ಭಯೋತ್ಪಾದನೆಗೆ ಹಣದ ನೆರವು, ಪಂಜಾಬ್’ನಲ್ಲಿ ಹತ್ಯೆಗೆ ಸಂಚು ಆರೋಪ: ವಿಮಾನ ನಿಲ್ದಾಣದಲ್ಲಿ NRI ವ್ಯಕ್ತಿ ಬಂಧನ

NRI News: ಪೊಲೀಸ್ ತಂಡಗಳು ಹರ್ಜೀತ್’ನ ನಿಕಟ ಸಹಚರ, ಅಮರಿಂದರ್ ಸಿಂಗ್ ಅಲಿಯಾಸ್ ಬಂಟಿ ಎಂಬಾತನನ್ನು ಸಹ ಖನ್ನಾದಲ್ಲಿರುವ ಆತನ ಮನೆಯಿಂದ ವಶಕ್ಕೆ ಪಡೆದುಕೊಂಡಿದೆ.

Written by - Bhavishya Shetty | Last Updated : Aug 4, 2023, 01:26 PM IST
    • ಸ್ಪೇನ್ ಮೂಲದ ಭಾರತೀಯ ಪ್ರಜೆ ಹರ್ಜೀತ್ ಸಿಂಗ್ ಬಂಧನ
    • ಭಯೋತ್ಪಾದನೆಗೆ ಹಣಕಾಸು ನೆರವು ಮತ್ತು ರಾಜ್ಯದಲ್ಲಿ ಹತ್ಯೆಗೆ ಸಂಚು ರೂಪಿಸಿದ್ದ ಆರೋಪಗಳಿವೆ
    • ಹರ್ಜೀತ್ ಸಿಂಗ್ ಸುಮಾರು ಒಂದು ತಿಂಗಳ ಹಿಂದೆ ಭಾರತಕ್ಕೆ ಬಂದಿದ್ದ.
ಭಯೋತ್ಪಾದನೆಗೆ ಹಣದ ನೆರವು, ಪಂಜಾಬ್’ನಲ್ಲಿ ಹತ್ಯೆಗೆ ಸಂಚು ಆರೋಪ: ವಿಮಾನ ನಿಲ್ದಾಣದಲ್ಲಿ NRI ವ್ಯಕ್ತಿ ಬಂಧನ title=
NRI News

Spain Based Indian Origin man arrest: ಪಂಜಾಬ್ ಪೊಲೀಸರ ರಾಜ್ಯ ವಿಶೇಷ ಕಾರ್ಯಾಚರಣೆ ಕೋಶ (ಎಸ್‌ಎಸ್‌ಒಸಿ) ಸ್ಪೇನ್ ಮೂಲದ ಭಾರತೀಯ ಪ್ರಜೆ ಹರ್ಜೀತ್ ಸಿಂಗ್ ಎಂಬಾತನನ್ನು ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಈತನ ಮೇಲೆ ಭಯೋತ್ಪಾದನೆಗೆ ಹಣಕಾಸು ನೆರವು ಮತ್ತು ರಾಜ್ಯದಲ್ಲಿ ಹತ್ಯೆಗೆ ಸಂಚು ರೂಪಿಸಿದ್ದ ಆರೋಪಗಳಿವೆ.

ಪೊಲೀಸ್ ತಂಡಗಳು ಹರ್ಜೀತ್’ನ ನಿಕಟ ಸಹಚರ, ಅಮರಿಂದರ್ ಸಿಂಗ್ ಅಲಿಯಾಸ್ ಬಂಟಿ ಎಂಬಾತನನ್ನು ಸಹ ಖನ್ನಾದಲ್ಲಿರುವ ಆತನ ಮನೆಯಿಂದ ವಶಕ್ಕೆ ಪಡೆದುಕೊಂಡಿದೆ.

ಇದನ್ನೂ ಓದಿ: ಪ್ರತಿದಿನ 3 ಲವಂಗವನ್ನು ಈ ಸಮಯಕ್ಕೆ ತಿಂದರೆ ಪುರುಷರ ಲೈಂಗಿಕ ಜೀವನ ಸುಧಾರಿಸುತ್ತದೆ..!

ಖಲಿಸ್ತಾನ್ ಲಿಬರೇಶನ್ ಫೋರ್ಸ್ (ಕೆಎಲ್‌ಎಫ್) ಗೆ ಸಂಬಂಧಿಸಿದ ವಿದೇಶಿ ಘಟಕಗಳು ನಿರ್ವಹಿಸುತ್ತಿದ್ದ ಐದು ಮಾಡ್ಯೂಲ್ ಸದಸ್ಯರನ್ನು ಬಂಧಿಸುವುದರೊಂದಿಗೆ ಟಾರ್ಗೆಟ್ ಕಿಲ್ಲಿಂಗ್ ಮಾಡ್ಯೂಲ್ ಅನ್ನು ಪೊಲೀಸರು ಭೇದಿಸಿದ ಒಂದು ವಾರದೊಳಗೆ ಈ ಬೆಳವಣಿಗೆ ಕಂಡುಬಂದಿದೆ.

