ಮೊದಲ ಬಾರಿಗೆ ಚುನಾವಣಾ ಕಣದಲ್ಲಿರುವ ಸನ್ನಿ ಡಿಯೋಲ್ ಜಯದ ಹಾದಿಯತ್ತ ದಾಪುಗಾಲಾಕುತ್ತಿದ್ದಾರೆ. ಮತ್ತೊಂದೆಡೆ ಉರ್ಮಿಳಾ ಮಾತೋಂಡ್ಕರ್ ಸೋಲಿನ ಅಂಚಿನಲ್ಲಿದ್ದಾರೆ.
ನವದೆಹಲಿ: ಬಹು ನಿರೀಕ್ಷಿತ ಲೋಕಸಭಾ ಚುನಾವಣೆ 2019ರ ಫಲಿತಾಂಶ ಇಂದು ಘೋಷಣೆಯಾಗಲಿದೆ. ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿ 542 ಲೋಕಸಭಾ ಕ್ಷೇತ್ರಗಳ ಪೈಕಿ 300ಕ್ಕೂ ಅಧಿಕ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ, 100ರ ಅಂಚು ದಾಟಲು ಕಾಂಗ್ರೆಸ್ ಪ್ರಯಾಸ ಪಡುತ್ತಿದೆ. ಇತರೆ ಪಕ್ಷಗಳು 109 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಬಾಲಿವುಡ್ ತಾರೆಯರು ಕಾಣಿಸಿಕೊಂಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಮತ್ತೆ ಬಾಲಿವುಡ್ನ ನಕ್ಷತ್ರಗಳು ಮತ್ತೆ ಕಾಣಿಸಿಕೊಂಡಿವೆ. ಮೊದಲ ಬಾರಿಗೆ ಚುನಾವಣಾ ಕಣದಲ್ಲಿರುವ ಸನ್ನಿ ಡಿಯೋಲ್ ಜಯದ ಹಾದಿಯತ್ತ ದಾಪುಗಾಲಾಕುತ್ತಿದ್ದಾರೆ. ಮತ್ತೊಂದೆಡೆ ಉರ್ಮಿಳಾ ಮಾತೋಂಡ್ಕರ್ ಸೋಲಿನ ಅಂಚಿನಲ್ಲಿದ್ದಾರೆ.
ಬಾಲಿವುಡ್ ನಟ ಸನ್ನಿ ಡಿಯೋಲ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಂಜಾಬಿನ ಗುರುದಾಸ್ಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದು, ಅವರು 68452 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
ಉತ್ತರ ಪ್ರದೇಶದ ಮಥುರಾದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಾಲಿವುಡ್ ತಾರೆ ಹೇಮಾ ಮಾಲಿನಿ 119833 ಮತಗಳ ಅಂತರದಿಂದ ಮುನ್ನುಗ್ಗುತ್ತಿದ್ದಾರೆ.
ಬಾಲಿವುಡ್ ನಟಿ ಮತ್ತು ಲೋಕಸಭಾ ಚುನಾವಣೆಯಲ್ಲಿ ಉತ್ತರ ಮುಂಬಯಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಉರ್ಮಿಳಾ ಮಾತೋಂಡ್ಕರ್ ಅವರು 179720 ಮತಗಳ ಹಿಂದೆ ನಿಂತಿದ್ದಾರೆ.
ಚಂಡೀಗಢ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಾಲಿವುಡ್ ನಟಿ ಕಿರಣ್ ಖೇರ್ 5790 ಮತಗಳ ಅಂತರದಿಂದ ಮುಂದಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ರಾಮ್ಪುರ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗ ಸ್ಪರ್ಧಿಸಿರುವ ನಟಿ ಜಯ ಪ್ರದಾ 69836 ಮತಗಳಿಂದ ಹಿಂದುಳಿದಿದ್ದಾರೆ.