ಶ್ರಾವಣ ಸೋಮವಾರದಂದು ಈ ಮಂತ್ರ ಪಠಿಸಿದರೆ ದುರಾದೃಷ್ಟವೇ ಅದೃಷ್ಟವಾಗುವುದು: ಸದಾ ಕಷ್ಟದಿಂದ ಮುಕ್ತಿ ನೀಡುವ ಮಹಾದೇವ!

Lord Shiva Puja Niyam on Monday: ಶಿವನನ್ನು ದೇವಾನುದೇವ ಎಂದು ಕರೆಯಲಾಗುತ್ತದೆ. ಸ್ವಭಾವತಃ ಮುಗ್ಧ ದೈವ, ಭಕ್ತರು ಮನಸ್ಸಿಟ್ಟು ಕೋರಿದರೆ ಮೀನಾಮೇಷ ಎಣಿಸದೆ ವರವನ್ನು ನೀಡುವ ದೇವರು ಎಂದೆಲ್ಲಾ ಹೇಳಲಾಗುತ್ತದೆ. ಇನ್ನು ಪುರಾಣದ ಪ್ರಕಾರ ಅನೇಕ ದೇವತೆಗಳು ಮತ್ತು ರಾಕ್ಷಸರು ಮಹಾದೇವನನ್ನು ನಂಬಿದವರೇ… ಅವನಿಂದ ಶಕ್ತಿಯನ್ನು ಪಡೆದವರೇ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

ಸನಾತನ ಧರ್ಮದಲ್ಲಿ ಸೋಮವಾರವನ್ನು ಶಿವನ ಆರಾಧನೆಯ ದಿನವೆಂದು ಪರಿಗಣಿಸಲಾಗಿದೆ. ಈ ದಿನದಂದು ಮಹಾದೇವನನ್ನು ಪೂಜಿಸುವುದರಿಂದ ಆತನ ವಿಶೇಷ ಆಶೀರ್ವಾದಗಳು ಲಭಿಸುತ್ತವೆ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ದಿನ ಶಿವನನ್ನು ಆಚರಿಸಲು 5 ವಿಶೇಷ ವಿಧಾನಗಳನ್ನು ಹೇಳಲಾಗಿದೆ. ಇದನ್ನು ಅಳವಡಿಸಿಕೊಂಡರೆ ಆರೋಗ್ಯ, ಹಣ, ಮದುವೆ, ವೃತ್ತಿ ಮತ್ತು ಸಾಲಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಆ ಕ್ರಮಗಳೇನು ಎಂಬುದನ್ನು ತಿಳಿದುಕೊಳ್ಳೋಣ.

2 /7

ಮಂತ್ರ ಪಠಣ: ಜೀವನದಲ್ಲಿ ಹ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರು ಮಹಾದೇವನ ಆಶೀರ್ವಾದವನ್ನು ಪಡೆಯಲು ಸೋಮವಾರದಂದು 'ಓಂ ನಮಃ ಶಿವಾಯ' ಮಂತ್ರವನ್ನು ಪಠಿಸಬೇಕು. ಈ ಪರಿಹಾರವನ್ನು ಮಾಡುವುದರಿಂದ ವ್ಯಕ್ತಿಯ ಅದೃಷ್ಟದ ಬಾಗಿಲು ತೆರೆಯುತ್ತದೆ ಮತ್ತು ತೊಂದರೆಗಳು ಕೊನೆಗೊಳ್ಳುತ್ತವೆ ಎಂದು ನಂಬಲಾಗಿದೆ.

3 /7

ಈ ಬಣ್ಣದ ವಸ್ತುಗಳ ದಾನ: ಸನಾತನ ಧರ್ಮದಲ್ಲಿ ದಾನವನ್ನು ಜೀವನದ ಪ್ರಮುಖ ಅಂಶವೆಂದು ಪರಿಗಣಿಸಲಾಗಿದೆ. ಸೋಮವಾರದಂದು ಹಣ, ಬಟ್ಟೆ, ಆಹಾರ ಅಥವಾ ಇನ್ನಾವುದೇ ವಸ್ತುವನ್ನು ನಿರ್ಗತಿಕರಿಗೆ ದಾನ ಮಾಡುವುದರಿಂದ ದೇವತೆಗಳು ಸಂತೋಷಪಡುತ್ತಾರೆ ಎಂದು ಹೇಳಲಾಗುತ್ತದೆ.

4 /7

ದೇವಸ್ಥಾನದಲ್ಲಿ ರುದ್ರಾಕ್ಷ ದಾನ: ವೈವಾಹಿಕ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಹೋಗಲಾಡಿಸಲು ಸೋಮವಾರದಂದು ಶಿವನ ದೇವಸ್ಥಾನದಲ್ಲಿ ರುದ್ರಾಕ್ಷಿ ಮಾಲೆಯನ್ನು ದಾನ ಮಾಡಬೇಕು. ಈ ಪರಿಹಾರದಿಂದ ಜೀವನದಲ್ಲಿ ಪ್ರೀತಿಯ ಹರಿವು ಹೆಚ್ಚಾಗುತ್ತದೆ. ಕುಟುಂಬದಲ್ಲಿನ ಹಣದ ಸಮಸ್ಯೆಯೂ ದೂರವಾಗುತ್ತದೆ.

5 /7

ವಿಶೇಷ ಪೂಜೆ ಮಾಡಿ: ಧಾರ್ಮಿಕ ವಿದ್ವಾಂಸರ ಪ್ರಕಾರ, ಭೋಲೆನಾಥನ ಆಶೀರ್ವಾದ ಪಡೆಯಲು ಸೋಮವಾರ ವಿಶೇಷ ಪೂಜೆಯನ್ನು ಮಾಡಬೇಕು. ಈ ದಿನ ಶಿವನ ದೇವಸ್ಥಾನಕ್ಕೆ ತೆರಳಿ ಹಣ್ಣು, ಹೂವು, ಬಿಲ್ವಪತ್ರೆ ಮತ್ತು ಹಾಲನ್ನು ಶಿವನಿಗೆ ಅರ್ಪಿಸಬೇಕು.

6 /7

ಸೋಮವಾರ ಉಪವಾಸ: ಶಾಸ್ತ್ರಗಳ ಪ್ರಕಾರ, ಶಿವನ ಆಶೀರ್ವಾದ ಪಡೆಯಲು ಸೋಮವಾರದಂದು ಉಪವಾಸವನ್ನು ಆಚರಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ, ಶಂಕರ ಸಂತೃಪ್ತನಾಗಿ  ಕಷ್ಟ ನಿವಾರಿಸಿ ಸುಖ ವೃದ್ಧಿಸುತ್ತಾನೆ ಎಂದು ಹೇಳಲಾಗಿದೆ.

7 /7

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)