ಗುರುದಾಸ್‌ ಪುರದ ಘನಶಾಂಪುರ ಗ್ರಾಮದವನಾದ ಹರ್ಜೀತ್ ಸಿಂಗ್ ಸುಮಾರು ಒಂದು ತಿಂಗಳ ಹಿಂದೆ ಭಾರತಕ್ಕೆ ಬಂದಿದ್ದ. ಈ ಬಳಿಕ ಭಯೋತ್ಪಾದನೆಗೆ ಹಣಕಾಸು ಒದಗಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ, ಅಷ್ಟೇ ಅಲ್ಲದೆ ಕೆಲವು ಗುರಿ ಹತ್ಯೆಗಳನ್ನು ಕಾರ್ಯಗತಗೊಳಿಸಲು ಯೋಜಿಸುತ್ತಿದ್ದ ಎಂಬ ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿ ಸಿಕ್ಕಿತ್ತು ಎಂದು ಮೊಹಾಲಿಯ AIG SSOC ಅಶ್ವನಿ ಕಪೂರ್ ಹೇಳಿದ್ದಾರೆ.

“ನವದೆಹಲಿಯಿಂದ ಅಂತರಾಷ್ಟ್ರೀಯ ವಿಮಾನದ ಮೂಲಕ ಸ್ಪೇನ್’ಗೆ ಓರ್ವ ತೆರಳುತ್ತಿದ್ದಾನೆ ಎಂಬ ಮಾಹಿತಿ ಸಿಕ್ಕಿತ್ತು. ಕ್ಷಿಪ್ರವಾಗಿ ಕಾರ್ಯನಿರ್ವಹಿಸಿದ ಪಂಜಾಬ್ ಪೊಲೀಸರು ತಕ್ಷಣವೇ ಆತನ ವಿರುದ್ಧ ಲುಕ್ ಔಟ್ ಸುತ್ತೋಲೆಯನ್ನು (ಎಲ್‌ಒಸಿ) ಹೊರಡಿಸಿದ್ದರು. ಕಡೆಗೂ ಮಂಗಳವಾರ ವಿಮಾನ ನಿಲ್ದಾಣದಲ್ಲಿ ಆತನನ್ನು ಬಂಧಿಸಲಾಯಿತು” ಎಂದು ಹೇಳಿದರು.

ಬಂಧಿತ ಆರೋಪಿ ಹರ್ಜೀತ್ ಸಿಂಗ್‌ ವಿಚಾರಣೆ ವೇಳೆ ಅನೇಕ ವಿಷಯಗಳನ್ನು ಬಾಯ್ಬಿಟ್ಟಿದ್ದಾನೆ. ಆತನ ಸಹಾಯಕ ಅಮರಿಂದರ್ ಅಲಿಯಾಸ್ ಬಂಟಿಗೆ ಹಣ ಸಹಾಯ ಮಾಡುವ ಮೂಲಕ ಭಯೋತ್ಪಾದಕ ಚಟುವಟಿಕೆಗಳನ್ನು ಸುಗಮಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾನೆ” ಎಂದು ಹೇಳಿದರು.

ಆರೋಪಿಗಳಿಬ್ಬರೂ ಸಾಮಾಜಿಕ ಜಾಲತಾಣಗಳ ಮೂಲಕ ಪರಸ್ಪರ ಸಂಪರ್ಕಕ್ಕೆ ಬಂದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆರೋಪಿ ಹರ್ಜೀತ್ ಸಿಂಗ್ ತನ್ನ ಸಹಚರ ಅಮರಿಂದರ್ ಬಂಟಿ ಎಂಬಾತನಿಗೆ ಸ್ಪೇನ್‌’ನಿಂದಲೇ ಧಾರ್ಮಿಕ ಮುಖಂಡರನ್ನು ಗುರಿಯಾಗಿಸಿ ಅವರನ್ನು ಹತ್ಯೆ ಮಾಡಲು ಹಲವು ಬಾರಿ ಹಣಕಾಸಿನ ನೆರವು ಕಳುಹಿಸಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಫ್ರೀ ಗ್ಯಾರಂಟಿ ಯೋಜನೆಗಳಿಗೆ ಕರ್ನಾಟಕ ಸರ್ಕಾರದ ಬಳಿ ಹಣವಿಲ್ಲ ಎಂಬ ಪ್ರಧಾನಿ ಹೇಳಿಕೆಗೆ ಸಿಎಂ ತಿರುಗೇಟು!

ಹರ್ಜೀತ್ ಸಿಂಗ್ ಕೆಎಲ್‌ಎಫ್‌’ಗೆ ಸಂಪರ್ಕ ಹೊಂದಿರುವ ಕೆಲವು ವಿದೇಶಿ ಮೂಲದ ಜನರ ಆಜ್ಞೆಯ ಮೇರೆಗೆ ಕೆಲಸ ಮಾಡುತ್ತಿದ್ದಾನೆ. ಸಿಖ್ಸ್ ಫಾರ್ ಜಸ್ಟೀಸ್‌’ನ ಚಟುವಟಿಕೆಗಳು ಸೇರಿದಂತೆ ಆಮೂಲಾಗ್ರ ವಿಷಯವನ್ನು ಉತ್ತೇಜಿಸಲು ಎರಡು ಫೇಕ್ ಫೇಸ್‌ಬುಕ್ ಖಾತೆಗಳನ್ನು ಬಳಸುತ್ತಿದ್ದಾನೆ ಎಂದು ತನಿಖೆಗಳು ಬಹಿರಂಗಪಡಿಸಿವೆ ಎಂದು ಕಪೂರ್ ಹೇಳಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News