಲ್ಲಿ ಆಹ್ವಾನವನ್ನು ನಿರಾಕರಿಸಿದರು ಎನ್ನಲಾಗಿದೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ರಾಜೀನಾಮೆ ಕುರಿತು ಮಾತನಾಡಿದ ಅವರು, "ಇದು ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ವಿಷಯವಾಗಿದೆ ಆದರೆ ರಾಹುಲ್ ಗಾಂಧಿ ಅವರನ್ನು ಪಕ್ಷದ ಅಧ್ಯಕ್ಷರಾಗಿ ನೋಡಬೇಕೆಂದು ನಾವು ಬಯಸುತ್ತೇವೆ. ಅದೆಲ್ಲವನ್ನು ಅವರ ಪಕ್ಷದವರು ನಿರ್ಧರಿಸಬೇಕೆಂದು ಹೇಳಿದರು.

Trending News